ಕಾಡಿನ ಸ್ನೇಹಿತರು ಯಾರು ಅಂದ್ರೆ ಮೂರೇ ಜನ. ಅರಣ್ಯ ಅಧಿಕಾರಿಗಳು, ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಅಗ್ನಿಶಾಮಕ ವಾಹನ. ಅಗ್ನಿಶಾಮಕ ವಾಹನವಂತು ಅರಣ್ಯದ ಬೆಸ್ಟ್ ಫ್ರೆಂಡ್. ಬಿಸಿಲ ಧಗೆಗೆ ಕಾಡಿಗೆ ಬೆಂಕಿ ಬಿದ್ದಾಗ ಮಳೆಯಾಗಲ್ಲ. 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಫೆ.20): ಕಾಡಿನ ಸ್ನೇಹಿತರು ಯಾರು ಅಂದ್ರೆ ಮೂರೇ ಜನ. ಅರಣ್ಯ ಅಧಿಕಾರಿಗಳು, ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಅಗ್ನಿಶಾಮಕ ವಾಹನ. ಅಗ್ನಿಶಾಮಕ ವಾಹನವಂತು ಅರಣ್ಯದ ಬೆಸ್ಟ್ ಫ್ರೆಂಡ್. ಬಿಸಿಲ ಧಗೆಗೆ ಕಾಡಿಗೆ ಬೆಂಕಿ ಬಿದ್ದಾಗ ಮಳೆಯಾಗಲ್ಲ. ಆದ್ರೆ, ಬೆಂಕಿಯ ಕೆನ್ನಾಲಿಗೆಯನ್ನ ಆರಿಸೋದಕ್ಕಾಗ್ಲಿ, ಕಾಡನ್ನ ರಕ್ಷಿಸೋದಕ್ಕಾಗ್ಲಿ, ಅಗ್ನಿಶಾಮಕ ವಾಹನವೇ ಬೆಸ್ಟ್ ಮೆಡಿಸನ್. ಕಾಡಿನ ಆಪ್ತಮಿತ್ರ. ಆದ್ರೆ, ಅರ್ಧಕರ್ಧ ಕಾಡೇ ಇರೋ ಕಾಫಿನಾಡಲ್ಲಿ ಇರೋ ಅಗ್ನಿಶಾಮಕ ವಾಹನಗಳ ಸಂಖ್ಯೆ ನೋಡುದ್ರೆ ಆಶ್ಚರ್ಯವಾಗುತ್ತೆ. ವಾಹನಗಳ ಕೊರತೆ ನಡುವೆಯೂ ಸಿಬ್ಬಂದಿಗಳು ಬೆಂಕಿ ನಂದಿಸುವ ಕೆಲಸ ಮಾಡುತ್ತಿದ್ದಾರೆ. 

2 ಕಡೆ ಬೆಂಕಿ ಬಿದ್ದರೆ ನಂದಿಸಲು ಠಾಣೆಯಲ್ಲಿ ವಾಹನವೇ ಇಲ್ಲ: ಕಾಫಿನಾಡು ಆಲ್ಮೋಸ್ಟ್ ಕಾಡಿನಜಿಲ್ಲೆ. ಹತ್ರತ್ರ ಅರ್ಧ ವರ್ಷಕ್ಕಿಂತ ಹೆಚ್ಚು ಮಳೆ ಸುರಿಯುತ್ತೆ. ಬೇಸಿಗೆಯಲ್ಲಿ ಬಿಸಿಲ ಧಗೆ-ಗಾಳಿಯ ವೇಗವೂ ಯತೇಚ್ಛವಾಗಿರುತ್ತೆ. ಕಾಡಿಗೆ ಬೆಂಕಿ ಬಿದ್ರಂತು ಕಥೆ ಮುಗೀತು. ಅರಣ್ಯ-ಅಗ್ನಿಶಾಮಕ ಸಿಬ್ಬಂದಿಗಳಿಗೆ ನರಕಯಾತನೆ. ಎಷ್ಟು ಆರಿಸಿದ್ರು ಗಾಳಿಗೆ ಬೆಂಕಿಯ ವೇಗ ಹೆಚ್ಚುತ್ತಲೇ ಇರುತ್ತೆ. ಜೊತೆಗೆ ಅಲ್ಲಿ ಬೆಂಕಿ ಬಿತ್ತು. ಇಲ್ಲಿ ಬೆಂಕಿ ಬಿತ್ತು ಹತ್ತಾರು ಫೋನು. ಒಂದಾದ ಮೇಲೆ ಒಂದು ಘಟನೆಯಾದ್ರೆ ಹೇಗೋ ಮ್ಯಾನೇಜ್ ಮಾಡ್ಬೋದು. 

