ತಾಲೂಕಿನ ಬೆಂಗಳೆಯಲ್ಲಿ ಆರಂಭಿಸಲಾಗಿರುವ ಐಟಿ ಕಂಪನಿ ಆಲ್ಟ್‌ ಡಿಜಿಟಲ್‌ ಟೆಕ್ನಾಲಜಿಯನ್ನು ಸಚಿವ ಶಿವರಾಮ ಹೆಬ್ಬಾರ್‌ ಉದ್ಘಾಟಿಸಿದರು. ಇದರಿಂದಾಗಿ ಜಿಲ್ಲೆಯಲ್ಲಿ ಮೊದಲ ಐಟಿ ಕಂಪನಿ ಆರಂಭವಾದಂತಾಗಿದೆ.

ಶಿರಸಿ (ಫೆ.13) : ತಾಲೂಕಿನ ಬೆಂಗಳೆಯಲ್ಲಿ ಆರಂಭಿಸಲಾಗಿರುವ ಐಟಿ ಕಂಪನಿ ಆಲ್ಟ್‌ ಡಿಜಿಟಲ್‌ ಟೆಕ್ನಾಲಜಿಯನ್ನು ಸಚಿವ ಶಿವರಾಮ ಹೆಬ್ಬಾರ್‌ ಉದ್ಘಾಟಿಸಿದರು. ಇದರಿಂದಾಗಿ ಜಿಲ್ಲೆಯಲ್ಲಿ ಮೊದಲ ಐಟಿ ಕಂಪನಿ ಆರಂಭವಾದಂತಾಗಿದೆ.

Add Asianetnews Kannada as a Preferred SourcegooglePreferred

ಗ್ರಾಮೀಣ ಭಾಗವಾದ ಬೆಂಗಳೆಯಲ್ಲಿ ನೋಯ್ಡಾ ಮೂಲದ ಆಲ್ಟ್‌ ಡಿಜಿಟಲ್‌ ಟೆಕ್ನಾಲಜಿ(Alt Digital Technology) ಐಟಿ ಕಂಪನಿ(IT company)ಯ ಶಾಖೆ 12 ಮಂದಿ ತಂಡದೊಂದಿಗೆ ಆರಂಭವಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಹೆಬ್ಬಾರ್‌(Shivaram hebbar), ಬೆಂಗಳೂರಿನಲ್ಲಿ ಕಾಣಬಹುದಾಗಿದ್ದ ಟೆಕ್ಕಿಗಳು ಇಂದು ಹಳ್ಳಿಯಲ್ಲಿ ಕಾಣುತ್ತಿದ್ದಾರೆ. ಇದರಿಂದ ಪಾಲಕರು ಸಂತೋಷವಾಗಿದ್ದಾರೆ. ಮನೆಯಲ್ಲೇ ಇದ್ದು ಕೆಲಸ ಮಾಡಲು ಸಾಧ್ಯ ಎಂಬಂತಾಗಿದೆ. ಈ ಹಿಂದೆ ಈ ರೀತಿ ಐಟಿ ವಲಯ ಇಲ್ಲಿಗೆ ಬಾರದೇ ಇರಲು ಹಲವು ಕಾರಣಗಳಿದ್ದ​ವು. ಆದರೆ ಈಗ ಬೆಂಗ​ಳೂ​ರಿನ ಹೊರಗೂ ಕೆಲಸ ಮಾಡಲು ಅಗತ್ಯ ಇರುವ ಇಂಟರ್‌ನೆಟ್‌ ಹಾಗೂ ಏರ್‌ಪೋರ್ಚ್‌ನಂಥ ಸೌಲಭ್ಯಗಳು ಸಿಗುತ್ತಿವೆ ಎಂದ​ರು.

ಇದೇ ವೇಳೆ ಆಲ್ಟ್‌ ಡಿಜಿಟಲ್‌ ಕಂಪನಿಯ ನೂತನ ಕಚೇರಿಯನ್ನು ಹೆಬ್ಬಾರ್‌ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಕಂಪನಿ ಸಂಸ್ಥಾಪಕ ಅಧ್ಯಕ್ಷ ವಿಕಾಸ್‌ ಗೋಯಲ…, ಸುಗಾವಿ ಗ್ರಾಪಂ ಅಧ್ಯಕ್ಷ ಪ್ರಸನ್ನ ಹೆಗಡೆ, ಸ್ಥಳೀಯ ವೆಂಕಟೇಶ ಹೆಗಡೆ, ನಿತಿನ್‌ ಇದ್ದರು.

Uttara kannada news: ಬಿಜೆಪಿಯಿಂದ ಜನಪರ ಆಡಳಿತ ಸಾಧ್ಯ: ಸಚಿವ ಹೆಬ್ಬಾರ