Asianet Suvarna News Asianet Suvarna News

ರಕ್ತದಾನದ ಬಗ್ಗೆ ಮೂಢನಂಬಿಕೆ, ತಪ್ಪು ಕಲ್ಪನೆಗಳಿವೆ: ಮಾಜಿ ಸಚಿವ ಸುಧಾಕರ್‌

ಆರೋಗ್ಯ ಕ್ಷೇತ್ರದಲ್ಲಿ ಆಗಾಧವಾದ ಬದಲಾವಣೆಗಳಾಗಿದ್ದರೂ ಸಾಕಷ್ಟು ಮಂದಿಯಲ್ಲಿ ರಕ್ತದಾನದ ಕುರಿತು ಇನ್ನೂ ಸಹ ಮೂಢನಂಬಿಕೆ, ತಪ್ಪು ಕಲ್ಪನೆಗಳಿವೆ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್‌ ಅಭಿಪ್ರಾಯಪಟ್ಟರು. 

There are superstitions and misconceptions about blood donation Says Dr K Sudhakar gvd
Author
First Published Jul 27, 2023, 8:43 PM IST

ಚಿಕ್ಕಬಳ್ಳಾಪುರ (ಜು.27): ಆರೋಗ್ಯ ಕ್ಷೇತ್ರದಲ್ಲಿ ಆಗಾಧವಾದ ಬದಲಾವಣೆಗಳಾಗಿದ್ದರೂ ಸಾಕಷ್ಟು ಮಂದಿಯಲ್ಲಿ ರಕ್ತದಾನದ ಕುರಿತು ಇನ್ನೂ ಸಹ ಮೂಢನಂಬಿಕೆ, ತಪ್ಪು ಕಲ್ಪನೆಗಳಿವೆ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್‌ ಅಭಿಪ್ರಾಯಪಟ್ಟರು. ನಗರ ಹೊರವಲಯದ ಸಿ.ವಿ. ವೆಂಕಟರಾಯಪ್ಪ ಶಿಕ್ಷಣ ಕೇಂದ್ರದಲ್ಲಿ ಬುಧವಾರ 27ನೇ ದತ್ತಿ ದಿನಾಚರಣೆ ಹಾಗೂ ಕೆವಿ ದತ್ತಿಗಳ ಸಂಸ್ಥಾಪಕ ಅಧ್ಯಕ್ಷ ಸಿ.ವಿ.ವೆಂಕಟರಾಯಪ್ಪರವರ 108ನೇ ಜಯಂತಿ ಪ್ರಯುಕ್ತ ಏರ್ಪಡಿಸಿದ್ದ ಸ್ವಯಂಪ್ರೇರಿತ ಬೃಹತ್‌ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ರಕ್ತದಾನಕ್ಕಿಂತ ಮಿಗಿಲಾದ ವತಿಯಿಂದ ದಾನವಿಲ್ಲ .

ಈ ಮುಂಚೆ ಅಪಘಾತ, ಶಸ್ತ್ರಚಿಕಿತ್ಸೆ, ಹೆರಿಗೆ ಇನ್ನಿತರೆ ಅನೇಕ ತುರ್ತು ಸಂದರ್ಭಗಳಲ್ಲಿ ರಕ್ತದ ಅಲಭ್ಯತೆಯಿಂದಲೇ ಸಾಕಷ್ಟು ಮಂದಿ ಮೃತಪಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ರಕ್ತ ಲಭ್ಯವಾಗುವುದರಿಂದ ಸಾಯುವವರ ಸಂಖ್ಯೆ ಕಡಿಮೆಯಾಗಿದೆ ಎಂದರು. ಜಿಲ್ಲಾಧಿಕಾರಿ ಪಿ.ಎನ್‌.ರವೀಂದ್ರ ಮಾತನಾಡಿ, ಜಿಲ್ಲೆಯು ರಕ್ತ ಸಂಗ್ರಹಣೆಯಲ್ಲಿ ಉತ್ತಮ ಸ್ಥಾನದಲ್ಲಿದೆ. ಇದಕ್ಕೆಲ್ಲಾ ರೆಡ್‌ಕ್ರಾಸ್‌ ಸೊಸೈಟಿ, ಅಧಿಕಾರಿಗಳು, ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ತೋರಿದ ಆಸಕ್ತಿ, ಶ್ರಮವೇ ಕಾರಣ. ಇದೆ ಕಾಳಜಿ, ಉತ್ಸಾಹವನ್ನು ಮುಂದುವರೆಸಿಕೊಂಡು ಹೆಚ್ಚು ರಕ್ತದಾನ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ, ಇತರಿಗೆ ಜೀವದಾನ ಮಾಡಿ ಎಂದರು.

