ಮೇವಾತ್ (ಹರ್ಯಾಣ): ಗರ್ಭಿಣಿ ಮೇಕೆಯೊಂದರ ಮೇಲೆ 8 ಮಂದಿ ಅತ್ಯಾಚಾರ ಮಾಡಿರುವ ಹೇಯ ಘಟನೆ ಇಲ್ಲಿ ಸಂಭವಿಸಿದೆ. ಮಾದಕ ವಸ್ತು ಸೇವಿಸಿದ್ದರು ಎನ್ನಲಾದ ಈ 8 ಮಂದಿಯ ಕ್ರೂರ  ಕಾಮಾಂಧತೆಗೆ ಮೇಕೆ ಸತ್ತುಹೋಗಿದೆ. 

ಆಪಾದಿತರು ಪರಾರಿಯಾಗಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ. ನಗೀನಾ ಠಾಣಾ ವ್ಯಾಪ್ತಿಯಲ್ಲಿ ಜು.25ರಂದು ಮೇಕೆಯೊಂದನ್ನು ಕದ್ದ ಇವರು ಅದರ ಮೇಲೆ ಅತ್ಯಾಚಾರ ಎಸಗಿದರು ಎಂದು ಮೇಕೆ ಮಾಲೀಕ ಅಸಲು ಎಂಬಾತ ಜು. 26 ರಂದು ದೂರು ನೀಡಿದ್ದ. 3 ಆಪಾದಿತರ ಹೆಸರನ್ನು ಹರೂನ್, ಸಾವಕಾರ್ ಹಾಗೂ ಜಾಫರ್ ಎಂದು ಗುರ್ತಿಸಲಾಗಿದ್ದು, ಐವರ ಗುರುತು ಸಿಕ್ಕಿಲ್ಲ.