ನೂರಕ್ಕೆ ನೂರರಷ್ಟು ಕಾಂಗ್ರೆಸ್ ಅಧಿಕಾರಕ್ಕೆ : ವೆಂಕಟರಮಣಪ್ಪ
ಮಾಜಿ ಸಿಎಂ ಸಿದ್ದರಾಮಯ್ಯ ಸಿಎಂ ಅವಧಿಯಲ್ಲಿ ಜನಪರ ಆಡಳಿತ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಾಯಕತ್ವದ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್ ಅಲೆ ವ್ಯಾಪಕವಾಗಿದ್ದು ಚುನಾವಣೆ ಬಳಿಕ ನೂರಕ್ಕೆ ನೂರರಷ್ಟುಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಶಾಸಕ ವೆಂಕಟರಮಣಪ್ಪ ಮೆಚ್ಚಿಗೆ ವ್ಯಕ್ತಪಡಿಸಿದರು.
ಪಾವಗಡ : ಮಾಜಿ ಸಿಎಂ ಸಿದ್ದರಾಮಯ್ಯ ಸಿಎಂ ಅವಧಿಯಲ್ಲಿ ಜನಪರ ಆಡಳಿತ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಾಯಕತ್ವದ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್ ಅಲೆ ವ್ಯಾಪಕವಾಗಿದ್ದು ಚುನಾವಣೆ ಬಳಿಕ ನೂರಕ್ಕೆ ನೂರರಷ್ಟುಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಶಾಸಕ ವೆಂಕಟರಮಣಪ್ಪ ಮೆಚ್ಚಿಗೆ ವ್ಯಕ್ತಪಡಿಸಿದರು.
ಸೋಮವಾರ ನಗರದ ಸಾಯಿರಾಮ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಮಾನಂ ವೆಂಕಟಸ್ವಾಮಿ ಹಾಗೂ ಅವರ ಸಾವಿರಾರು ಸಂಖ್ಯೆಯ ಬೆಂಬಲಿಗರನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಂಡ ಬಳಿಕ ಮಾತನಾಡಿದರು.
ಮುಖಂಡ ಮಾನಂ ವೆಂಕಟಸ್ವಾಮಿ ಒಬ್ಬ ಜನಪರ ನಾಯಕರಾಗಿದ್ದು ಸದಾ ಬಡವರ ಸೇವೆಗೆ ಬದ್ಧರಾಗಿ ಕೆಲಸ ಮಾಡುತ್ತಾರೆ. ಪಕ್ಷದಲ್ಲಿ ಅವರಿಗೆ ಉತ್ತಮ ಸ್ಥಾನಮಾನ ನೀಡಲಿದ್ದು ಅವರು ನಮ್ಮ ಪಕ್ಷದ ಮುಖಂಡರಾಗಿ ಸೇವೆ ಸಲ್ಲಿಸಲಿದ್ದಾರೆ. ಇನ್ನೂ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಜೆಡಿಎಸ್, ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿದ್ದು ತಾಲೂಕು ಕಾಂಗ್ರೆಸ್‌ನತ್ತ ಜನ ಬೆಂಬಲ ನೀಡುತ್ತಿದ್ದಾರೆ. ನಿಮ್ಮ ಸೇವೆಗೆ ನಾನು ಹಾಗೂ ನನ್ನ ಪುತ್ರ ಬದ್ಧರಾಗಿದ್ದು ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯ ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಎಚ್.ವಿ.ವೆಂಕಟೇಶ್‌ರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ತಮ್ಮ ಅಧಿಕಾರದ ಅವಧಿಯಲ್ಲಿ ಜಾರಿಗೆ ತಂದ ಮನೆ ಮನೆಯ ತುಂಗಭದ್ರಾ ಕುಡಿವ ನೀರು, ನೀರಾವರಿಗೆ ಭದ್ರಾ, ಎತ್ತಿನಹೊಳೆ ಮತ್ತು ರೈಲ್ವೆಯೋಜನೆ ಜಾರಿ ಸೇರಿದಂತೆ ಅನೇಕ ರೀತಿಯ ಜನಪರವಾದ ಕಲ್ಯಾಣ ಕಾರ್ಯಕ್ರಮ ವಿವರಿಸಿ, ಅಧಿಕಾರದಿಂದ ಮಾತ್ರ ದೂರ. ಸೇವೆಯಿಂದಲ್ಲ. ತಾಲೂಕು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹೆಚ್ಚಿನ ಪ್ರಗತಿಗೆ ಸ್ಪಂದಿಸಿ ಕೆಲಸ ಮಾಡುವುದಾಗಿ ಹೇಳಿದರು.
