Asianet Suvarna News Asianet Suvarna News

ತಲಕಾವೇರಿಯಲ್ಲಿ ತೀರ್ಥರೂಪದಲ್ಲಿ ಕಾವೇರಿ ದರ್ಶನ : ಒಂದು ತಿಂಗಳು ಜಾತ್ರೆ

ಇಂದಿನಿಂದ ಒಂದು ತಿಂಗಳ ಕಾಲ ತಲಕಾವೇರಿಯಲ್ಲಿ ಜಾತ್ರೆ ನಡೆಯಲಿದೆ.  ಇಂದು ಬೆಳಗ್ಗೆ 7 ಗಂಟೆ 04 ನಿಮಿಷಕ್ಕೆ ಕುಂಡಿಕೆಯಲ್ಲಿ ಪವಿತ್ರ ತೀರ್ಥೋದ್ಭವವಾಗಿದೆ.  ತೀರ್ಥೋದ್ಭವದ ಸಂದರ್ಭ ಪ್ರಮುಖರಿಗೆ ಮಾತ್ರ ಅವಕಾಶ ನೀಡಲಾಗಿತ್ತು. 

Theerthodbhava in Kodagu Talacauvery snr
Author
Bengaluru, First Published Oct 17, 2020, 8:33 AM IST
  • Facebook
  • Twitter
  • Whatsapp

 ಮಡಿಕೇರಿ (ಅ.17):  ಕನ್ನಡ ನಾಡಿನ ಜೀವನದಿ, ಕೊಡಗಿನ ಜನರ ಕುಲ ದೇವತೆ ಕಾವೇರಿ ತವರು ತಲಕಾವೇರಿಯಲ್ಲಿ ತೀರ್ಥೋದ್ಭವವಾಗಿದೆ. 

ಇಂದಿನಿಂದ ಒಂದು ತಿಂಗಳ ಕಾಲ ಜಾತ್ರೆ ನಡೆಯಲಿದೆ.  ಇಂದು ಬೆಳಗ್ಗೆ 7 ಗಂಟೆ 04 ನಿಮಿಷಕ್ಕೆ ಕುಂಡಿಕೆಯಲ್ಲಿ ಪವಿತ್ರ ತೀರ್ಥೋದ್ಭವವಾಗಿದೆ. 
 ತೀರ್ಥೋದ್ಭವದ ಸಂದರ್ಭ ಪ್ರಮುಖರಿಗೆ ಮಾತ್ರ ಅವಕಾಶ ನೀಡಲಾಗಿತ್ತು. 

ಕೊರೋನಾ ಪರಿಣಾಮ ಈ ಬಾರಿ ಪವಿತ್ರ ಕುಂಡಿಕೆ ಬಳಿ ತೀರ್ಥ ನೀಡುತ್ತಿಲ್ಲ. ಬದಲಾಗಿ ಇದಕ್ಕಾಗಿ 30 ಮಂದಿ ಸ್ವಯಂ ಸೇವಕರನ್ನು ನಿಯೋಜಿಸಲಾಗಿದೆ. ಇವರು ತೀರ್ಥ ವಿತರಣೆ ಮಾಡಲಿದ್ದು, ಪ್ರೋಕ್ಷಣೆ ಕೂಡ ಮಾಡಲಿದ್ದಾರೆ.

ತಲಕಾವೇರಿಯಲ್ಲಿ 1000 ವರ್ಷದ ಶಿವಲಿಂಗ ಭಗ್ನ : ವಿಸರ್ಜನೆಗೆ ಮನವಿ ...

ಕೊರೋನಾ ಸೋಂಕಿನ ಪರಿಣಾಮ ಈ ಬಾರಿ ಸರಳ ರೀತಿಯಲ್ಲಿ ಜಾತ್ರೆ ನಡೆಯಲಿದೆ. ತಲಕಾವೇರಿ ಹಾಗೂ ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆಗಳು ನೆರವೇರಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆಯಿಂದ ಬ್ಯಾರಿಕೇಡ್‌ ಹಾಕಲಾಗಿದೆ.

ಇಂದು  ಪಿಂಡ ಪ್ರದಾನ ಕಾರ್ಯಕ್ಕೆ ಬೆಳಗ್ಗೆ 6 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಅವಕಾಶವಿದೆ. ತುಲಾ ಸಂಕ್ರಮಣ ಜಾತ್ರಾ ವಿಶೇಷ ಪೂಜಾ ಕಾರ್ಯವು ಇಂದಿನಿಂದ ನ. 17 ರವರೆಗೆ ಒಂದು ತಿಂಗಳು ಜರುಗಲಿದ್ದು, ಭಕ್ತಾದಿಗಳು ಈ ಸಮಯದಲ್ಲಿ ಆಗಮಿಸಿ ಪೂಜಾ ಕಾರ್ಯ ಕೈಗೊಳ್ಳಬಹುದಾಗಿದೆ.

ಹೆಚ್ಚುವರಿ ಬಸ್‌ ವ್ಯವಸ್ಥೆ ಇಲ್ಲ. ಭಕ್ತರಿಗೆ ಅನ್ನದಾನ ವ್ಯವಸ್ಥೆ ಮಾಡಲಾಗಿಲ್ಲ. ಮಳೆ ಬಂದಿರುವ ಹಿನ್ನೆಲೆಯಲ್ಲಿ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಇಳಿಯುವಂತಿಲ್ಲ.

Follow Us:
Download App:
  • android
  • ios