ರಾಜ್ಯ ಸರ್ಕಾರವು ತನ್ನ ನಿರ್ಧಾರ ವಾಪಸ್‌ ಪಡೆಯಬೇಕು : ಎಚ್‌. ವಿಶ್ವನಾಥ್‌

ರಾಜ್ಯ ಸರ್ಕಾರ ಆತುರಾತುರವಾಗಿ ಕೈಗೊಂಡ ಒಳ ಮೀಸಲಾತಿ, ಮುಸ್ಲಿಂರ ಶೇ.4 ಮೀಸಲಾತಿ ರದ್ದತಿ ನಿರ್ಧಾರವು ದೋಷಪೂರಿತ ಎಂದು ಸುಪ್ರೀಂಕೋರ್ಚ್‌ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ತನ್ನ ನಿರ್ಧಾರ ವಾಪಸ್‌ ಪಡೆಯಬೇಕು ಎಂದು ವಿಧಾನಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಆಗ್ರಹಿಸಿದರು.

The state government should withdraw its decision H Vishwanath snr

 ಮೈಸೂರು :  ರಾಜ್ಯ ಸರ್ಕಾರ ಆತುರಾತುರವಾಗಿ ಕೈಗೊಂಡ ಒಳ ಮೀಸಲಾತಿ, ಮುಸ್ಲಿಂರ ಶೇ.4 ಮೀಸಲಾತಿ ರದ್ದತಿ ನಿರ್ಧಾರವು ದೋಷಪೂರಿತ ಎಂದು ಸುಪ್ರೀಂಕೋರ್ಚ್‌ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ತನ್ನ ನಿರ್ಧಾರ ವಾಪಸ್‌ ಪಡೆಯಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಆಗ್ರಹಿಸಿದರು.

ಮೀಸಲಾತಿ ಸಂಬಂಧ ಸರ್ಕಾರದ ನಿರ್ಧಾರ ಯಾವುದೇ ವರದಿ ಆಧರಿಸಿದ್ದಾಗಿರಲಿಲ್ಲ. ಕೇವಲ ಸಂಪುಟ ಸಭೆ ತೀರ್ಮಾನ ಆಧರಿಸಿ, ಚುನಾವಣೆ ವೇಳೆಯ ಮತ ಪಡೆಯಲು ಕೈಗೊಂಡ ನಿರ್ಧಾರವಾಗಿತ್ತು. ಹೀಗಾಗಿ ಸುಪ್ರೀಂಕೋರ್ಚ್‌ ಸರಿಯಾಗಿಯೇ ಛೀಮಾರಿ ಹಾಕಿದೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಒಳ ಮೀಸಲಾತಿ ಕುರಿತಂತೆ ಬಹಳಷ್ಟುವರ್ಷಗಳಿಂದ ಒತ್ತಾಯವಿತ್ತು. ಜೊತೆಗೆ ಸದಾಶಿವ ಆಯೋಗ ವೈಜ್ಞಾನಿಕ ವರದಿ ಸಹ ನೀಡಿತ್ತು. ಆದರೆ, ರಾಜ್ಯ ಸರ್ಕಾರವು ಅದನ್ನು ತಿರಸ್ಕರಿಸಿ, ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ನೀಡಿದ ಕೇವಲ 4 ಪುಟಗಳ ಮಧ್ಯಂತರ ವರದಿ ಪಡೆದು ಯಾವುದೇ ವೈಜ್ಞಾನಿಕ ಆಧಾರವಿಲ್ಲದೇ ತರಾತುರಿಯಲ್ಲಿ ಒಳ ಮೀಸಲಾತಿ ಬದಲಾವಣೆ ಹಾಗೂ ಮುಸ್ಲಿಂರಿಗಿದ್ದ ಶೇ.4 ಮೀಸಲಾತಿ ರದ್ದುಗೊಳಿಸುವ ನಿರ್ಧಾರ ಕೈಗೊಂಡಿದೆ ಎಂದರು.

