ನಾಯಿ ಮೂತ್ರ ಮಾಡಿದ ಬ್ಯಾಗನ್ನು ದಲಿತ ಮಕ್ಕಳಿಂದ ತೊಳೆಸಿದ ಶಿಕ್ಷಕರು
ನಾಯಿ ಮೂತ್ರ ಮಾಡಿದ ಮೇಲ್ಜಾತಿಗೆ ಸೇರಿದ ವಿದ್ಯಾರ್ಥಿಯೊಬ್ಬನ ಬ್ಯಾಗನ್ನು ಬಲವಂತವಾಗಿ ಪ.ಜಾತಿಗೆ ಸೇರಿದ ವಿದ್ಯಾರ್ಥಿಯಿಂದ ತೊಳಿಸಿದ ಘಟನೆ ಖಂಡನೀಯ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಮಿತಿ ಸಂಚಾಲಕ ಚೋರನಹಳ್ಳಿ ಶಿವಣ್ಣ ದೂರಿದರು.
ಮೈಸೂರು : ನಾಯಿ ಮೂತ್ರ ಮಾಡಿದ ಮೇಲ್ಜಾತಿಗೆ ಸೇರಿದ ವಿದ್ಯಾರ್ಥಿಯೊಬ್ಬನ ಬ್ಯಾಗನ್ನು ಬಲವಂತವಾಗಿ ಪ.ಜಾತಿಗೆ ಸೇರಿದ ವಿದ್ಯಾರ್ಥಿಯಿಂದ ತೊಳಿಸಿದ ಘಟನೆ ಖಂಡನೀಯ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಮಿತಿ ಸಂಚಾಲಕ ಚೋರನಹಳ್ಳಿ ಶಿವಣ್ಣ ದೂರಿದರು.
ಹುಣಸೂರು ತಾಲೂಕು ಬೀಜಗನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮೇಲ್ಜಾತಿಗೆ ಸೇರಿದ ವಿದ್ಯಾರ್ಥಿಯೊಬ್ಬನ ನಾಯಿ ಮೂತ್ರ ವಿಸರ್ಜನೆ ಮಾಡಿದ ಬ್ಯಾಗನ್ನು ಅದೇ ಶಾಲೆಯ ಪ.ಜಾತಿಗೆ ಸೇರಿದ ವಿದ್ಯಾರ್ಥಿಯೊಬ್ಬನಿಂದ ಬಲವಂತವಾಗಿ ತೊಳೆಸಲಾಗಿದೆ. ಟಿ. ನರಸೀಪುರ ತಾಲೂಕು ಬನ್ನೂರು ಹೋಬಳಿ ಕೊಡಗಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಶೌಚಾಲಯಗಳನ್ನು ಪ.ಜಾತಿಗೆ ಸೇರಿದ ಶಾಲಾ ಮಕ್ಕಳಿಂದ ತೊಳೆಸುತ್ತಿರುವ ಘಟನೆ ಖಂಡನಾರ್ಹ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಬುಧವಾರ ಹೇಳಿದರು.
ಈ ಸಂಬಂಧ ತಪ್ಪಿತಸ್ಥರ ವಿರುದ್ಧ ದಲಿತರ ಮೇಲಿನ ದೌರ್ಜನ್ಯ ಕಾಯ್ದೆ ಅಡಿ ಸ್ವಯಂ ಪ್ರೇರಿತವಾಗಿ ಒಂದು ವಾರದೊಳಗೆ ದೂರು ದಾಖಲಿಸಿಕೊಳ್ಳಬೇಕು. ಇಲ್ಲದಿದ್ದರೆ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಅವರು ಎಚ್ಚರಿಸಿದರು.
ಘಟನೆಗೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಆದರೆ ಡಿಡಿಪಿಐ ಆಮಿಷಕ್ಕೆ ಒಳಗಾಗಿ ಕಠಿಣ ಕ್ರಮ ಕೈಗೊಂಡಿಲ್ಲ. ಜೊತೆಗೆ ಸಂತ್ರಸ್ತ ಬಾಲಕನ ತಂದೆ ಶಿಕ್ಷಕರ ವಿರುದ್ಧ ನೀಡಿದ ದೂರನ್ನು ಹಿಂಪಡೆದಿರುವುದಾಗಿ ಹೇಳಿಕೆ ನೀಡಿ ಗೊಂದಲ ಮೂಡಿಸಿದ್ದಾರೆ ಎಂದು ಆರೋಪಿಸಿದರು.
ಇದೇ ವೇಳೆ, ಟಿ. ನರಸೀಪುರ ತಾಲೂಕು ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಮಕ್ಕಳು ಹಾಗೂ ಪೋಷಕರು ಯಾವುದೇ ದೂರು ನೀಡದಂತೆ ಅವರ ಕುಟುಂಬದವರಿಗೆ ಬೆದರಿಕೆ ಹಾಕಲಾಗಿದೆ. ಹೀಗಾಗಿ ಈ ಎರಡೂ ಘಟನೆಗಳ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ತಪ್ಪಿದರೆ ಸಮಿತಿಯು ಉಗ್ರ ಹೋರಾಟ ನಡೆಸಲಿದೆ ಎಂದು ಅವರು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಪ್ರಸನ್ನ, ನಟರಾಜ…, ಸ್ವಾಮಿ, ಬಿಳಿಕೆರೆ ದೇವರಾಜ್ ಹಾಗೂ ದೇವೇಂದ್ರ ಇದ್ದರು.
ನಡೆಯಿತಾ ಮರ್ಯಾದ ಹತ್ಯೆ
ಕೊಡಗು (ಮಾ.15): ಸರಿಯಾಗಿ ಪ್ರಪಂಚದ ಅರಿವೇ ಇಲ್ಲದ ಆ ಯುವತಿ ಕಾಲೇಜಿಗೆ ಹೋಗುತ್ತಿರುವಾಗಲೇ ಯುವಕನೊಂದಿಗೆ ಪ್ರೀತಿಗೆ ಬಿದ್ದಿದ್ದಳು. ಬದುಕಿನಲ್ಲಿ ಏನೇನೋ ನೂರಾರು ಕನಸ್ಸುಗಳ ಹೊತ್ತು ಮೂರು ವರ್ಷದಿಂದ ಪ್ರೀತಿಸಿದವನ ಕೈಹಿಡಿದಿದ್ದಳು. ಆ ಕನಸ್ಸುಗಳು ನನಸುಗಳಾಗಿ ಬಿಚ್ಚುಕೊಳ್ಳುವ ಮೊದಲೇ ಆಕೆ ಉಸಿರು ನಿಲ್ಲಿಸಿದ್ದಾಳೆ. ಆಕೆ ಮೇಲ್ವರ್ಗದ ಯುವಕನನ್ನು ವರಿಸಿದ್ದೇ ದಾರುಣ ಸಾವಿಗೆ ಕಾರಣವಾಗಿರುವ ಆರೋಪ ಕೇಳಿ ಬಂದಿದ್ದು ಮರ್ಯಾದ ಹತ್ಯೆ ನಡೆಯಿತಾ ಎನ್ನುವ ಅನುಮಾನ ಮೂಡಿದೆ. ಇನ್ನೂ ಮೊದಲನೇ ವರ್ಷದ ಪದವಿ ಮುಗಿಸಿ ರಜೆ ಇದ್ದಿದ್ದರಿಂದ ಮನೆಯಲ್ಲಿದ್ದ ಈ ಅರಳು ಕಂಗಣ್ಣ ಚೆಲುವೆ ವಿದ್ಯಾರ್ಥಿ ವೇತನದ ಹಣ ಬಂದಿದೆ ಅದನ್ನು ತೆಗೆದುಕೊಂಡು ಬರುತ್ತೇನೆ ಅಂತ ತನ್ನ ತಂದೆ ತಾಯಿಗಳಿಗೆ ಹೇಳಿ ಮಾರ್ಚ್ 10ನೇ ತಾರೀಖಿನಂದು ಮನೆಯಿಂದ ಹೋಗಿದ್ದವಳು.
