SSLC: ಫೇಲಾಗುವ ಭಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಡಿಸ್ಟಿಂಕ್ಷನ್ನಲ್ಲಿ ಪಾಸ್..!
ಫೇಲಾಗುವ ಭಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಡಿಸ್ಟಿಂಕ್ಷನ್ನಲ್ಲಿ ಪಾಸ್ ಆಗಿದ್ದಾನೆ. ಆದ್ರೆ ಪ್ರಯೋಜನವಿಲ್ಲ. ಯಾಕಂದ್ರೆ ಡಿಸ್ಟಿಂಕ್ಷನಲ್ಲಿ ಪಾಸಾದ ಆ ವಿದ್ಯಾರ್ಥಿಯೇ ಇನ್ನಿಲ್ಲ. ದುಡುಕಿನ ನಿರ್ಧಾರಗಳು ಏನೆಲ್ಲ ಅನಾಹುತಗಳು ತಂದೊಡ್ಡುತ್ತವೆ ಎನ್ನುವುದಕ್ಕೆ ಈ ಸ್ಟೋರಿಯೇ ಸಾಕ್ಷಿ.
ಬೆಂಗಳೂರು, [ಏ.30]: ಎಸ್ ಎಸ್ ಎಲ್ ಸಿ ಫಲಿತಾಂಶ ಬರುವ ಮುನ್ನವೇ ಅನುತ್ತೀರ್ಣನಾಗುವೆನೆಂಬ ಭೀತಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯೊಬ್ಬ ಡಿಸ್ಟಿಂಕ್ಷನ್ನಲ್ಲಿ ಪಾಸಾಗಿದ್ದಾನೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಗಂಗವಾರ ಗ್ರಾಮದ ನಂದನ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ನಂದನ್ ಗಂಗವಾರದ ಸನ್ರೈಸ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ.
ಡೌನ್ ಸಿಂಡ್ರೋಮ್ ಬಾಧಿತ ಸುಶ್ರಾವ್ಯ: SSLCಯಲ್ಲಿ ಬರೆದಳೊಂದು ಗೆಲುವಿನ ಕಾವ್ಯ
ಇಂದು [ಮಂಗಳವಾರ] ಪ್ರಕಟಗೊಂಡ ಎಸ್ಎಸ್ಎಲ್ಸಿ ರಿಸಲ್ಟ್ ನಲ್ಲಿ ನಂದನ್ 625ಕ್ಕೆ 530 ಅಂಕ ಪಡೆದು ಉತ್ತೀರ್ಣನಾಗಿದ್ದಾನೆ.ಆದ್ರೆ, ತನ್ನ ದುಡುಕಿನ ನಿರ್ಧಾರದಿಂದ ಈ ವಿಚಾರ ತಿಳಿಯಲು ಈತನೇ ಇಲ್ಲವಾಗಿದ್ದಾನೆ.
ದುಡುಕಿನ ನಿರ್ಧಾರ ಕೈಗೊಳ್ಳುವ ಮುನ್ನವೇ ಒಮ್ಮೆ ಯೋಚಿಸುವುದು ಒಳಿತು.ಇಂತಹ ಪರೀಕ್ಷೆಗಳು ಒಂದಲ್ಲ ಐದಾರೂ ಬಾರಿ ಬರೆಯಬಹುದು. ಆದ್ರೆ ಒಮ್ಮೆ ಹೋದ ಜೀವ ಮತ್ತೆ ಬರಲ್ಲ ಎನ್ನುವುದನ್ನು ವಿದ್ಯಾರ್ಥಿಗಳು ಆತ್ಮವಲೋಕನ ಮಾಡಿಕೊಳ್ಳಬೇಕು.