Asianet Suvarna News Asianet Suvarna News

ಮೀನು ಉತ್ಪಾದನೆ ಹಾಗೂ ರಫ್ತಿನಲ್ಲಿ ರಾಜ್ಯವನ್ನು ನಂಬರ್ ಒನ್ ಮಾಡುವ ಉದ್ದೇಶ: ಸಚಿವ ಅಂಗಾರ

ದೇಶದಲ್ಲೇ ಕರ್ನಾಟಕವನ್ನ ಮೀನುಗಾರಿಕೆ ಉತ್ಪಾದನೆ ಮತ್ತು ರಫ್ತು ವಿಚಾರದಲ್ಲಿ ದೇಶದಲ್ಲಿ ನಂಬರ್ ಒನ್ ಮಾಡಬೇಕು ಎಂಬ ಉದ್ದೇಶವನ್ನ ಇಟ್ಟುಕೊಂಡಿದ್ದೇವೆ ಎಂದು ಬಂದರು ಮತ್ತು ಮೀನುಗಾರಿಕಾ ಸಚಿವ ಎಸ್.ಅಂಗಾರ ಹೇಳಿದ್ದಾರೆ. 

The objective is to make Karnataka number one in fish production and export says S Angara gvd
Author
First Published Nov 2, 2022, 4:07 PM IST

ಉಡುಪಿ (ನ.02): ದೇಶದಲ್ಲೇ ಕರ್ನಾಟಕವನ್ನ ಮೀನುಗಾರಿಕೆ ಉತ್ಪಾದನೆ ಮತ್ತು ರಫ್ತು ವಿಚಾರದಲ್ಲಿ ದೇಶದಲ್ಲಿ ನಂಬರ್ ಒನ್ ಮಾಡಬೇಕು ಎಂಬ ಉದ್ದೇಶವನ್ನ ಇಟ್ಟುಕೊಂಡಿದ್ದೇವೆ ಎಂದು ಬಂದರು ಮತ್ತು ಮೀನುಗಾರಿಕಾ ಸಚಿವ ಎಸ್.ಅಂಗಾರ ಹೇಳಿದ್ದಾರೆ. ಕೃತಕ ಮತ್ತು ನೈಸರ್ಗಿಕ ಮೀನುಗಾರಿಕೆಯ ಬಗ್ಗೆ ಕಾರ್ಯಗಾರದಲ್ಲಿ ಚರ್ಚೆಗಳನ್ನು ಮಾಡಲಾಗಿದೆ. 

ಸಿಹಿ ನೀರಿನ ಮೀನುಗಾರಿಕೆ, ಕೃತಕ ಮೀನುಗಾರಿಕೆ ಬಗ್ಗೆ ಕೂಡ ಯೋಜನೆಗಳನ್ನು ಮಾಡಲಾಗಿದೆ. ವಿಶ್ವದಲ್ಲೇ ಭಾರತವನ್ನು ಅತಿ ಹೆಚ್ಚು ಮೀನು ಉತ್ಪಾದನೆ ಮಾಡುವ ಮತ್ತು ರಫ್ತು ಮಾಡುವ ದೇಶ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಚಿಂತನೆ ಇದೆ. ದೇಶದ ಎಲ್ಲಾ ಮೀನುಗಾರಿಕಾ ಸಚಿವರಿಗೆ ಪ್ರಧಾನಿ ಸೂಚನೆ ಕೊಟ್ಟಿದ್ದಾರೆ ಎಂದು ಹೇಳಿದರು. ಫಿಶ್ ಮಿಲ್‌ಗಳಲ್ಲಿ ಮೀನು ಸಂಸ್ಕರಣೆ, ರಫ್ತು ಮಾಡುವ ಸಂದರ್ಭ ಬಹಳ ತ್ಯಾಜ್ಯಗಳು ಉಳಿಯುತ್ತವೆ. ತ್ಯಾಜ್ಯಗಳನ್ನ ಬಳಸಿ ಬಯೋಡೇಜಿಲ್ ಮಾಡುವ ಬಗ್ಗೆ ಚಿಂತನೆ ಇದೆ. 

