Asianet Suvarna News Asianet Suvarna News

ಬೈಕ್‌ ಸುಟ್ಟು ಹೋದ ಪ್ರಕರಣ: ಕ್ಲೇಮು ತಿರಸ್ಕರಿಸಿದ್ದ ವಿಮಾ ಕಂಪನಿಗೆ ಬಿತ್ತು ಭಾರಿ ದಂಡ!

ನಿಯಮಾವಳಿ ಪ್ರಕಾರ ಇನ್ಶುರೆನ್ಸ್‌ ಹಣ ನೀಡದ ವಿಮಾ ಕಂಪನಿಗೆ ಇಲ್ಲಿಯ ಜಿಲ್ಲಾ ಗ್ರಾಹಕರ ಆಯೋಗವು ಪರಿಹಾರದೊಂದಿಗೆ ದಂಡ ನೀಡುವಂತೆ ಆದೇಶಿಸಿದೆ.

The insurance company that rejected the claim was fined heavily at dharwad rav
Author
First Published Mar 3, 2023, 8:10 AM IST | Last Updated Mar 3, 2023, 8:18 AM IST

ಧಾರವಾಡ (ಮಾ.3) : ನಿಯಮಾವಳಿ ಪ್ರಕಾರ ಇನ್ಶುರೆನ್ಸ್‌ ಹಣ ನೀಡದ ವಿಮಾ ಕಂಪನಿಗೆ ಇಲ್ಲಿಯ ಜಿಲ್ಲಾ ಗ್ರಾಹಕರ ಆಯೋಗವು ಪರಿಹಾರದೊಂದಿಗೆ ದಂಡ ನೀಡುವಂತೆ ಆದೇಶಿಸಿದೆ.

ಹುಬ್ಬಳ್ಳಿಯ ವಿದ್ಯಾನಗರ(Vidyanagara in hubballi)ದ ನಿವಾಸಿ ತುಷಾರ ಪವಾರ(Tushar pawar) ಎಂಬವರ ಬೈಕ್‌ ಇನ್ಶುರೆನ್ಸ್‌(Bike Insurance)ಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ನ್ಯೂ ಇಂಡಿಯಾ ಇನ್ಶುರೆನ್ಸ್‌ ಕಂಪನಿ(New India Insurance Company)ಗೆ ಗ್ರಾಹಕರ ಆಯೋಗ(Consumer commission) ಪರಿಹಾರ ಹಾಗೂ ದಂಡ ವಿಧಿಸಿದೆ.

1 ರೂಪಾಯಿ ಚಿಲ್ಲರೆ ಕೊಡದ ಕಂಡಕ್ಟರ್‌ಗೆ 3 ಸಾವಿರ ರೂ. ದಂಡ: ಬಿಎಂಟಿಸಿ ಸಿಬ್ಬಂದಿಗೆ ಕೋರ್ಟ್‌ ತರಾಟೆ

ತುಷಾರ, ಮುಂಬೈನ ಅಂಜನ್‌ ಅಟೋಮೊಟಿವ್‌ ಡೀಲರ್‌(Anjan Automotive Dealer mumbai)ನಿಂದ ಕವಾಸಾಕಿ-900 ಸುಪರ್‌ ಬೈಕ್‌ನ್ನು 2021ರ ಮೇ 13ರಂದು .14.99 ಲಕ್ಷ ನೀಡಿ ಖರೀದಿಸಿದ್ದರು. ಆ ಬೈಕಿಗೆ .39,006 ಪ್ರೀಮಿಯಮ್‌ ಕಟ್ಟಿ ನ್ಯೂ ಇಂಡಿಯಾ ಇನ್ಶುರೆನ್ಸ್‌ ಕಂಪನಿಯಿಂದ ವಿಮೆ ಸಹ ಮಾಡಿಸಿದ್ದರು. ಆ ವಾಹನಕ್ಕೆ ಮುಂಬೈನ ಪಶ್ಚಿಮ ಆರ್‌ಟಿಒ ಕಚೇರಿಯಿಂದ ತಾತ್ಕಾಲಿಕ ನೋಂದಣಿ ಸಹ ಆಗಿತ್ತು.

ಒಂದು ತಿಂಗಳ ಒಳಗಾಗಿ ಬೈಕಿಗೆ ಖಾಯಂ ನೋಂದಣಿ ಮಾಡಿಸಬೇಕಾಗಿತ್ತು. ಆದರೆ ಅದೇ ಸಮಯದಲ್ಲಿ ಕೋವಿಡ್‌-19(Covid virus) ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಆದುದರಿಂದ ಆರ್‌ಟಿಒ ಮತ್ತು ಇತರೇ ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಿದ್ದರಿಂದ ದೂರುದಾರ ತನ್ನ ಬೈಕಿಗೆ ಖಾಯಂ ನೋಂದಣಿ ಮಾಡಿಸಿರಲಿಲ್ಲ. ಈ ಮಧ್ಯದಲ್ಲಿ 2021ರ ಆಗಸ್ಟ್‌ 27ರಂದು ಆ ಬೈಕಿಗೆ ಆಕಸ್ಮಿಕ ಬೆಂಕಿ ತಗುಲಿ ಅದು ಸುಟ್ಟು ಹೋಯಿತು.

