ಲಾಡ್ಲೆಮಶಾಕ್‌ ದರ್ಗಾದಲ್ಲಿ ರಾಘವ ಚೈತನ್ಯ ಮಂದಿರ ನಿರ್ಮಾಣದ ಸಂಕಲ್ಪವಿದೆ. ಕಳೆದ ಬಾರಿ ಮುಸ್ಲಿಂ ಬಾಂಧವರು ವಿರೋಧಿಸಿದ್ದರು. ತಾನಾಗಿಯೇ ಮುಂದೆ ಬಂದು ದೇವಸ್ಥಾನದ ಜೀರ್ಣೋದ್ದಾರಕ್ಕೆ ಅನುವು ಮಾಡಿಕೊಡಬೇಕು ಎಂದು ಆಂದೋಲಾ ಸಿದ್ದಲಿಂಗ ಶ್ರೀಗಳು ಹೇಳಿದರು.

ಆಳಂದ (ಫೆ.19) : ಪಟ್ಟಣದ ಲಾಡ್ಲೆಮಶಾಕ್‌ ದರ್ಗಾದಲ್ಲಿ ರಾಘವ ಚೈತನ್ಯ ಮಂದಿರ ನಿರ್ಮಾಣದ ಸಂಕಲ್ಪವಿದೆ. ಕಳೆದ ಬಾರಿ ಮುಸ್ಲಿಂ ಬಾಂಧವರು ವಿರೋಧಿಸಿದ್ದರು. ತಾನಾಗಿಯೇ ಮುಂದೆ ಬಂದು ದೇವಸ್ಥಾನದ ಜೀರ್ಣೋದ್ದಾರಕ್ಕೆ ಅನುವು ಮಾಡಿಕೊಡಬೇಕು ಎಂದು ಆಂದೋಲಾ ಸಿದ್ದಲಿಂಗ ಶ್ರೀಗಳು ಹೇಳಿದರು.

ಪಟ್ಟಣದ ಲಾಡ್ಲೆಮಶಾಕ್‌ ದರ್ಗಾ(Ladlemashak Dargah)ದಲ್ಲಿ ಶನಿವಾರ ಶಿವರಾತ್ರಿ(Shivaratri)ಯಂದು ಕೋರ್ಚ್‌ ಅನುಮತಿಯಂತೆ ರಾಘವಚೈತನ್ಯಲಿಂಗದ ಪೂಜೆ ನೆರವೇರಿಸಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಆಳಂದ ದರ್ಗಾದಲ್ಲಿ ಒಂದೇ ದಿನ ಶಿವರಾತ್ರಿ, ಉರುಸ್‌ಗೆ ಅನುಮತಿ!

ಮಂದಿರ ನಿರ್ಮಾಣ ಆಗುವ ತನಕ ನಮ್ಮ ಹೋರಾಟ ನಿಲ್ಲದು, ಇದಕ್ಕಾಗಿ ಕಾನೂನು ಹೋರಾಟ ಮಾಡುತ್ತೇವೆ. ಸರ್ಕಾರದ ಗಮನ ಸೆಳೆಯುತ್ತೇವೆ. ಅಲ್ಲಿ ಸದ್ಯ ಪರಿಸರ ಮಾಲಿನ್ಯವಿದ್ದು, ಇಲ್ಲಿನ ಪರಿಸರ ಮಾಲಿನ್ಯ ಶುದ್ಧೀಕರಣ ಮಾಡಿ ಮಂದಿರ ನಿರ್ಮಾಣ ಆಗಬೇಕು. ಇದಕ್ಕೆ ಸ್ವತ ಸರ್ಕಾರವೇ ಮುಂದಾಗಿ ಮಂದಿರ ನಿರ್ಮಾಣ ಕೈಗೊಳ್ಳಲು ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.

ಕಾನೂನು ಚೌಕಟ್ಟಿನಲ್ಲಿ ನಾವು ಪೂಜೆಗೆ ಅವಕಾಶ ಕೇಳಿದ್ದರಿಂದ ಇದಕ್ಕೆ ಅವಕಾಶ ದೊರೆತಿದೆ. ಹೀಗೆ ಪೂಜೆ ಅವಕಾಶ ಸಿಕ್ಕಂತೆ ದೇವಸ್ಥಾನದ ಅಭಿವೃದ್ಧಿಗೆ ಅವಕಾಶ ಸಿಗುತ್ತದೆ ಎಂಬ ನಮ್ಮ ನಂಬಿಕೆಯಾಗಿದೆ. ಇತಿಹಾಸದಲ್ಲಿ ದತ್ತ ಪೀಠವಾಗಿರಲಿ, ಆಯೋಧ್ಯವಾಗಿರಲ್ಲಿ ಮೂಲ ದೇವಸ್ಥಾನದ ಅಭಿವೃದ್ಧಿಗಾಗಿ ಅದರ ಜೀರ್ಣೋದ್ದಾರಕ್ಕಾಗಿ ಕಟ್ಟಡ ನಿರ್ಮಾಣಕ್ಕೆ ನ್ಯಾಯಾಲಯ ಆದೇಶ ಕೊಟ್ಟಿದೆ, ಇದೇ ಮಾದರಿಯಲ್ಲಿ ಇಲ್ಲೂ ಸಹ ಹೋರಾಟದ ಮೂಲಕ ನ್ಯಾಯಾಲಯದ ಆದೇಶದೊಂದಿಗೆ ಮಂದಿರ ಕಟ್ಟಲು ಪ್ರಯತ್ನಿಸಲಾಗುವುದು. ಧರ್ಮಶಾಸ್ತ್ರದ ಪ್ರಕಾರ ಶಾಂತಿಯುತವಾಗಿ ಪೂಜೆ ಕೈಗೊಂಡಿದ್ದೇವೆ ಎಂದು ಹೇಳಿದರು.