ಚಿಕ್ಕಮಗಳೂರು: ಮಗಳ ಪ್ರೀತಿ ಮೆಚ್ಚಿ ಮದುವೆ ಮಾಡಿದ್ದಕ್ಕೆ ಅಪ್ಪ-ಅಮ್ಮನಿಗೆ ಬಹಿಷ್ಕಾರ

ಆದ್ರೆ, ಏಕಕಾಲದಲ್ಲಿ ಎರಡ್ಮೂರು ಕಡೆ ಬೆಂಕಿ ಬಿದ್ರೆ ಯಾವ್ದಾರ ಒಂದು ಜಾಗ ಮಾತ್ರ ಫುಲ್ ಹೋಗೇನೆ. ಯಾಕಂದ್ರೆ, ಯಾಕಂದ್ರೆ, ಕಾಡಿನ ತವರು ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾ ಕೇಂದ್ರದಲ್ಲಿ ಇರೋದು ಒಂದೇ ಒಂದು ಅಗ್ನಿಶಾಮಕ ವಾಹನ. ಇನ್ನೊಂದು ಇದೆ. 15 ವರ್ಷ ಆಯ್ತು ಅಂತ ಆ ಗಾಡಿ ಚೆನ್ನಾಗಿದ್ರು ಆರ್.ಸಿ. ಕ್ಯಾನ್ಸಲ್ ಆಗಿದೆ. ಸೋ ಅದು ಶೋ ಪೀಸ್ ಅಷ್ಟೆ. ಅಗ್ನಿಶಾಮಕ ಟೀಂ ಸ್ಟ್ರಾಂಗ್ ಇದ್ರು ಬೆಂಕಿ ತಪ್ಪಿಸೋದ್ರಲ್ಲಿ ವೀಕ್. ಇರೋದೊಂದು ಗಾಡಿ ಒಂದು ಕಡೆ ಹೋದ್ರೆ ಮತ್ತೊಂದು ಕಡೆ ಅನಾಹುತವಾದ್ರೆ ಹತ್ತಿರದ ಗಾಡಿಯೇ ಬರಬೇಕು. ಹಾಗಾಗಿ, ಅಧಿಕಾರಿಗಳೇ ಗಾಡಿ ಬೇಕು ಅಂತಿದ್ದಾರೆ. 