ಚಿಕ್ಕಬಳ್ಳಾಪುರ ವೈದ್ಯಕೀಯ ಕಾಲೇಜಿಗೆ ‘ರಾಜಕೀಯ ಗ್ರಹಣ’: ಕಾಮಗಾರಿ ಇನ್ನೂ ಅಪೂರ್ಣ

ಕೆ.ವಿ.ಟ್ರಸ್ಟ್‌ ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಅಧ್ಯಕ್ಷ ಕೆ .ವಿ. ನವೀನ್‌ ಕಿರಣ್‌ ಮಾತನಾಡಿ, ಜೀವನ್ಮರಣ ಹೋರಾಟದಲ್ಲಿರುವ ರಕ್ತದ ಅವಶ್ಯಕತೆ ಇರುವ ರೋಗಿಗಳಿಗೆ ರಕ್ತದಾನ ಮಾಡುವುದು ಅತ್ಯಂತ ಶ್ರೇಷ್ಠವಾದದ್ದು. ಸಮಾಜದಲ್ಲಿನ ಪ್ರತಿಯೊಬ್ಬರು ತಮ್ಮ ತಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಲು ಯಾವುದಾದರೂ ಒಂದು ರಚನಾತ್ಮಕವಾದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂಬುದು ಕೆ.ವಿ. ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಸಂಸ್ಥಾಪಕ ಅಧ್ಯಕ್ಷರಾದ ಸಿ.ವಿ. ವೆಂಕಟರಾಯಪ್ಪನವರ ಸಂದೇಶವಾಗಿದ್ದು, ಈ ನಿಟ್ಟಿನಲ್ಲಿ 1997ರಿಂದ ನಿರಂತರವಾಗಿ ಪ್ರತಿ ವರ್ಷ ರಕ್ತದಾನ ಶಿಬಿರಗಳನ್ನು ಮಾಡಿಕೊಂಡು ಬರುತ್ತಿದೆ. ನಮ್ಮದೇ ದಾಖಲೆಯಾಗಿರುವ ಒಂದೇ ಶಿಬಿರದಲ್ಲಿ 1500ಕ್ಕೂ ಹೆಚ್ಚು ಯೂನಿಟ್‌ಗಳ ರಕ್ತ ಸಂಗ್ರಹಣೆಯನ್ನು ಈ ದಿನ ಮಾಡುವ ಗುರಿ ಹೊಂದಿದ್ದು, ಬೆಳಗ್ಗೆ ಎಂಟು ಗಂಟೆಗೆ ನೂರಾರು ಮಂದಿ ರಕ್ತದಾನಿಗಳು ಆಗಮಿಸಿದ್ದು ಇದು ಒಂದು ರಕ್ತದಾನದ ಕ್ರಾಂತಿಯಾಗಿದೆ ಎಂದರು.

ಕೆ.ವಿ.ದತ್ತಿ ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಸಿಬ್ಬಂದಿ ವರ್ಗ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು, ರಾಜಕೀಯ ಮುಖಂಡರುಗಳು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಜಿಲ್ಲಾ ಕೇಂದ್ರದ ಪತ್ರಕರ್ತರು, ಕೆ.ವಿ. ನವೀನ್‌ ಕಿರಣ್‌ರವರ ಅಭಿಮಾನಿ ವೃಂದ ಸ್ವಯಂ ಪ್ರೇರಿತರಾಗಿ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ್ದರು. ರಕ್ತ ನೀಡಿದ ಎಲ್ಲರಿಗೂ ರೆಡ್‌ಕ್ರಾಸ್‌ ಸೊಸೈಟಿಯಿಂದ ಅಭಿನಂದನಾ ಪತ್ರ ವಿತರಿಸಲಾಯಿತು. ರಕ್ತದಾನಿಗಳಿಗೆ ಸಂಘಟಕರು ಹಣ್ಣು, ತಂಪು ಪಾನೀಯ ನೀಡಿ ಉಪಚರಿಸಿದರು. 1500 ಯೂನಿಟ್‌ಗಳಷ್ಟುರಕ್ತ ಸಂಗ್ರಹವಾಯಿತು.

ಸರ್ಕಾರ ಸಂಘರ್ಷಕ್ಕಿಳಿದರೆ ಎದುರಿಸಲು ಸಿದ್ಧ: ಕೆಂಪಣ್ಣ ಎಚ್ಚರಿಕೆ

ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ ಬಿ.ಮುನಿಯಪ್ಪ,ಸಿ.ವಿ.ಲೀಲಾ ದೇವರಾಜ್‌, ಸಿ.ವಿ.ನಿರ್ಮಲಾ ಪ್ರಭು, ದತ್ತಿ ಆಡಳಿತಾಧಿಕಾರಿ ಡಾ. ಸಾಯಿಪ್ರಭು, ಮ್ಯಾನೇಜರ್‌ ಲಕ್ಷ್ಮಣ ಸ್ವಾಮಿ. ದತ್ತಿ ಹಿತೈಷಿಗಳಾದ ವಿಜಯಲಕ್ಷ್ಮಿ, ಇಮ್ರಾನ್‌ ಖಾನ್‌, ರಕ್ತಾದಾನ ಶಿಬಿರದ ನಿರ್ವಹಣೆ ಮುಖ್ಯಸ್ಥ ಹಾಗೂ ಕೆ.ವಿ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಆರ್‌.ವೆಂಕಟೇಶ್‌. ಕೆವಿ ಮತ್ತು ಪಂಚ ಗಿರಿದತ್ತಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಎನ್‌.ವೆಂಕಟೇಶ್‌. ಕೆವಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಶೇಖರ್‌, ದತ್ತಿಗಳಿಂದ ಕಾರ್ಯನಿರ್ವಹಿಸಲ್ಪಡುವ ಎಲ್ಲಾ ವಿದ್ಯಾ ಸಂಸ್ಥೆಗಳ ಮುಖ್ಯಸ್ಥರುಗಳು ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು, ಭೋಧಕೇತರ ವರ್ಗ, ವಿದ್ಯಾರ್ಥಿಗಳು,ಲಯನ್ಸ್‌ ಕ್ಲಬ್‌, ರೆಡ್‌ಕ್ರಾಸ್‌ ಸೊಸೈಟಿ ವೈದ್ಯರ ತಂಡ, ಸಿಬ್ಬಂದಿ ಇದ್ದರು.

Follow Us:
Download App:
  • android
  • ios