ಬೈಕಿನ ಮೇಲೆ ವಿಮೆ ಚಾಲ್ತಿಯಿದ್ದುದರಿಂದ ಅದರ ಮೌಲ್ಯ .14.99 ಲಕ್ಷ ನೀಡುವಂತೆ ದೂರುದಾರ ಇನ್ಶುರೆನ್ಸ್‌ ಕಂಪನಿಗೆ ಕ್ಲೇಮ್‌ ಅರ್ಜಿ ಹಾಕಿದ್ದರು. ಘಟನೆ ದಿನ ಸದರಿ ವಾಹನಕ್ಕೆ ಖಾಯಂ ನೋಂದಣಿ ಆಗಿರಲಿಲ್ಲ ಎನ್ನುವ ಕಾರಣವೊಡ್ಡಿ ಕ್ಲೇಮನ್ನು ವಿಮಾ ಕಂಪನಿ ತಿರಸ್ಕರಿಸಿತ್ತು. ಕೋವಿಡ್‌ ಅವಧಿಯಲ್ಲಿ ವಾಹನ ನೋಂದಣಿ ಮುಂದೂಡುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಆದೇಶಗಳಿದ್ದರೂ ಅವುಗಳನ್ನು ಪರಿಗಣಿಸದೇ ತನ್ನ ಕ್ಲೇಮನ್ನು ವಿಮಾ ಕಂಪನಿ ತಿರಸ್ಕರಿಸಿರುವುದನ್ನು ವಿರೋಧಿಸಿ ಪರಿಹಾರ ಒದಗಿಸುವಂತೆ ಜಿಲ್ಲಾ ಗ್ರಾಹಕರ ಆಯೋಗಕ್ಕೆ ತುಷಾರ ದೂರು ಸಲ್ಲಿಸಿದ್ದರು.

ಬೈಕಿಗೆ ಘಟನಾ ದಿನದಂದು ಖಾಯಂ ನೋಂದಣಿ ಆಗಿರಲಿಲ್ಲವಾದ್ದರಿಂದ ಅದು ವಿಮಾ ಪಾಲಸಿಯ ಷರತ್ತನ್ನು ಉಲ್ಲಂಘಿಸಿದಂತೆ. ಹೀಗಾಗಿ ದೂರುದಾರರ ಕ್ಲೇಮನ್ನು ವಜಾ ಮಾಡಿರುವುದಾಗಿ ಹೇಳಿ ವಿಮಾ ಕಂಪನಿ ಆಕ್ಷೇಪಣೆ ಎತ್ತಿತ್ತು. ಅವರ ದೂರು ಮತ್ತು ಆಕ್ಷೇಪಣೆ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿ.ಅ. ಬೋಳಶೆಟ್ಟಿಮತ್ತು ಪಿ.ಸಿ. ಹಿರೇಮಠ, ಘಟನೆಯ ದಿನ ಲಾಕ್‌ಡೌನ್‌ ಆಗಿದೆ. ಈ ಅವಧಿಯಲ್ಲಿ ಆರ್‌ಟಿಒ ಕಚೇರಿಗೆ ಬಂದು ವಾಹನ ನೋಂದಣಿ ಮಾಡಿಸುವುದು ಅಸಾಧ್ಯ. ಮಾಚ್‌ರ್‍-2020ರಿಂದ ಅಕ್ಟೋಬರ್‌-2021ರ ವರೆಗೆ ವಾಹನಗಳ ನೋಂದಣಿ ಪ್ರಕ್ರಿಯೆ ವಿಸ್ತರಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಆದೇಶ ಹೊರಡಿಸಿವೆ. ಇದೇ ಅವಧಿಯಲ್ಲಿ ದೂರುದಾರರ ಬೈಕ್‌ ಸುಟ್ಟು ಅವರಿಗೆ ನಷÜ್ಟಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಬೈಕ್‌ನ .14.99 ಲಕ್ಷ ಹಣವನ್ನು ದೂರುದಾರರಿಗೆ ಪರಿಹಾರವಾಗಿ ನೀಡಬೇಕೆಂದು ಆದೇಶಿಸಲಾಗಿದೆ.

Dharwad News: ಭರವಸೆಯ ಬೆಳಕಾದ ಗ್ರಾಹಕರ ಆಯೋಗ!

ಇದರೊಂದಿಗೆ ದೂರುದಾರರಿಗೆ ಆಗಿರುವ ಮಾನಸಿಕ ತೊಂದರೆಗಾಗಿ .50,000 ಪರಿಹಾರ ಹಾಗೂ ಪ್ರಕರಣದ ಖರ್ಚು ವೆಚ್ಚ .10,000 ದಂಡವನ್ನು ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಪಾವತಿಸಬೇಕು ಎಂದು ಜಿಲ್ಲಾ ಗ್ರಾಹಕರ ಆಯೋಗವು ಎದುರುದಾರರ ವಿಮಾ ಕಂಪನಿಗೆ ಆದೇಶಿಸಿದೆ.

Latest Videos
Follow Us:
Download App:
  • android
  • ios