ಗುಲಾಮಿತನದ ಮಾನಸಿಕತೆಯಲ್ಲಿ ಅಧಿಕಾರಿ ವರ್ಗ: ವಿಶ್ವೇಶ್ವರ ಹೆಗಡೆ ಕಾಗೇರಿ

ಅಧಿಕಾರಿಶಾಹಿ ವಲಯ ಗುಲಾಮಿತನದ ಮಾನಸಿಕತೆಯಿಂದ ಇನ್ನೂ ಹೊರಬಂದಿಲ್ಲ  ಐಎಎಸ್‌ ಅಕಾಡೆಮಿಯ ಅಭ್ಯರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ

The officers are in the mentality of slavery says vishweshwar hegde kageri rav

 ಹುಬ್ಬಳ್ಳಿ (ಅ.1) : ಅಧಿಕಾರಿಶಾಹಿ ವಲಯ ಗುಲಾಮಿತನದ ಮಾನಸಿಕತೆಯಿಂದ ಇನ್ನೂ ಹೊರಬಂದಿಲ್ಲ. ಬ್ರಿಟಿಷರ ಕಾಲದ ಕಾನೂನುಗಳನ್ನೇ ಅಧಿಕಾರಿಗಳು ಪಾಲಿಸುತ್ತಿದ್ದಾರೆ. ಇದು ತಪ್ಪಿದರೆ ಜನರ ಅಲೆದಾಟ, ಬವಣೆ ಬಹುತೇಕ ನೀಗಿದಂತಾಗುತ್ತದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಿಸಿದರು. ಭಾನುವಾರ ಇಲ್ಲಿನ ವಿದ್ಯಾನಗರದ ಬಿವಿಬಿ ಕ್ಯಾಂಪಸ್‌ನಲ್ಲಿ ಸಮುತ್ಕರ್ಷ ಐಎಎಸ್‌ ಅಕಾಡೆಮಿ ಆಯೋಜಿಸಿದ್ದ 2022ನೇ ಸಾಲಿನ ಐಎಎಸ್‌ ಪರೀಕ್ಷೆ ತರಬೇತಿ ಬ್ಯಾಚ್‌ನ ಅಭ್ಯರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜ್ಞಾನದ ಕಾರಣದಿಂದ ಭಾರತ ಯಾವಾಗಲೋ ವಿಶ್ವಗುರುವಾಗಿತ್ತು. ಸೃಷ್ಟಿಯ ಸತ್ಯದ ಜ್ಞಾನದ ಬೆಳಕನ್ನು ಇಡೀ ಜಗತ್ತಿಗೆ ನೀಡುವ ಮೂಲಕ ಋುಷಿ ಮುನಿಗಳು, ತಪಸ್ವಿಗಳು ಭಾರತವನ್ನು ವಿಶ್ವಗುರು ಮಾಡಿದ್ದರು. ಅಲೆಗ್ಸಾಂಡರ್‌ನಿಂದ ಮೊಘಲರು, ಬ್ರಿಟಿಷರ ಆಡಳಿತದಿಂದ ನಮ್ಮ ದೇಶದ ಸಂಪತ್ತಿನ ಜತೆಗೆ ಜ್ಞಾನ ಸಂಪತ್ತನ್ನು ಕಳೆದುಕೊಂಡು ಗುಲಾಮಿತನದ ಮಾನಸಿಕ ಸ್ಥಿತಿಗೆ ದೇಶ ತಳ್ಳಲ್ಪಟ್ಟಿತು ಎಂದು ಹೇಳಿದರು.

ಚುನಾವಣಾ ಆಯೋಗ ಮತ್ತಷ್ಟು ಗಟ್ಟಿಯಾಗಬೇಕಿದೆ: ವಿಶ್ವೇಶ್ವರ ಹೆಗಡೆ ಕಾಗೇರಿ

ಅದೇ ಮನಸ್ಥಿತಿ ಇಂದಿನ ಅಧಿಕಾರಿಶಾಹಿ ವಲಯದಲ್ಲಿ ಮುಂದುವರಿದಿದೆ. 2014ರಲ್ಲಿ ವಿಧಾನಸೌಧವನ್ನು ಇ-ಕಚೇರಿ ಮಾಡಲು ಚಿಂತಿಸಲಾಗಿತ್ತು. ಅದೇ ವರ್ಷ ಅದನ್ನು ಹಿಮಾಚಲ ಪ್ರದೇಶ(Himachala Pradesh) ಜಾರಿಗೊಳಿಸಿದೆ. ಐಟಿ-ಬಿಟಿ(IT-BT) ಕ್ಷೇತ್ರದಲ್ಲಿ ಮುಂದಿರುವ ನಾವು ಈ ವಿಷಯದಲ್ಲಿ ಹಿಂದುಳಿದಿದ್ದೇವೆ. ಇದಕ್ಕೆ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ಗುಲಾಮಿತನದ ಮಾನಸಿಕತೆಯೇ ಕಾರಣ. ಇಂದು ಕಾರ್ಯಾಂಗ ತನ್ನ ಮೌಲ್ಯ, ಜವಾಬ್ದಾರಿ ಕಳೆದುಕೊಂಡಿದೆ ಎಂದು ಕಾಗೇರಿ ಅಸಮಾಧಾನ ವ್ಯಕ್ತಪಡಿಸಿದರು.