ಅಂದು ರಾತ್ರಿ 9 ಗಂಟೆಯಾದರೂ ಮನೆಗೆ ವಾಪಸ್ ಆಗಿರಲಿಲ್ಲ. ಹೀಗಾಗಿ ತಂದೆ ರಾಜು ಅವರು ಮಗಳು ಈಗ ಬಸ್ಸಿನಲ್ಲಿ ಬರಬಹುದು ಎಂದು ಕಾದಿದ್ದರು. ಆದರೆ ಮನೆಗೆ ಬರಬೇಕಾಗಿದ್ದ ಮಗಳು ಅದೇ ಊರಿನ ಒಕ್ಕಲಿಗ ಸಮುದಾಯದ ಹೇಮಂತ್ ಎಂಬ ಯುವಕನ ಮನೆಯಲ್ಲಿ ಮದು ಮಗಳಾಗಿ ನಿಂತಿದ್ದಳು. ಈ ವಿಷಯವನ್ನು ತಿಳಿದ ತಂದೆ ತಾಯಿಗಳಿಗೆ ಜಂಗಬಲವೇ ಹುದುಗಿ ಹೋದಂತೆ ಆಗಿತ್ತು. ಹೌದು ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆ ಸಮೀಪದ 6 ನೇ ಹೊಸಕೋಟೆ ಗ್ರಾಮ ಈ ಪ್ರೇಮಿಯ ದುರಂತಕ್ಕೆ ಮೌನ ಸಾಕ್ಷಿಯಾಗಿದೆ. ಹೀಗೆ ಫೋಟೊದಲ್ಲಿ ಜೊತೆ ಜೊತೆಯಾಗಿ ನಿಂತ್ತಿರೊ ಇವರು ಅಕ್ಷಿತಾ ಹಾಗೂ ಹೇಮಂತ್.
ಎಚ್‌ಡಿಡಿ, ಎಚ್ಡಿಕೆಗೆ ಮೋಸ ಮಾಡಿದ ಬಾಲಕೃಷ್ಣ: ಶಾಸಕ ಮಂಜುನಾಥ್
ಇಬ್ಬರು 6ನೇ ಹೊಸಕೋಟೆ ಗ್ರಾಮದ ಅಕ್ಕಪಕ್ಕದ ಬೀದಿಯವರು. ಅಕ್ಷಿತಾ ಕುಶಾಲನಗರದ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದರೆ, ಹೇಮಂತ್ ಆಕೆಯ ಹಿಂದೆ ಬಿದ್ದಿದ್ದ. ಹೀಗಾಗಿ ಪಿಯುಸಿಗೆ ಕಾಲಿಟ್ಟಾಗಲೇ ಪ್ರೀತಿ ಪ್ರೇಮದ ಪಾಶಕ್ಕೆ ಬಿದ್ದಿದ್ದ ಇಬ್ಬರು ಮೂರು ವರ್ಷಗಳಿಂದ ಕಾದು ಯುವತಿಗೆ 18 ವರ್ಷ ಆಗುತ್ತಿದ್ದಂತೆ ಮದುವೆಯಾಗಿದ್ದರು. ಆದ್ರೆ ಮದುವೆಯಾದ ಐದೆ ಐದು ದಿನಕ್ಕೆ 18 ವರ್ಷದ ಅಕ್ಷಿತಾ ದಾರುಣವಾಗಿ ಪ್ರಾಣಬಿಟ್ಟು ಮಸಣ ಸೇರಿದ್ದಾಳೆ. ಇದಕ್ಕೆ ಕಾರಣ ಆಕೆಯ ಪತಿ ಹೇಮಂತ್ ಹಾಗೂ ಹುಡುಗನ ತಂದೆ ತಾಯಿಯೆ ಮುಖ್ಯ ಕಾರಣ ಅಂತ ಹುಡುಗಿಯ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.