ಸ್ವಾತಂತ್ರ್ಯ ಚಳವಳಿಯಲ್ಲಿ ಮಹಿಳೆಯರ ಪಾತ್ರ ದೊಡ್ಡದು
ಕರ್ನಾಟಕದ ನೂರಾರು ಮಹಿಳೆಯರು ನೇರವಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದರೆ, ಸಾವಿರಾರು ಮಂದಿ ಇದಕ್ಕಾಗಿ ಪರೋಕ್ಷವಾಗಿ ದುಡಿದಿದ್ದಾರೆ. ಇವರನೆಲ್ಲಾ ಸ್ಮರಿಸಿಕೊಳ್ಳುವ ಮತ್ತು ಅವರ ಸಾಧನೆಯಿಂದ ನಾವೆಲ್ಲ ಸ್ಪೂರ್ತಿ ಪಡೆಯುವ ಕೆಲಸ ನಿರಂತರವಾಗಿ ನಡೆಯಬೇಕು ಎಂದು ಲೇಖಕಿ ಡಾ. ಜ್ಯೋತಿ ಅಭಿಪ್ರಾಯಪಟ್ಟರು.
ತುಮಕೂರು : ಕರ್ನಾಟಕದ ನೂರಾರು ಮಹಿಳೆಯರು ನೇರವಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದರೆ, ಸಾವಿರಾರು ಮಂದಿ ಇದಕ್ಕಾಗಿ ಪರೋಕ್ಷವಾಗಿ ದುಡಿದಿದ್ದಾರೆ. ಇವರನೆಲ್ಲಾ ಸ್ಮರಿಸಿಕೊಳ್ಳುವ ಮತ್ತು ಅವರ ಸಾಧನೆಯಿಂದ ನಾವೆಲ್ಲ ಸ್ಪೂರ್ತಿ ಪಡೆಯುವ ಕೆಲಸ ನಿರಂತರವಾಗಿ ನಡೆಯಬೇಕು ಎಂದು ಲೇಖಕಿ ಡಾ. ಜ್ಯೋತಿ ಅಭಿಪ್ರಾಯಪಟ್ಟರು.
ನಗರದ ಓಶೋ ಧ್ಯಾನ ಕೇಂದ್ರದಲ್ಲಿ ಕರ್ನಾಟಕ ಲೇಖಕಿಯರಸಂಘ ತುಮಕೂರು, ಓದು ಲೇಖಕಿ ಬಳಗ, ವಿಚಾರಮಂಟಪ ಬಳಗ ಹಾಗೂ ಸಾಕ್ಷಿ ಪ್ರಕಾಶನ ಸಹಯೋಗದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಣಿ ಅಬ್ಬಕ್ಕ, ಕಮಲಾದೇವಿ ಚಟೋಪಾಧ್ಯಾಯ, ಉಮಾಬಾಯಿ ಕುಂದಾಪುರ, ದನ್ವಂತಿ ರಾಮರಾವ್ ಮುಂತಾದ ವರಸೇವೆ ಹಾಗೂ ಸಾಧನೆಗಳನ್ನು ಕುರಿತು ವಿವರವಾಗಿ ಪರಿಚಯಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಲಾಶ್ರೀ ಮಾತನಾಡಿ, ಭಾರತ್ ಮಾತಾಕಿ ಜೈ ಎನ್ನುವ ಘೋಷÜಣೆಗಾಗಿ ಸಾಕಷ್ಟುಮಂದಿ ತಮ್ಮ ಪ್ರಾಣ ತೆತ್ತಿದ್ದಾರೆ. ಇದರ ಕುರಿತು ನಾವು ನಮ್ಮ ಮಕ್ಕಳಿಗೆ ಅರಿವು ಮೂಡಿಸಬೇಕಿದೆ. ದೇಶ ಪ್ರೇಮವನ್ನು ಉದ್ದೀಪಿಸಬೇಕಿದೆ ಎಂದರು.
ಕರ್ನಾಟಕ ಲೇಖಕಿಯರ ಸಂಘದ ಅಧ್ಯೆಕ್ಷೆ ಮಲ್ಲಿಕಾ ಬಸವರಾಜು ಮಾತನಾಡಿ, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ಪಾತ್ರ ಅನನ್ಯವಾದುದು ಮತ್ತು ವಿಶಿಷ್ಟವಾದುದು. ಚರಿತ್ರೆಯಲ್ಲಿ ದಾಖಲಾಗಿರದ ಅದೆಷ್ಟೋ ಜನಮಹಿಳೆಯರು ಸ್ವಾತಂತ್ರ್ಯ ಚಳವಳಿಗೆ ತಮ್ಮ ಕೊಡುಗೆ ನೀಡಿದ್ದಾರೆ. ಅಂತಹವರಲ್ಲಿ ತುಮಕೂರಿನವರಾದ ಭಾಗೀರಥಮ್ಮ, ಸುಶೀಲಾ ಸುಬ್ರಹ್ಮಣ್ಯ, ಸುಲೋಚನಾ ಆರಾಧ್ಯ, ಚಿನಕವಜ್ರದ ಲಕ್ಷಮ್ಮ ಮತ್ತು ನಾಗರತ್ನಮ್ಮ ಮುಂತಾದವರೂ ಸೇರಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ, ಸಂಚಾಲಕಿ ಡಾ ಆಶಾರಾಣಿ ಬಗ್ಗನಡು, ಡಾ. ಪ್ರಿಯಾಂಕ ಎಂ. ಜಿ., ಮರಿಯಂಬೀ, ನವೀನ್ ಕುಮಾರ್‌ಪಿ. ಆರ್. ಇನ್ನಿತರರು ಇದ್ದರು.