ಆದೇಶ ಜಾರಿ ಹಾಗೂ ಅದನ್ನು ಅನುಷ್ಠಾನ ಮಾಡುವುದು ಕಾರ್ಯಾಂಗದ ಹೊಣೆ. ರಾಷ್ಟ್ರಾಭಿಮಾನ, ಸಮಾಜಮುಖಿ ಚಿಂತನೆ, ಸಾಮಾಜಿಕ ಜವಾಬ್ದಾರಿ ಇಟ್ಟುಕೊಂಡು ದೇಶ ಮೊದಲು ಎಂಬ ಮನೋಭಾವದಿಂದ ಜನರ ಸಮಸ್ಯೆಗೆ ಸ್ಪಂದಿಸುವ ಅಧಿಕಾರಿಗಳಾಗಿ ಎಂದು ಅಭ್ಯರ್ಥಿಗಳಿಗೆ ಶುಭ ಹಾರೈಸಿದರು.

ಆರ್‌ಎಸ್‌ಎಸ್‌(RSS) ಪ್ರಾಂತ ಕಾರ್ಯವಾಹ ರಾಘವೇಂದ್ರ ಕಾಗವಾಡ((Raghavendra Kagawad) ಮಾತನಾಡಿ, ಕಂಡಿರುವ ಕನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಂಕಲ್ಪ ಕೈಗೊಳ್ಳಬೇಕು. ಆಗ ಮಾತ್ರ ಆಸೆ, ಗುರಿ ಈಡೇರಿಸಲು ಸಾಧ್ಯ. ಮೊದಲು ಭ್ರಮಾಲೋಕದಿಂದ ಹೊರಬಂದು ನಿರಂತರ ಪರಿಶ್ರಮದೊಂದಿಗೆ ನಿರಾಶಾವಾದಿಯಾಗದೆ ಗುರಿಯತ್ತ ಮುನ್ನಡೆಯಬೇಕು ಎಂದರು.

ದೇಶ ಮೊದಲು, ದೇಶಕ್ಕಾಗಿ ನಾನಿದ್ದೇನೆ ಎಂಬ ಭಾವನೆ ಮೂಡಲಿ: ಕಾಗೇರಿ

ಜಿತೇಂದ್ರ ನಾಯಕ(Jeetendra Nayak) ಪ್ರಾಸ್ತಾವಿಕ ಮಾತನಾಡಿ, ಉತ್ಕರ್ಷ ಕೋರ್ಸ್‌, ದಿಶಾ, ಉನ್ನತಿ ಕಾರ್ಯಕ್ರಮದ ಮೂಲಕ ಆನ್‌ಲೈನ್‌ ಹಾಗೂ ಆಫ್‌ಲೈನ್‌ ತರಬೇತಿ ನೀಡಲು ಉದ್ದೇಶಿಸಲಾಗಿದೆ. ದೇಶ ಮುನ್ನಡೆಸುವ ಉತ್ತಮ ವ್ಯಕ್ತಿತ್ವವುಳ ಅಧಿಕಾರಿಗಳ ನಿರ್ಮಾಣದಲ್ಲಿ ಟ್ರಸ್ಟ್‌ ನಿರತವಾಗಿದೆ ಎಂದು ತಿಳಿಸಿದರು.

ಸಮುತ್ಕರ್ಷ ಟ್ರಸ್ಟ್‌ ಅಧ್ಯಕ್ಷ ಡಾ. ವಿಜಯಭಾಸ್ಕರ್‌ ರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್‌ ಕಾರ್ಯಕಾರಿ ಮಂಡಳಿ ಸದಸ್ಯರಾದ ಅಚ್ಯುತ್‌ ಲಿಮಾಯೆ, ಶಿವಾನಂದ ಅವಟಿ, ಡಾ. ಶ್ರೀನಿವಾಸ ಪಾಟೀಲ, ದತ್ತಾತ್ರೇಯ ಜಿ. ಮತ್ತಿತರರಿದ್ದರು. ಉಪನ್ಯಾಸಕ ಪೂರ್ಣಾನಂದ ಮಳಲಿ ಪ್ರಾರ್ಥಿಸಿದರು. ಸಂತೋಷ್‌ ಕೆಲೊಜಿ ವಂದಿಸಿದರು. ವಿಶಾಲ್‌ ಸಂಗಣ್ಣವರ ನಿರೂಪಿಸಿದರು.

ಕೌಶಲ್ಯ ಶಿಕ್ಷಣ ಇಂದಿನ ಅಗತ್ಯ:

ನಿರುದ್ಯೋಗ ದೇಶದಲ್ಲಿ ತಾಂಡವವಾಡುತ್ತಿದೆ. ಯುವಕರಲ್ಲಿ ಆತ್ಮವಿಶ್ವಾಸ ಬೆಳೆಸಿ ಜತೆಗೆ ಕೌಶಲ್ಯ ಶಿಕ್ಷಣ ನೀಡುವುದು ಇಂದಿನ ಅಗತ್ಯವಾಗಿದೆ. ಪ್ರತಿಯೊಬ್ಬರಲ್ಲೂ ಶಕ್ತಿ, ಸಾಮರ್ಥ್ಯ, ಕೌಶಲ್ಯ ಇರುತ್ತದೆ. ಅದಕ್ಕೆ ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಹೊಣೆಯಾಗಿದೆ. ಯುವಕರಲ್ಲಿ ಕೌಶಲ್ಯ ಶಕ್ತಿ ಬೆಳೆಸಬೇಕು. ಕೌಶಲ್ಯ ಶಿಕ್ಷಣ ಶಿಕ್ಷಣದ ಒಂದು ಭಾಗವಾಗಿದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

 

Latest Videos
Follow Us:
Download App:
  • android
  • ios