ತಾಪಮಾನ ತಡೆಯದೇ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ

ಪ್ರಸ್ತುತ ತಾಪಮಾನ ತೀರಾ ಹೆಚ್ಚಾಗುತ್ತಿದ್ದು, ಮುಂಜಾಗ್ರತೆ ವಹಿಸಿ ತಡೆಯದೇ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ. ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧ ಮಾಡುವ ಮೂಲಕ ಉತ್ತಮ ವಾತಾವರಣವನ್ನು ಮುಂದಿನ ಪೀಳಿಗೆಗೆ ನೀಡೋಣ ಎಂದು ಪರಿಸರವಾದಿ ಹಾಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷರಾದ ಎಚ್‌.ಪಿ. ಮೋಹನ್‌ ಕರೆ ನೀಡಿದರು.

The risk if the temperature is not prevented snr

  ಹಾಸನ :  ಪ್ರಸ್ತುತ ತಾಪಮಾನ ತೀರಾ ಹೆಚ್ಚಾಗುತ್ತಿದ್ದು, ಮುಂಜಾಗ್ರತೆ ವಹಿಸಿ ತಡೆಯದೇ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ. ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧ ಮಾಡುವ ಮೂಲಕ ಉತ್ತಮ ವಾತಾವರಣವನ್ನು ಮುಂದಿನ ಪೀಳಿಗೆಗೆ ನೀಡೋಣ ಎಂದು ಪರಿಸರವಾದಿ ಹಾಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷರಾದ ಎಚ್‌.ಪಿ. ಮೋಹನ್‌ ಕರೆ ನೀಡಿದರು.

ನಗರದ ಕುವೆಂಪು ರಸ್ತೆ ಬಳಿ ಇರುವ ಹಾಸನ ಲಯನ್ಸ್ ಕ್ಲಬ್ಬಿನಲ್ಲಿ ಅಂತರ ಪ್ರಾಂತ್ಯ ಸಭೆಯಲ್ಲಿ ಪರಿಸರದ ಬಗ್ಗೆ ಮಾತನಾಡಲು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅವರು ಸನ್ಮಾನ ಮತ್ತು ಗೌರವ ಸ್ವೀಕರಿಸಿದ ನಂತರ ಮಾತನಾಡಿ, ತಾಪಮಾನ ತಡೆಯದೆ ಹೋದರೆ ಅಪಾಯ ತಪ್ಪಿದಲ್ಲ. ಇತರೆ ದೇಶಗಳಲ್ಲಿ ತಾಪಮಾನದ ಆಘಾತ ಕಂಡಿದ್ದೇವೆ. ಮುಂದಿನ ಪೀಳಿಗೆಯ ಬಗ್ಗೆ ಯೋಚನೆ ಮಾಡಬೇಕು. ಈಗಲಿಂದಲೇ ತಾಪಮಾನ ನಿಯಂತ್ರಣಕ್ಕೆ ಮುಂದಾಗಬೇಕು. ಅದಕ್ಕಾಗಿ ಮರಗಳ ಕಡಿಯುವುದನ್ನು ಕಡಿಮೆ ಮಾಡಬೇಕು ಎಂದರು. ಪ್ರಪಂಚದೆಲ್ಲೆಡೆ ಸೋಲಾರ್ ಕಡೆ ಹೆಚ್ಚಿನ ಗಮನ ನೀಡಿದೆ. ಈಗ ಭಾರತದಲ್ಲೆ ಸೋಲಾರ್ ತಯಾರಿಕೆಗೆ ಮುಂದಾಗಿದ್ದು, ಮುಂದೆ ಕಡಿಮೆ ಬೆಲೆಗೆ ಸಿಗಬಹುದು. ಪರಿಸರ ನಾಶದಿಂದ ಅರಣ್ಯದಲ್ಲಿ ಆಹಾರ ಸಿಗದೇ ಆನೆ ನಾಡಿಗೆ ಕಾಲಿಟ್ಟು ಅದರ ದಾಳಿ ಹೆಚ್ಚಾಗಿದೆ. ಬದಲಾವಣೆ ಮಾಡಲು ನಾವುಗಳು ಮುಂದಾಗಬೇಕು. ಸರಿಯಾದ ಸಮಯಕ್ಕೆ ಮಳೆ ಬರಬೇಕಾದರೆ ಹೆಚ್ಚೆಚ್ಚು ಮರಗಳು ಇರಬೇಕು ಎಂದು ಕಿವಿಮಾತು ಹೇಳಿದರು.

ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲೆ ಹೆಚ್ಚು ದುಷ್ಪರಿಣಾಮ ಬೀರುತ್ತಿದೆ. ಇದೆ ರೀತಿ ಬಿಟ್ಟರೆ ಈ ಭೂಮಿ ಮೇಲಿನ ಜಾಗವೆಲ್ಲ ಪ್ಲಾಸ್ಟಿಕ್ ಮಯವಾಗುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಅನೇಕ ದೇಶಗಳಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್ ಬ್ಯಾನ್ ಮಾಡಿದೆ. ಇನ್ನು ಪ್ರಾಣಿಗಳು ಪ್ಲಾಸ್ಟಿಕ್ ಸೇವಿಸಿ ಸಾವನ್ನಪ್ಪಿವೆ. ಭವಿಷ್ಯದಲ್ಲಿ ಮೈಕ್ರೋ ಪ್ಲಾಸ್ಟಿಕ್ ಅಪಾಯವಾಗಿದೆ. ಪ್ಲಾಸ್ಟಿಕ್ ಬಳಕೆ ಮಾಡದಂತೆ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ತಿಳಿಸಿದರು.

ಇದೆ ವೇಳೆ ಲಯನ್ಸ್ ಕ್ಲಬ್ ಚೀಪ್ ಕೋ-ಆರ್ಡಿನೇಟರ್ ಹೆಚ್.ಎಂ. ತಾರನಾಥ್, ಲಯನ್ಸ್ ರೀಜನಲ್ ಛೇರ್‍ಮನ್ ಜಗದೀಶ್, ವಿಶಾಲಾಕ್ಷಿ, ಹಾಸನ ಲಯನ್ಸ್ ಕ್ಲಬ್ ಅಧ್ಯಕ್ಷ ಹೆಚ್.ಕೆ. ನಾಗೇಶ್, ಖಜಾಂಚಿ ಬಿ.ಎಂ. ರವಿಕುಮಾರ್, ಕಾರ್ಯದರ್ಶಿ ಸಿ.ಕೆ. ಕಿರಣ್ ಕುಮಾರ್ ಸೇರಿದಂತೆ ಲಯನ್ಸ್ ಇತರೆ ಪ್ರಾಂತ್ಯದ ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ ಸೇರಿದಂತೆ ಇತರರು ಇದ್ದರು.

ಮಳೆ ಇಲ್ಲದೆ ಬೆಳೆ ನಾಶ

ಚಿಕ್ಕಮಗಳೂರು (ಸೆ.1):ಮಲೆನಾಡಿನ ಭಾಗವಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸದ್ಯ  ದಿನವಿಡೀ ಮಳೆ ಸುರಿಯಬೇಕಾಗಿದ್ದ ಕಾಲವಿದು. ಆದ್ರೆ ಇದೀಗ ಬಿರು ಬೇಸಿಗೆಯಂತಹ ಸುಡುಬಿಸಿಲ ವಾತಾವರಣ ಇರುವುದಿರಿಂದ ಕಾಫಿ ಹಾಗೂ ಕಾಳು ಮೆಣಸಿನ ಫಸಲಿನ ಮೇಲೆ ತೀವ್ರ ದುಷ್ಪರಿಣಾಮ ಉಂಟಾಗುವ ಭೀತಿ ಎದುರಾಗಿದೆ.ಈಗಾಗಲೇ ಕಾಫಿ ಮತ್ತು ಕಾಳುಮೆಣಸು ಬೆಳೆಗಳು ಹೀಚುಗಟ್ಟಿದ್ದು, ಮಳೆಯ ಅಭಾವದಿಂದ ಕಾಳುಗಳ ಗಾತ್ರ ಹೆಚ್ಚಾಗದೆ  ಹೀಚಿನ ಹಂತದಲ್ಲಿಯೇ ತಾಪಮಾನಕ್ಕೆ ಸಿಲುಕಿ ನಾಶವಾಗಲಿದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಕಾಫಿ ಮತ್ತು ಕಾಳು ಮೆಣಸು ಬೆಳೆಯಲ್ಲಿ ನಷ್ಟ : 

ವರ್ಷಾರಂಭದಲ್ಲಿ ಅಕಾಲಿಕ ಮಳೆಯಾದ ಕಾರಣ ಕಾಫಿಗೆ ಕೊಳೆ ರೋಗ ಕಾಣಿಸಿಕೊಂಡು ನಷ್ಟ ಸಂಭವಿಸಿತ್ತು. ಇದೀಗ ಒಣಹವೆಯಿಂದ ಅನಾವೃಷ್ಟಿ ವಾತಾವರಣ ಸೃಷ್ಟಿಯಾಗಿ ಕಾಫಿ ಬೆಳೆಯಲ್ಲಿ ಅಪಾರ ಪ್ರಮಾಣದ ಹಾನಿ ಉಂಟಾಗುವ ಲಕ್ಷಣಗಳು ಕಂಡುಬರುತ್ತಿದೆ. ಕಳೆದ ವರ್ಷವೂ ಹೂವಿನ ಮಳೆಯ ಅನಾವೃಷ್ಟಿ ಹಾಗೂ ಹೆಚ್ಚಿದ ತಾಪಮಾನದ ಕಾರಣ ಕಾಫಿ ಮತ್ತು ಕಾಳು ಮೆಣಸು ಬೆಳೆಯಲ್ಲಿ ನಷ್ಟ ಸಂಭವಿಸಿತ್ತು. 

