ತುಮಕೂರಿನ ಕೊರಟಗೆರೆ ತಾಲೂಕಿನ ಮಣವಿನಕುರಿಕೆಯಲ್ಲಿ ಹೆಬ್ಬಾವೊಂದು ಮೇಕೆ ನುಂಗಲು ಯತ್ನಿಸಿದ ಘಟನೆ ನಡೆದಿದೆ.
ತುಮಕೂರು (ಸೆ.19) ತುಮಕೂರಿನ ಕೊರಟಗೆರೆ ತಾಲೂಕಿನ ಮಣವಿನಕುರಿಕೆಯಲ್ಲಿ ಹೆಬ್ಬಾವೊಂದು ಮೇಕೆ ನುಂಗಲು ಯತ್ನಿಸಿದ ಘಟನೆ ನಡೆದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮಣವಿನಕುರಿ ಗ್ರಾಮದ ನಿವಾಸಿ ವೆಂಕಟರಮಣ ಅವರ ಹೊಲದಲ್ಲಿ ಪತ್ತೆಯಾಗಿರುವ ಹೆಬ್ಬಾವು. ಸುಮಾರು 15 ಅಡಿ ಉದ್ದ, ಅಂದಾಜು 20ಕೆಜಿ ತೂಕವಿದೆ. ಹೊಲದಲ್ಲಿ ಮೇಯಲು ಹೋಗುತ್ತಿದ್ದ ಮೇಕೆಯನ್ನ ಬೆನ್ನಟ್ಟಿ ನುಂಗಲು ಯತ್ನಿಸಿದೆ. ಈ ದೃಶ್ಯ ಕಂಡು ಬೆಚ್ಚಿಬಿದ್ದ ಗ್ರಾಮಸ್ಥರು.
ಹೆಬ್ಬಾವು ಪತ್ತೆಯಾದ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ ಸ್ಥಳೀಯರು. ಬಳಿಕ ಉರಗ ರಕ್ಷಕ ದಿಲೀಪ್ ಅವರೊಂದಿಗೆ ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು. ಸುಮಾರು ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಹೆಬ್ಬಾವು ಹಿಡಿದ ಸ್ನೇಕ್ ದಿಲೀಪ್. ಬಳಿಕ ಅರಣ್ಯಕ್ಕೆ ಹೆಬ್ಬಾವು ಬಿಟ್ಟ ಅರಣ್ಯಾಧಿಕಾರಿಗಳು.