ತಾಲೂಕು ಕಾಂಗ್ರೆಸ್ ಅಧ್ಯಕ್ಷ ಸುದೇಶ್‌ಬಾಬು ಮಾತನಾಡಿ, ವೆಂಕಟಸ್ವಾಮಿ ಕಾಂಗ್ರೆಸ್ ಸೇರ್ಪಡೆ, ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದಾಂತಾಗಿದ್ದು, ಅವರ ನಾಯತ್ವದ ಗುಣದಿಂದ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಅಭಿವೃದ್ಧಿ ಪರ ಚಿಂತನಶೀಲರಾಗಿದ್ದು ಕಾಂಗ್ರೆಸ್ ಅಭ್ಯರ್ಥಿ ಎಚ್.ವಿ.ವೆಂಕಟೇಶ್ ಗೆಲುವಿಗೆ ಹೆಚ್ಚು ಸಹಕಾರಿಯಾಗಲಿದೆ ಎಂದರು.
ನೂತನವಾಗಿ ಸೇರ್ಪಡೆಯಾದ ಮುಖಂಡರಾದ ಮುಖಂಡ ಮಾನಂ ವೆಂಕಟಸ್ವಾಮಿ ಮಾತನಾಡಿ, ಶಾಸಕ ವೆಂಕಟರಮಣಪ್ಪರ ಅಭಿವೃದ್ಧಿ ಕಾಳಜಿ, ವೆಂಕಟೇಶ್‌ರ ಸರಳತೆ ಮತ್ತು ನಾಯಕತ್ವದ ಹಿನ್ನಲೆಯಲ್ಲಿ ನಾನು ನನ್ನ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಯಾಗಿದ್ದೇವೆ. ಇನ್ನೂ ಮುಂದೆ ಪಕ್ಷದಲ್ಲಿ ಸಕ್ರಿಯರಾಗಿ ವೆಂಕಟೇಶ್ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದರು.
ಮುಖಂಡರಾದ ಪ್ರಮೋದ್‌ಕುಮಾರ್,ಎಂ.ಎಸ್.ವಿಶ್ವನಾಥ್ ಗಣ್ಯರು ಮಾತನಾಡಿ ಕಾಂಗ್ರೆಸ್ ಅಧಿಕಾರಕ್ಕೆ ತರುವಂತೆ ಮನವಿ ಮಾಡಿದರು.
