Asianet Suvarna News Asianet Suvarna News

ರಾಜ್ಯದಲ್ಲಿ ಮೂರು ದಿನಗಳ ಗಜ ಗಣತಿ ಮುಕ್ತಾಯ: ಆನೆಗಳ ಕೌಂಟ್‌ ಬದಲು ವಾಟರ್‌ ವಾಲ್‌ ಕೌಂಟ್‌!

ಬಂಡೀಪುರ ಅರಣ್ಯದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಆನೆ ಗಣತಿಯು ಮುಕ್ತಾಯಗೊಂಡಿದ್ದು, ೩ನೇ ದಿನದ ಗಣತಿಯಲ್ಲಿ ಆನೆಗಳ ಕೌಂಟ್‌ ಬದಲು ವಾಟರ್‌ ವಾಲ್‌ ಕೌಂಟ್‌ ನಡೆಸಲಾಗಿದೆ. 

The three day elephant census in the karnataka is over gvd
Author
First Published May 26, 2024, 4:47 PM IST

ಗುಂಡ್ಲುಪೇಟೆ (ಮೇ.26): ಬಂಡೀಪುರ ಅರಣ್ಯದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಆನೆ ಗಣತಿಯು ಮುಕ್ತಾಯಗೊಂಡಿದ್ದು, 3ನೇ ದಿನದ ಗಣತಿಯಲ್ಲಿ ಆನೆಗಳ ಕೌಂಟ್‌ ಬದಲು ವಾಟರ್‌ ವಾಲ್‌ ಕೌಂಟ್‌ ನಡೆಸಲಾಗಿದೆ. ಆನೆ ಗಣತಿಯ ಮೊದಲ ದಿನ ಗಣತಿದಾರರು ಆನೆಯನ್ನು ನೇರವಾಗಿ ಕಂಡದ್ದನ್ನು ಲೆಕ್ಕ ಹಾಕಿದರೆ, 2 ನೇ ದಿನ ಆನೆಗಳ ಲದ್ದಿ ಬಿದ್ದಿರುವ ಆಧಾರದ ಮೇಲೆ ಆನೆಗಳ ಗಣತಿ ಅಂದಾಜು ಮಾಡಿದ್ದರು. ಶನಿವಾರ ಮೂರನೇ ದಿನದ ಆನೆ ಗಣತಿಯಲ್ಲಿ 230 ಮಂದಿ ಗಣತಿದಾರರು ಬೆಳಗ್ಗೆಯಿಂದ ಸಂಜೆ ತನಕ ನೀರು ಇರುವ ಜಾಗದಲ್ಲಿ ಕಾದು ಕುಳಿತು, ನೀರಿರುವ ಜಾಗಕ್ಕೆ ಬಂದ ಗುಂಪು ಆನೆಗಳಲ್ಲಿ ಇರುವ ಮರಿಯಾನೆ, ವಯಸ್ಸು, ಹೆಣ್ಣು ಮತ್ತು ಗಂಡುಗಳ ಎಷ್ಟಿವೆ ಎನ್ನುವುದನ್ನು ನಮೂದಿಸಿದರು. 

ಮಾಮೂಲಿಯಾಗಿ ಆನೆಗಳು ಬರುವ ಆನೆ ಕಾರಿಡಾರ್‌, ಕೆರೆ, ಕಟ್ಟೆ, ವ್ಯೂವ್‌ ಲೈನ್‌ಗಳಲ್ಲಿ ಲೆಕ್ಕಾ ಹಾಕುವುದನ್ನು ವಾಟರ್‌ ವಾಲ್‌ ನಲ್ಲಿ ಕೌಂಟ್‌ ನಡೆಸಲಾಗಿದೆ ಎಂದು ಬಂಡೀಪುರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನವೀನ್‌ ತಿಳಿಸಿದರು. ಮೂರು ದಿನಗಳ ಆನೆ ಗಣತಿಯಲ್ಲಿ ಬಂಡೀಪುರ ಅರಣ್ಯ ಇಲಾಖೆಯ ಸುಮಾರು ೩೫೦ ರಷ್ಟು ಸಿಬ್ಬಂದಿ ಆನೆ ಗಣತಿಯಲ್ಲಿ ಭಾಗವಹಿಸಿ, ಮೂರು ದಿನ ಗಣತಿಯ ಮಾಹಿತಿ ಇಲಾಖೆ ನೀಡಿರುವ ಇಲಾಖೆಯ ಫಾರ್ಮೆಟ್‌ನಲ್ಲಿ ನೀಡಿದ್ದಾರೆ ಎಂದರು.

ಆನೆ ಲದ್ದಿ ಮೂಲಕ ಗಜಗಣತಿ: ಪ್ರತಿ ಬೀಟ್‌ನ 2ಕಿಮೀಗಳ ವ್ಯಾಪ್ತಿಯಲ್ಲಿ ಪರಿಶೀಲನೆ

ಡಿಸಿಎಫ್‌ ವಿಸಿಟ್‌: ಮೂರು ದಿನಗಳ ಕಾಲ ಬಂಡೀಪುರ ಅರಣ್ಯದಲ್ಲಿ ನಡೆದ ಆನೆ ಗಣತಿಯಲ್ಲಿ ಬಂಡೀಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್‌ ಎಸ್, ಬಂಡೀಪುರ ಎಸಿಎಫ್‌ ನವೀನ್‌, ಗುಂಡ್ಲುಪೇಟೆ ಎಸಿಎಫ್‌ ಜಿ.ರವೀಂದ್ರ, ವಲಯ ಅರಣ್ಯಾಧಿಕಾರಿಗಳಾದ ಬಿ.ಎಂ.ಮಲ್ಲೇಶ್‌, ಕೆ.ಪಿ.ಸತೀಶ್‌ ಕುಮಾರ್‌, ಎನ್.ಪಿ.ನವೀನ್ ಕುಮಾರ್‌, ಮಂಜುನಾಥ್‌, ಪುನೀತ್‌ ಕುಮಾರ್‌, ದೀಪಾ ಆನೆ ಗಣತಿಯಲ್ಲಿ ಭೇಟಿ ನೀಡಿದರು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆನೆ ಗಣತಿಯಲ್ಲಿ 114 ಬೀಟ್‌ಗಳಲ್ಲಿ 350 ಮಂದಿ ಅರಣ್ಯ ಸಿಬ್ಬಂದಿ ಆನೆ ಗಣತಿ ನಡೆಸಿದ್ದಾರೆ. ಆನೆಗಳು ಇರುವ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಒಟ್ಟಾರೆ ಆನೆ ಗಣತಿ ಯಶಸ್ವಿಯಾಗಿ ಮುಗಿದಿದೆ. ಆನೆಗಳು ಇರುವ ಎಲ್ಲಾ ಮಾಹಿತಿ ಸಂಗ್ರಹಿಸುವ ಕೆಲಸ ಆಗುತ್ತಿದೆ.

Latest Videos
Follow Us:
Download App:
  • android
  • ios