9 ತಾಲೂಕ್ ನಲ್ಲಿ ಇರುವುದು 7 ವಾಹನ ಮಾತ್ರ: ಜಿಲ್ಲೆಯಲ್ಲಿ ಎಲ್ಲಾ ತಾಲೂಕುಗಳ ವಿಸ್ತೀರ್ಣವೂ ದೊಡ್ಡದ್ದೆ. ಅಗ್ನಿ ಅವಘಡ. ನೀರಿನಲ್ಲಿ ಸಿಲುಕೋದು. ಸಾವನ್ನಪ್ಪಿದ ಕಾರ್ಯಚರಣೆ ಎಲ್ಲದಕ್ಕೂ ಬಳಕೆಯಾಗ್ತಿರೋದು ಒಂದೇ ಲಾರಿ. ಆ ಲಾರಿ ತಕ್ಷಣವೇ ಸಿಕ್ಕಿದ್ರೆ ಮಾತ್ರ ಆನಾಹುತ ತಪ್ಪಿಸಬಹುದು. ಒಂದು ಕಾರ್ಯಾಚರಣೆ ಮುಗಿಸುತ್ತಿದ್ದಂತೆ ಮತ್ತೇ ಮತ್ತೊಂದು ಕಾರ್ಯಚರಣೆ ಗೆ ತಕ್ಷಣವೇ ಹೋಗಿರುವ ಉದಾಹರಣೆಯೂ ಇದೆ. ಅದರಲ್ಲೂ ದಿನೇ ದಿನೇ ಬಿಸಿಲಿನ ತಾಪ ಹೆಚ್ಚಾಗ್ತಿದೆ. ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಕಾಣಿಸ್ತಾ ಇದೆ. ಪರಿಸರ, ಪ್ರಕೃತಿ ಉಳಿಸುವುದು ಪ್ರಮುಖ ಕರ್ತವ್ಯವೂ ಹೌದು. ಸಿಬ್ಬಂದಿಗಳ ಕೊರತೆಯಿಲ್ಲ. ಆದ್ರೆ, ವಾಹನವಿಲ್ಲ.. ಸರ್ಕಾರದಿಂದ ಈಗಾಗಲೇ 100 ವಾಹನ ಖರೀದಿಸೋಕೆ ಮುಂದಾಗಿದೆ ಅಂತಾನೂ ಹೇಳ್ತಿದ್ದಾರೆ. 

ಮೈಸೂರು ಪ್ರಕರಣ ಬೆನ್ನಲ್ಲೇ ಚಿಕ್ಕಮಗಳೂರಿನ ಮನೆಗಳ‌ ಮೇಲೆ ಕಲ್ಲು ತೂರಾಟ

ಆದ್ರೆ ಅದ್ಯಾವಾಗ ಬರುತ್ತೋ? ಇಲ್ವೋ... ಅನ್ನೋ ಸ್ಪಷ್ಪತೆ ಮಾತ್ರ ಇನ್ನೂ ಇಲ್ಲ. ಸರ್ಕಾರದ ಪ್ರಕಾರ ಜಿಲ್ಲಾ ಕೇಂದ್ರದಲ್ಲಿ 3, ತಾಲೂಕು ಕೇಂದ್ರದಲ್ಲಿ 2 ಅಗ್ನಿಶಾಮಕ ಗಾಡಿ ಇರಬೇಕು. ಆದ್ರೆ, ಈಗ 9 ತಾಲೂಕಲ್ಲಿ ಇರೋದು 7 ಅಗ್ನಿಶಾಮಕ ಗಾಡಿ ಅಷ್ಟೆ. ಕಳಸ, ಅಜ್ಜಂಪುರದಲ್ಲಿ ಅಗ್ನಿಶಾಮಕ ಠಾಣೆಯೇ ಇಲ್ಲ...ಜಿಲ್ಲಾಕೇಂದ್ರದಲ್ಲಿ ಇರುವುದು ಒಂದೇ ಒಂದು ವಾಹನ.ಒಟ್ಟಾರೆ, ಅಗ್ನಿ ಅವಘಡಗಳು ದಿನೇ ದಿನೇ ಹೆಚ್ಚಾಗ್ತಿದ್ದು ಅಗ್ನಿಶಾಮಕದಳದ ಒಂದೇ ವಾಹನ ಕಾರ್ಯಚರಣೆ ಮಾಡಬೇಕಾಗಿರೋ ಅನಿವಾರ್ಯತೆ ಇದ್ದು ಸ್ಥಳೀಯರು ಅಸಮಾಧಾನ ಹೊರಹಾಕ್ತಿದ್ದಾರೆ. ಸರ್ಕಾರ ಕೂಡಲೇ ಜಿಲ್ಲಾ ಕೇಂದ್ರದಲ್ಲಿ ಮೂರು ಹಾಗೂ ತಾಲೂಕು ಕೇಂದ್ರದಲ್ಲಿ ಎರಡು ವಾಹನ ನಿಯೋಜಿಸಿ ಅಂತ ಆಗ್ರಹಿಸಿದ್ದಾರೆ.