ಈ ಹಿಂದಿನ ಯಾವುದೇ ಪಕ್ಷ, ಯಾವುದೇ ಸರ್ಕಾರ ಕೈಗೊಳ್ಳದ ನಿರ್ಧಾರ ನಾವು ಕೈಗೊಂಡಿದ್ದೇವೆ ಎಂದು ಚುನಾವಣೆ ವೇಳೆ ಬಡಾಯಿ ಕೊಚ್ಚಿಕೊಳ್ಳುವ ಸಲುವಾಗಿಯೇ ಸರ್ಕಾರ ಈ ರೀತಿ ಮಾಡಿದೆ. ಮೀಸಲಾತಿ ಯಾವುದೇ ಕಾರಣಕ್ಕೂ ಶೇ.50 ಮೀರಬಾರದು ಎಂದಿದೆ. ಇದನ್ನು ಸಹ ಗಾಳಿಗೆ ತೂರಿ ಮೀಸಲಾತಿ ಪ್ರಮಾಣವನ್ನು ಸರ್ಕಾರ ಹೆಚ್ಚಿಸಿದೆ. ಹೀಗಾಗಿ, ಸುಪ್ರೀಂಕೋರ್ಚ್‌ ಛೀಮಾರಿ ಹಾಕಿರುವ ಹಿನ್ನೆಲೆಯಲ್ಲಿ ಸರ್ಕಾರ ತನ್ನ ನಿರ್ಧಾರ ವಾಪಸು ಪಡೆಯಬೇಕು ಎಂದು ಒತ್ತಾಯಿಸಿದರು.

ಮೀಸಲಾತಿ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಬಸವೇಶ್ವರರಿಗೆ ಅಪಮಾನ ಆಗಿದೆ. ಧರ್ಮಕ್ಕೆ ಮಾಡಿದಂತಹ ದ್ರೋಹ ಎಂದು ಅವರು ಕಿಡಿಕಾರಿದರು.

ಸೋಮಶೇಖರ್ ವ್ಯಂಗ್ಯ

ಮೈಸೂರು (ಮೇ.23): ಎಚ್‌. ವಿಶ್ವನಾಥ್‌ ಅವರು ಕೇವಲ ನನಗೆ ಮಾತ್ರ ಪ್ರಶ್ನೆ ಕೇಳುವುದಿಲ್ಲ, ಸಲಹೆ ಕೊಡುವುದಿಲ್ಲ. ಅವರು ದೇಶ, ವಿಶ್ವಕ್ಕೆ ಪ್ರಶ್ನೆ ಕೇಳುತ್ತಾರೆ, ಸಲಹೆ ಕೊಡುತ್ತಾರೆ ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ವ್ಯಂಗ್ಯವಾಡಿದರು. ಜಿಲ್ಲಾ ಮಂತ್ರಿ ಎಲ್ಲಿದ್ದಾರೆಂಬ ಎಚ್‌. ವಿಶ್ವನಾಥ್‌ ಪ್ರಶ್ನೆಗೆ ಭಾನುವಾರ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಅವರ ಈಗ ಕೊಟ್ಟಿರುವ ಸಲಹೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸಿದ್ದೇನೆ. ಅವರು ಮೈಸೂರು ಉಸ್ತುವಾರಿ ಆದಾಗ ಎಷ್ಟುಸಭೆ ಮಾಡಿದ್ದರು? ಎಷ್ಟುಬಾರಿ ತಾಲೂಕು ಪ್ರವಾಸ ಮಾಡಿದ್ದರು ನನಗೆ ಗೊತ್ತಿಲ್ಲ.

