Tumakuru: ಹೆಲ್ಮೆಟ್ ಹಾಕಿಲ್ಲ ಎಂದು ಯುವಕನಿಗೆ ಮನಸೋ ಇಚ್ಚೆ ಥಳಿಸಿದ ಪೊಲೀಸರು

ಹೆಲ್ಮೆಟ್ ಹಾಕಿಲ್ಲ ಎಂಬ ಕಾರಣಕ್ಕೆ ಟ್ರಾಫಿಕ್ ಪೊಲೀಸರು ಯುವಕನಿಗೆ ಗಂಭೀರ ಗಾಯ ಆಗುವಂತೆ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ತುಮಕೂರು ನಗರದಲ್ಲಿ ಗುರುವಾರ ನಡೆದಿದೆ.

The police beat up the young man for not wearing a helmet at tumakuru gvd

ತುಮಕೂರು (ಜು.19): ಹೆಲ್ಮೆಟ್ ಹಾಕಿಲ್ಲ ಎಂಬ ಕಾರಣಕ್ಕೆ ಟ್ರಾಫಿಕ್ ಪೊಲೀಸರು ಯುವಕನಿಗೆ ಗಂಭೀರ ಗಾಯ ಆಗುವಂತೆ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ತುಮಕೂರು ನಗರದಲ್ಲಿ ಗುರುವಾರ ನಡೆದಿದೆ. ನಗರದ ಶಿರಾ ಗೇಟ್ ರಸ್ತೆಯ ಎಸ್ ಮಾಲ್ ಮುಂಭಾಗ ಕಾರ್ಯನಿರತ ಟ್ರಾಫಿಕ್ ಪೊಲೀಸರು ವಿನೋದ್ ಎಂಬ ಯುವಕ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುತ್ತಿದ್ದ ವೇಳೆ ತಡೆದು ನಿಲ್ಲಿಸಿದ್ದಾರೆ ನಂತರ ಆತನಿಗೆ ದಂಡ ಕಟ್ಟುವಂತೆ ತಿಳಿಸಿದ್ದಾರೆ. 

ಯುವಕ ನನ್ನ ಬಳಿ ಹಣವಿಲ್ಲ ದಂಡವನ್ನು ಆಮೇಲೆ ಕಟ್ಟುತ್ತೇನೆ ಎಂದು ಪೊಲೀಸರ ಬಳಿ ತಿಳಿಸಿದಾಗ ಏಕಾಏಕಿ ಯುವಕನ ಮೇಲೆ ಟ್ರಾಫಿಕ್  ASI ಮಹದೇವಯ್ಯ ಹಾಗೂ ಟ್ರಾಫಿಕ್ ಪಿ.ಸಿ.ಬರ್ಖತ್ ಹಾಗೂ ಮತ್ತೋರ್ವ ಸಿಬ್ಬಂದಿ ಮನಸೋ ಇಚ್ಚೆ ಸಾರ್ವಜನಿಕವಾಗಿ ಯುವಕನ ಮೇಲೆ  ಹಲ್ಲೆ ನಡೆಸಿದ್ದು ಹಲ್ಲೆ ನಡೆಸಿರುವ ದೃಶ್ಯಾವಳಿಗಳು ಸ್ಥಳೀಯ ಸಿಸಿ ಟಿವಿಯಲ್ಲಿ ದಾಖಲಾಗಿದೆ. ಘಟನೆ ನಡೆದ ವೇಳೆ ಯುವಕ ಪೊಲೀಸರಿಗೆ ನನಗೆ ಹರ್ನೀಯ ಆಪರೇಷನ್ ಆಗಿದೆ ಹಲ್ಲೇ ಮಾಡಬೇಡಿ ಎಂದು ಪರಿಪರಿಯಾಗಿ ಬೇಡಿಕೊಂಡರೂ ಅದನ್ನು ಲೆಕ್ಕಿಸದೆ ಯುವಕನ ಮೇಲೆ ಮರಣಾಂತಿಕವಾಗಿ ಹಲ್ಲೆ ನಡೆಸಿ ಅಮಾನವೀಯ ವರ್ತನೆ ತೋರಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಭೂಕುಸಿತವೆಂದು ಗುಡ್ಡಗಳೇ ಕುಸಿಯುತ್ತಿರೋದೇಕೆ?: ಮಾನವ ಕುಲಕ್ಕೆ ಪ್ರಕೃತಿಯ ಪ್ರತೀಕಾರ

ನಗರದ ಜಯಪುರ ನಿವಾಸಿ ಯುವಕ ವಿನೋದ್ ಮಾತನಾಡಿ ಘಟನೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು ಕಳೆದ ಹತ್ತು ದಿನಗಳ ಹಿಂದೆ ಹರ್ನಿಯ ಆಪರೇಷನ್ ಆಗಿದ್ದು ಆಪರೇಷನ್ ಆದ ಜಾಗಕ್ಕೆ ಪೊಲೀಸರು ಹಲ್ಲೆ  ಮಾಡಿದ್ದಾರೆ, ಕೂಡಲೇ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದೇನೆ,ಜಯಪುರ ನಿವಾಸಿ ಎಂದಿದಕ್ಕೆ ಜಾತಿ ಹಿಡಿದು ನಿಂದಿಸಿದರು,ಘಟನೆಗೆ ಕಾರಣರಾದ ಪೊಲೀಸ್ ಸಿಬ್ಬಂದಿಯ ಮೇಲೆ  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Latest Videos
Follow Us:
Download App:
  • android
  • ios