ರಾಜಕೀಯ ಉದ್ದೇಶವಿಲ್ಲ:

ಈ ಪೂಜೆ ರಾಜಕೀಯ ಪ್ರೇರಿತವಾಗಿದೆ ಎಂಬ ಆರೋಪವಿದೆಯಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆಸಿದ ಶಾಸಕ ಸುಭಾಷ ಗುತ್ತೇದಾರ ಅವರು, ಲಿಂಗಕ್ಕೆ ಅವರು ಕಳೆದ ಸಾಲಿನಲ್ಲಿ ಹೇಸಿಗೆ ಹಚ್ಚಿದ್ದರು, ಆ ಒಂದು ವಿಷಯವನ್ನು ನಾನೂ ವಿಧಾನಸಭೆಯಲ್ಲಿ ಮಾತಾಡಿದ್ದೇನೆ. ಈ ಸ್ಥಳವನ್ನು ಶುದ್ಧೀಕರಣಗೊಳಿಸುವ ನಿಟ್ಟಿನಲ್ಲಿ ಗಂಗಾಜಲವನ್ನು ತಂದು ಕಳೆದ ಸಾಲಿನಲ್ಲಿ ಪೂಜೆ ಮಾಡಿದ್ದೇವೆ. ಈ ಬಾರಿ ಕೋರ್ಚ್‌ ಅನುಮತಿ ಪಡೆದು ಇಂದು ಶಿವರಾತ್ರಿಯಂದು ಪೂಜೆ ಕೈಗೊಳ್ಳಲಾಗುತ್ತಿದೆ. ಇದು ರಾಜಕೀಯ ಸಲುವಾಗಿ ಮಾಡಿದ ಪೂಜೆಯಲ್ಲ ಎಂದು ಆರೋಪವನ್ನು ತಳಿಹಾಕಿದರು. ಹಿಂದು ಧರ್ಮೀಯರು ಹಿಂದು ದೇವರ ಪೂಜೆ ಕೈಗೊಳ್ಳುತ್ತಿದ್ದೇವೆ ಎಂದರು.

ಮಾಜಿ ಸಚಿವ ಮಾಲೀಕಯ್ಯಾ ಗುತ್ತೇದಾರ ಮಾತನಾಡಿ, ದರ್ಗಾದಲ್ಲಿನ ಲಿಂಗಕ್ಕೆ ಪ್ರತಿದಿನ ಪೂಜೆಯಂತ ಕಾರ್ಯ ಯತ್ತಾವತ್ತಾಗಿ ನಡೆದ ಹೊತ್ತಿನಲ್ಲಿ ಕಳೆದ ಸಾಲಿನಲ್ಲಿ ಹೇಸಿಗೆ ಹಚ್ಚಿ ಅವಮಾನಿಸಿದ್ದರಿಂದ ಇಂದು ಲಿಂಗದ ಶುದ್ಧೀಕರಿಸಿ ಪೂಜೆ ಮಾಡುವಂತಾಗಿದೆ. ಯಾವುದೇ ಧರ್ಮವಿರಲ್ಲಿ ಪರ ಧರ್ಮಗಳನ್ನು ಗೌರವಿಸುವ ಪ್ರವೃತ್ತಿಯಿರಬೇಕು. ಈ ನಿಟ್ಟಿನಲ್ಲಿ ಕೋರ್ಚ್‌ನಿಂದ ಅನುಮತಿ ಪಡೆದು ಪೂಜೆ ಕೈಗೊಳ್ಳಲಾಗಿದೆ. ಮುಸ್ಲಿಮರು ಮಸೀದಿ ದರ್ಗಾಗಳಿಗೆ ಹೋಗಿ ಪೂಜೆ ಸಲ್ಲಿಸಿದಂತೆ ಹಿಂದೂಗಳು ಸಹ ದೇವರಿದ್ದ ಕಡೆ ಹೋಗಿ ಪೂಜಿಸುತ್ತಾರೆ ಇದರಲ್ಲಿ ಏನಿದೆ ರಾಜಕೀಯ ಎಂದು ಅವರು ಪ್ರಶ್ನಿಸಿದರು. ಕೆಲವ ಕಿಡಿಗೇಡಿಗಳು ತಡೆದು ಅಹಿತಕರ ಘಟನೆ ಆಗದಂತೆ ಅವರು ಕಿವಿಹಿಂಡಬೇಕು ಎಂದರು.\

Ladle Mashak Dargah: ಆಳಂದ ಲಾಡ್ಲೆ ಮಾಶಾಕ್ ದರ್ಗಾ ಸುತ್ತ ಪೊಲೀಸ್ ಸರ್ಪಗಾವಲು

ಈ ವೇಳೆ ಕಡಗಂಚಿಯ ವೀರಭದ್ರ ಶಿವಾಚಾರ್ಯರು, ಚೌಡಾಪೂರದ ಮುರಾಹರಿ ಮಹಾರಾಜ್‌, ಬಸವರಾಜ ಮತ್ತಿಮುಡ್‌, ಮಹೇಶ ಗೌಳಿ, ಆನಂದ ಪಾಟೀಲ, ಚಂದುಪಾಟೀಲ, ಮಹೇಶ ಗೊಬ್ಬೂರ, ಹಣಮಂತರಾವ್‌ ಮಲಾಜಿ, ಶಿವುಪುತ್ರ ನಡಗೇರಿ, ನಾಗನಾಥ ಏಟೆ ಮತ್ತಿತರು ಪೂಜೆಯಲ್ಲಿ ಭಾಗವಹಿಸಿದ್ದರು.