ನಾನು ಯಾರು ಮಾಡದಷ್ಟುಜಿಲ್ಲೆಯ, ತಾಲೂಕು, ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ಇದನ್ನು ವಿಶ್ವನಾಥ್‌ ಕೇಳಿ ತಿಳಿದುಕೊಳ್ಳಲಿ ಎಂದು ತಿರುಗೇಟು ನೀಡಿದರು. ಎಷ್ಟು ಸಭೆ ಮಾಡಿದ್ದೇನೆ? ಎಷ್ಟುಬಾರಿ ಮೈಸೂರಿಗೆ ಬಂದಿದ್ದೇನೆ ತಿಳಿದುಕೊಳ್ಳಲಿ. ಚುನಾವಣಾ ನೀತಿ ಸಂಹಿತಿ ಹಿನ್ನೆಲೆ ನಾನು ಭೇಟಿ ಮಾಡಲು ಸಾಧ್ಯವಾಗಿಲ್ಲ. ಜಿಲ್ಲಾಧಿಕಾರಿ ಹಾನಿ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ಸಭೆ ಮಾಡಬಾರದು, ಸ್ಥಳ ಪರಿಶೀಲನೆಗೆ ಹೋಗಬಾರದು, ಇದು ಸ್ಪಷ್ಟವಾಗಿ ನೀತಿ ಸಂಹಿತೆಯಲ್ಲಿ ಇದೆ. ಸಂಸದರು, ಸಚಿವರು ಆಗಿದ್ದ ಎಚ್‌. ವಿಶ್ವನಾಥ್‌ ಅವರಿಗೆ ಇದು ಗೊತ್ತಿರಬೇಕಿತ್ತು ಎಂದು ಅವರು ಕುಟುಕಿದರು.

ಆಪರೇಷನ್​ ಕಮಲದ ಸುಳಿವು ನೀಡಿದ ಸಚಿವ, ಘಟಾನುಘಟಿ ನಾಯಕರು ಬಿಜೆಪಿ ಸೇರ್ತಾರಾ?

ಆರ್‌ಎಸ್‌ಎಸ್‌ ಕಾರ್ಯಕರ್ತ ಪಠ್ಯಪುಸ್ತಕ ತಯಾರಿ ಅಧ್ಯಕ್ಷರಾಗಿರೋದು ದುರಂತ: ಪಠ್ಯಪುಸ್ತಕ ಪರಿಷ್ಕರಣೆ (Text Book Revision Committee) ರಾಜಕೀಯ ಸಂಘರ್ಷ ಅಲ್ಲ. ನಾವೆಲ್ಲ ಸೇರಿ ಶಿಕ್ಷಣ ಹಾಳು ಮಾಡುತ್ತಿದ್ದೇವೆ ಎಂದು ವಿಧಾನ ಪರಿಷತ್ತು ಸದಸ್ಯ ಹಾಗೂ ಮಾಜಿ ಸಚಿವ ಎಚ್‌. ವಿಶ್ವನಾಥ್‌ ಅಸಮಾಧಾನ ವ್ಯಕ್ತಪಡಿಸಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಹಿತ್‌ ಚಕ್ರತೀರ್ಥ ಯಾರಪ್ಪ? ಸಂಘ ಪರಿವಾರದ ಕಾರ್ಯಕರ್ತ. ಶಿಕ್ಷಣ ತಜ್ಞರಲ್ಲದೆ ಇರುವವರು ಪಠ್ಯ ಪುಸ್ತಕ ತಯಾರಿಯ ಅಧ್ಯಕ್ಷರಾಗಿರೋದು ದುರಂತ ಎಂದು ಕಿಡಿಕಾರಿದರು. ಪಠ್ಯಪುಸ್ತಕದಲ್ಲಿ ಕೇಸರಿಕರಣ ನುಸುಳುತ್ತಿರುವುದು ಅಪಾಯಕಾರಿ. ಧರ್ಮದ ಆಧಾರಿತ ಪಠ್ಯ ಯಾವುದೇ ಕಾರಣಕ್ಕೂ ಬೇಡ. 

DCC Bank ಕೇರಳ ಗುಜರಾತ್ ಮಾದರಿಯಲ್ಲಿ ಕರ್ನಾಟಕದಲ್ಲಿ ಡಿಸಿಸಿ ಬ್ಯಾಂಕ್ ಬಂದ್?

Latest Videos
Follow Us:
Download App:
  • android
  • ios