ಸಾಕಷ್ಟು ದೂರ ಸಾಗಬೇಕಿದೆ ಭಾರತ
ಬೆಂಗಳೂರು(ಆ.16) ಭಾರತ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಸತದಿಂದ ಆಚರಿಸಿದೆ. ದೇಶ ವಿದೇಶಗಳಲ್ಲಿ ಭಾರತದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಮನೆ ಮಾಡಿತ್ತು. ಆದರೆ ಈ ಭಾರತ 1947ರ ನಂತರ ಕಟ್ಟಿದ ದೇಶ. ಕೇವಲ 77 ವರ್ಷಗಳಲ್ಲಿ ಭಾರತ ಈ ಮಟ್ಟಕ್ಕೆ ಬೆಳೆದ ನಿಂತಿದೆ. ಕಳೆದ 77 ವರ್ಷಗಳಲ್ಲಿ ಭಾರತ ನಡೆಸಿದ ಸತತ ಹೋರಾಟದ ಫಲದಿಂದ ವಿಶ್ವದ 5ನೇ ಅತೀ ದೊಡ್ಡ ಆರ್ಥಿಕತೆಯಾಗಿ ಭಾರತ ಬೆಳೆದಿದೆ. ಇದೀಗ ಭಾರತ ನೆಮ್ಮದಿಯಾಗಿ ನಿದ್ರಿಸುವಂತಿಲ್ಲ. ಭಾರತದ ನೆಮ್ಮದಿಯ ನಾಳೆಗಾಗಿ ಹಲವು ಅಡೆತಡೆಗಳನ್ನು ಎದುರಿಸಿ ಸಾಕಷ್ಟು ದೂರ ಸಾಗಬೇಕಿದೆ.
ಸಮದ್ಧಿ ತುಂಬಿದ, ಶೇಕಡಾ 97 ರಷ್ಟು ಅಕ್ಷರಸ್ತರಿದ್ದ, ಚಿನ್ನಾಭರಣಗಳಿಂದ ತುಂಬಿದ್ದ, ತಂತ್ರಜ್ಞಾನ, ಶಾಸ್ತ್ರ, ಧರ್ಮ, ಸತ್ಯ-ನ್ಯಾಯ, ಸಂಪ್ರದಾಯ, ಸಂಸ್ಕೃತಿಗಳಿಂದ ತುಂಬಿದ್ದ ಭಾರತದ ಮೇಲೆ ನಡೆದ ದಾಳಿಗಳು ಒಂದೆರಡಲ್ಲ. ಕೊನೆಗೆ ಬ್ರಿಟೀಷರ ಆಡಳತಿ ಬೇರೆ. ಇವರೆಲ್ಲಾ ದೋಚಿದ್ದು ಕೇವಲ ಭಾರತದ ಸಂಪತ್ತು ಮಾತ್ರವಲ್ಲ, ಇಲ್ಲಿನ ಆಚಾರ ವಿಚಾರ, ಸಂಸ್ಕೃತಿ, ಸಂಪ್ರದಾಯ ಜೊತೆಗೆ ಭಾರತೀಯತೆನ್ನೂ ದೋಚಿದ್ದಾರೆ. ಶತ ಶತಮಾನಗಳಿಂದ ಭಾರತ ದಾಳಿಕೋರರು, ಬ್ರಿಟಿಷರು ಕೈಗೆಳಗೆ ಗುಲಾಮರಾಗಿ ಬಾಳಿದ ಭಾರತೀಯರು ಸಂಪೂರ್ಣವಾಗಿ ವಸಾತುಶಾಹಿಯಿಂದ ಹೊರಬಂದಿಲ್ಲ ಅನ್ನೋ ಆರೋಪಗಳೂ ಇವೆ. ಇದಕ್ಕೆ ಹಲವು ಉದಾಹರಣೆ, ಸಾಕ್ಷ್ಯಗಳಿವೆ. ನಿಧಾನವಾಗಿ ಭಾರತ ನೈಜ ಭಾರತವಾಗುತ್ತಿದೆ. ವಿಶ್ವದಲ್ಲಿ ಶಕ್ತಿಯುತ ದೇಶವಾಗಿ ಹೊರಹೊಮ್ಮುತ್ತಿದೆ. ವಿಶ್ವದ ಬಲಿಷ್ಟ ರಾಷ್ಟ್ರಗಳು ಇದೀಗ ಭಾರತವನ್ನು ಬೆರಗುಗಣ್ಣಿನಿಂದ ನೋಡುತ್ತಿದೆ.