ರಿಯಲ್ ಕಾಂತರಾಗೆ ಒಲಿದು ಬಂದ ರಾಜ್ಯೋತ್ಸವ ಪ್ರಶಸ್ತಿ; ದೈವನರ್ತಕ ಗುಡ್ಡಪಾಣಾರಗೆ ರಾಜ್ಯೋತ್ಸವದ ಗರಿ

ಮುಲ್ಕಿಯಲ್ಲಿರುವ ಮೀನುಗಾರಿಕಾ ಇಲಾಖೆಯ ಸಂಬಂಧ ಪಟ್ಟ ಜಮೀನಿನಲ್ಲಿ ಇದರ ಸಂಶೋಧನೆ ನಡೆಯುತ್ತದೆ. ಮುಂದಿನ ಜನವರಿ ತಿಂಗಳ ಒಳಗೆ ಈ ಪ್ರಾಜೆಕ್ಟ್ ಆರಂಭವಾಗುತ್ತದೆ ಎಂದರು. ಮೀನಿನ ಮಾರುಕಟ್ಟೆಯನ್ನು ಹೆಚ್ಚು ಮಾಡುವ ಕಾರ್ಯ ಯೋಜನೆಯನ್ನು ಸರ್ಕಾರ ರೂಪಿಸಿದೆ. ಮೀನಿಗೆ ಬೆಲೆ ನಿಗದಿಪಡಿಸುವ ಬಗ್ಗೆ ಚಿಂತನೆ ಇದೆ. ಮೀನಿನಿಂದ ಸಿಗುವ ಎಲ್ಲಾ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ ಆಲೋಚನೆ ಇದೆ. ಇದಕ್ಕೆ ಎಲ್ಲ ಮೂಲಭೂತ ವ್ಯವಸ್ಥೆಗಳನ್ನು ಮಾಡುತ್ತೇವೆ. ಜನತೆಗೆ ಮುಕ್ತ  ಇದೆ ರಾಜ್ಯ ಮತ್ತು ದೇಶಕ್ಕೆ ಜನ ಕೂಡ ಅದರ ಅಭಿವೃದ್ಧಿಯಲ್ಲಿ ಶ್ರಮಿಸಬೇಕು ಎಂದು ಹೇಳಿದರು. 

ಮೀನುಗಾರರಿಗೆ ಮುಂದಿನ ದಿನಗಳಲ್ಲಿ ಪೆಟ್ರೋಲ್ ಇಂಜಿನ್ ಪೂರೈಕೆ ಮಾಡುತ್ತೇವೆ: ಎರಡು ಮೂರು ದಿನದ ಒಳಗೆ ನಾಡದೋಣಿ ಮೀನುಗಾರರಿಗೆ ಸೀಮೆಎಣ್ಣೆ ಪೂರೈಕೆಯನ್ನು ಮಾಡುತ್ತೇವೆ. ಮೀನುಗಾರರಿಗೆ ಮುಂದಿನ ದಿನಗಳಲ್ಲಿ ಪೆಟ್ರೋಲ್ ಇಂಜಿನ್ ಪೂರೈಕೆ ಮಾಡುತ್ತೇವೆ. ಪೆಟ್ರೋಲ್ ಇಂಜಿನ್ ಬಳಸಿ ನಾಡ ದೋಣಿ ಮೀನುಗಾರಿಕೆಯನ್ನು ಮೀನುಗಾರು ಮಾಡಬೇಕು. ಕಡಿಮೆ ಸೀಮೆ ಎಣ್ಣೆಯನ್ನು ಬಳಸಬೇಕು ಮಾಲಿನ್ಯ ತಡೆಯಬೇಕಾಗಿದೆ. 

Udupi: ಪಡುಕೆರೆ ಬೀಚ್‌ಗೆ ಸಂಜೆ ನಂತರ ಪ್ರವಾಸಿಗರಿಗೆ ನೋ ಎಂಟ್ರಿ: ಸ್ಥಳೀಯರ ನಿರ್ಧಾರ

ತಾತ್ಕಾಲಿಕವಾಗಿ ಆಗಿರುವ ಸಮಸ್ಯೆಯನ್ನು ಕೂಡಲೇ ಪರಿಹರಿಸುತ್ತೇವೆ. ಮುಂದಿನ ದಿನಗಳಲ್ಲಿ ಪೆಟ್ರೋಲ್ ಇಂಜಿನ್ ಬಳಕೆಯನ್ನು ಹೆಚ್ಚು ಮಾಡುತ್ತೇವೆ ಎಂದರು. ಮಲ್ಪೆ ಬಂದರಿನಲ್ಲಿ ನಾಲ್ಕು ಕಡೆ ಹೂಳೆತ್ತುವ ಬಗ್ಗೆ ಈಗಾಗಲೇ ಕಾರ್ಯ ಯೋಜನೆ ಮಾಡಿದ್ದೇವೆ.  ಈ ಸಂಬಂಧ ಕೆಲವರು ನ್ಯಾಯಾಲಯದ ಮೆಟ್ಟಿಲೇರಿ ಇರುವುದರಿಂದ ಇದು ವಿಳಂಬವಾಗಿದೆ. ನಾಳೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭೇಟಿಯಾಗುತ್ತೇನೆ ಎರಡು ಮೂರು ದಿನ ಇದರ ಒಳಗೆ ಈ ಬಗ್ಗೆ ತೀರ್ಮಾನವನ್ನು ಮಾಡುತ್ತೇವೆ.

Follow Us:
Download App:
  • android
  • ios