ಇದೇ ವೇಳೆ ಪುರಸಭೆ ಸದಸ್ಯರಾದ ಬಾಲಸುಬ್ರಣ್ಯಂ, ಮಾನಂ ನಾಗರಾಜ್, ಪರಿಟಾಲ ವೆಂಕಟೇಶ್, ಪಿ.ಅಮಿರ್, ಗುಟ್ಟಹಳ್ಳಿ ಅಂಜಪ್ಪ ವೆಂಕಟೇಶ್‌ನಾಯ್ಡ್, ರಾಯಚರ್ಲು ರವಿ, ಬಳಸಮುದ್ರ ಸುದರ್ಶನ್‌ಬಾಬು, ನರಸಿಂಹ ತಲಾರಿ ನಾಗಾರ್ಜುನ, ಮಲ್ಲಿಕಾರ್ಜುನ ಬಾಲು,ನರಸಿಂಹ ವೆಂಕಟೇಶ್, ಆನಂದ ಅನಿಲ್ ಮಲ್ಲಿ, ನಾಗರಾಜ್ ಬಸವರಾಜ್ ಅನಿಲ್ ಹಾಗೂ ಅಪಾರ ಸಂಖ್ಯೆಯ ಬೆಂಬಲಿಗ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾಂಗ್ರೆಸ್‌ಗೆ ಅಧಿಕಾರ ನೀಡಿ
ತಿಪಟೂರು : ತಿಪಟೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ. ಷಡಕ್ಷರಿ ಮಂಗಳವಾರ ತಿಪಟೂರು ಗ್ರಾಮ ದೇವತೆ ಕೆಂಪಮ್ಮದೇವಿ, ಕಲ್ಲೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮುಖಂಡರಾದ ಲೋಕೇಶ್ವರ ನೇತೃತ್ವದಲ್ಲಿ ಸಾವಿರಾರು ಬೆಂಬಲಿಗರು, ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿ ಚುನಾವಣಾಧಿಕಾರಿ ಕಲ್ಪಶ್ರೀರವರಿಗೆ ನಾಮಪತ್ರ ಸಲ್ಲಿಸಿದರು.
ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜನತೆಯನ್ನುದ್ದೇಶಿಸಿ ಮಾತನಾಡಿ, ಸುಳ್ಳು ಭರವಸೆ, ಭ್ರಷ್ಟಾಚಾರ, ಕೋಮುವಾದಿ, ಜಾತಿವಾದಿ ಬಿಜೆಪಿ ಸರ್ಕಾರವನ್ನು ತೊಲಗಿಸಿ ರೈತರಿಗೆ ಸ್ಪಂದಿಸುವ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ರೈತರ ಆದಾಯವನ್ನು ಹೆಚ್ಚು ಮಾಡುತ್ತೇನೆಂದು ಹೇಳಿಕೊಂಡು ಮತ ಹಾಕಿಸಿಕೊಂಡ ಬಿಜೆಪಿ ಸರ್ಕಾರ ರೈತರ ಬದುಕನ್ನು ಸಂಕಷ್ಟಕ್ಕೀಡು ಮಾಡಿದ್ದಾರೆ. 20 ಸಾವಿರವಿದ್ದ ಕೊಬ್ಬರಿ 9 ಸಾವಿರಕ್ಕಿಳಿದಿದ್ದು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ 15ಸಾವಿರ ರು. ಬೆಂಬಲ ಬೆಲೆ ಘೋಷಣೆ ಮಾಡುತ್ತೇವೆ. ತುಮಕೂರು ಜಿಲ್ಲೆಯಲ್ಲಿ 11 ಕ್ಷೇತ್ರಗಳಲ್ಲಿ 10 ಕ್ಷೇತ್ರ ಕಾಂಗ್ರೆಸ್‌ಗೆ ಬರಲಿದ್ದು ಉತ್ತಮ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದ ಕಾರ್ಯಕರ್ತರು ಪಕ್ಷದ ಗ್ಯಾರಂಟಿ ಕಾರ್ಡ್‌ಗಳನ್ನು ಮನೆ ಮನೆಗಳಿಗೆ ತಲುಪಿಸುವ ಮೂಲಕ ಅಭ್ಯರ್ಥಿ ಕೆ. ಷಡಕ್ಷರಿಯವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿಕೊಡಬೇಕೆಂದು ಮನವಿ ಮಾಡಿದರು.
ಕಾಂಗ್ರೆಸ್ ಮುಖಂಡ ಲೋಕೇಶ್ವರ ಮಾತನಾಡಿ, ಕಾರ್ಯಕರ್ತರು ನಮ್ಮ ಅಭ್ಯರ್ಥಿ ಷಡಕ್ಷರಿಯವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವತ್ತ ಶ್ರಮಿಸಬೇಕೆಂದರು.