'ದಕ್ಷಿಣ ಕಾಶ್ಮೀರ' ಖ್ಯಾತಿಯ ಕೊಡಗಿನಲ್ಲೀಗ ಭೀಕರ ಬರ; ಬಿರುಕು ಬಿಟ್ಟ ನೆಲ!

ಬೇಸಿಗೆಯಲ್ಲಿ ತಾಪಮಾನ ಹೆಚ್ಚಳವಾಗಿದ್ದ ಪರಿಣಾಮವಾಗಿ, ಮಳೆಗಾಲದಲ್ಲಿ ಕಾಫಿಯು ಗೊಂಚಲು ಸಮೇತವಾಗಿ ಕೊಳೆತುಅಪಾರ ಪ್ರಮಾಣದಲ್ಲಿ ನೆಲಕ್ಕುದುರಿತ್ತು. ಈ ವರ್ಷ ಮುಂಗಾರಿನಲ್ಲೇ ಮಳೆಯ ಪ್ರಮಾಣ ಸಂಪೂರ್ಣವಾಗಿ ಕುಸಿದು ಒಣಹವೆ ಮುಂದುವರೆದಿದೆ.ಬೇಸಿಗೆ ದಿನಗಳಂತೆ ಗರಿಷ್ಟ ಉಷ್ಣಾಂಶ ಕಂಡು ಬರಲಾರಂಭಿಸಿದೆ. ಇದರಿಂದ ಕಾಫಿ, ಕಾಳುಮೆಣಸು, ಅಡಿಕೆ ಮತ್ತು ಭತ್ತದ ಬೆಳೆಗಳಲ್ಲಿ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಲಿದೆ ಎಂದು ಬೆಳೆಗಾರರು ರೈತರು ಅಳಲು ತೋಡಿಕೊಳ್ಳಲಾರಂಭಿಸಿದ್ದಾರೆ. 

ವರ್ಷದ ಅನಾವೃಷ್ಟಿಯು ಮುತ್ತಷ್ಟು ಸಂಕಷ್ಟ : 

ಕಳೆದ 3-4 ವರ್ಷಗಳಿಂದ ನಿರಂತರವಾದ ಅತಿವೃಷ್ಟಿಯಿಂದ ಕಂಗಾಲಾಗಿದ್ದ ಕಾಫಿ ಬೆಳೆಗಾರರಿಗೆ ಈ ಸಾಲಿನಲ್ಲಿ ಉಂಟಾಗಿರುವ ಅನಾವೃಷ್ಟಿಯು ಇನ್ನಷ್ಟು ಸಂಕಷ್ಟವನ್ನು ತಂದೊಡ್ಡಿದೆ. ಮುಂಗಾರು ಮತ್ತು ಹಿಂಗಾರು ಮಳೆಗಳು ದುರ್ಬಲಗೊಂಡ ಪರಿಣಾಮ ಕಾಫಿ, ಕಾಳುಮೆಣಸು, ಅಡಿಕೆ, ಏಲಕ್ಕಿ ಮತ್ತು ಭತ್ತದ ಬೆಳೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಜೈರಾಂ ತಿಳಿಸಿದ್ದಾರೆ.

ಕಾಫಿ ಮಂಡಳಿ ಮತ್ತು ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆಗಳು ಕೂಡಲೆ ಕಾರ್ಯಪ್ರವೃತ್ತಗೊಂಡು ಅನಾವೃಷ್ಟಿಯಿಂದ ಕಾಫಿ, ಕಾಳುಮೆಣಸು, ಅಡಿಕೆ ಹಾಗೂ ಭತ್ತದ ಬೆಳೆಗಳಲ್ಲಿ ಉಂಟಾಗಿರುವ ನಷ್ಟದ ಬಗ್ಗೆ ಜಂಟಿ ಸಮೀಕ್ಷೆ ನೆಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿ ಉಂಟಾಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸಿಕೊಡುವಂತೆ ಈ ಮೂಲಕ ಒತ್ತಾಯಿಸಿದ್ದಾರೆ. 

Latest Videos
Follow Us:
Download App:
  • android
  • ios