ಸ್ವಾತಂತ್ರ್ಯ ಸಂಭ್ರಮದಲ್ಲಿ ಮಣಿಪುರ, 20 ವರ್ಷದ ಬಳಿಕ ಬಾಲಿವುಡ್ ಚಿತ್ರ ಪ್ರದರ್ಶನ!
ಭಾರತ ಹಾವಾಡಿಗರ ದೇಶ, ಭಾರತ ಅನಕ್ಷರಸ್ಥರ ದೇಶ, ಭಾರತ ಗುಲಾಮರ ದೇಶ, ಭಾರತಕ್ಕೆ ಯಾವುದನ್ನು ಸ್ವಂತವಾಗಿ ಮಾಡುವ ಶಕ್ತಿ ಇಲ್ಲ. ತಂತ್ರಜ್ಞಾ, ವಿಜ್ಞಾನ ಭಾರತಕ್ಕೆ ಅರ್ಥವಾಗಲ್ಲ, ಕಾರಣ ಭಾರತ ಮೂಡನಂಬಿಕೆಯ ದೇಶ. ಹೀಗೆ ಭಾರತವನ್ನು ವಿಶ್ವದ ಎದುರು ಬ್ರಿಟಿಷರು ಬಿಂಬಿಸಿದ ಚಿತ್ರದಿಂದ ಹಂತ ಹಂತವಾಗಿ ದೇಶ ಹೊರಬಂದಿದೆ. ಜಗತ್ತನ್ನೇ ಬೆರಗೊಳಿಸುವ ರೀತಿಯಲ್ಲಿ ಭಾರತ ಮುಂದುವರಿಯುತ್ತಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ತಂತ್ರಜ್ಞಾನ ಚಂದ್ರನ ಅಂಗಳಕ್ಕೂ ತಲುಪಿದೆ.
ಭಾರತದ ರಸ್ತೆ ಹಾಗೂ ರೈಲ್ವೇ ಸಂಪರ್ಕವನ್ನು ಬ್ರಿಟಿಷರು ಹಾಕಿದ ಮಾರ್ಗಗಳಾಗಿತ್ತು. ಆದರೆ ಮೈಕೊಡವಿ ನಿಂತ ಭಾರತ ಇದೀಗ ದೇಶದ ಮೂಲೆ ಮೂಲೆಗೆ ಸಾರಿಗೆ ಸಂಪರ್ಕ ಕಲ್ಪಿಸಿದೆ. ಅತ್ಯುತ್ತಮ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಹೆದ್ದಾರಿಗಳನ್ನು ಭಾರತ ನಿರ್ಮಿಸಿದೆ. ಭಾರತೀಯ ರೈಲ್ವೇ ಅಧುನೀಕರಣಗೊಂಡಿದೆ. ವಂದೇ ಭಾರತ್ ಸೇರಿದಂತೆ ಸೂಪರ್ ಫಾಸ್ಟ್ ರೈಲುಗಳು ಓಡಾಡುತ್ತಿದೆ. ದೇಶದ ವಿಮಾನ ನಿಲ್ದಾಣಗಲ್ಲಿ ಕ್ರಾಂತಿಯಾಗಿದೆ. ವಿಮಾನಯಾನ ಪ್ರಯಾಣ ಕಬ್ಬಿಡಣ ಕಡಲೆಯಾಗಿ ಉಳಿದಿಲ್ಲ.
ಸಾಫ್ಟ್‌ವೇರ್, ಐಟಿ ಬಿಟಿ ಕ್ಷೇತ್ರದಲ್ಲಿ ಭಾರತ ಮುಂಚೂಣಿ ದೇಶದಲ್ಲಿ ಒಂದಾಗಿದೆ. ಐಟಿ ಸೇವೆಗಳನ್ನು ಭಾರತ ವಿದೇಶಕ್ಕೆ ರಫ್ತು ಮಾಡುತ್ತಿದೆ. ಸ್ಟಾರ್ಟ್ಅಪ್ ಕ್ಷೇತ್ರದಲ್ಲಿ ಭಾರತ ವಿಶ್ವದಲ್ಲೇ 3ನೇ ಸ್ಥಾ ಪಡೆದುಕೊಂಡಿದೆ. ವಿದ್ಯುತ್ ವಾಹನಗಳ ಬಳಕೆ, ನವಕರಿಸಬಹುದಾದ ಇಂಧನ ಬಳಕೆ, ಪರಿಸರ ಪೂರಕ ವಾತಾವರಣ ಸೃಷ್ಟಿಯಲ್ಲೂ ಭಾರತ ಮುಂದಿದೆ.