ಅಜ್ಜಿಯನ್ನು ಕೊಲೆ ಮಾಡಿ ಶವ ಸುಟ್ಟು ಹಾಕಿದ್ದ ಮೊಮ್ಮಗನ ಬಂಧನ
: ಅಜ್ಜಿಯ ಬೈಗುಳ ಸಹಿಸಿಕೊಳ್ಳಲಾಗದೆ ಮೊಮ್ಮಗನೇ ಅಜ್ಜಿಯನ್ನು ಕೊಲೆಗೈದು ಶವಕ್ಕೆ ಬೆಂಕಿ ಹಚ್ಚಿದ್ದ ಮೊಮ್ಮಗನನ್ನು ಪೊಲೀಸರು ಬಂಧಿಸಿದ್ದಾರೆ.

ಮೈಸೂರು : ಅಜ್ಜಿಯ ಬೈಗುಳ ಸಹಿಸಿಕೊಳ್ಳಲಾಗದೆ ಮೊಮ್ಮಗನೇ ಅಜ್ಜಿಯನ್ನು ಕೊಲೆಗೈದು ಶವಕ್ಕೆ ಬೆಂಕಿ ಹಚ್ಚಿದ್ದ ಮೊಮ್ಮಗನನ್ನು ಪೊಲೀಸರು ಬಂಧಿಸಿದ್ದಾರೆ.
ಗಾಯತ್ರಿಪುರಂ ನಿವಾಸಿ ಸುಪ್ರೀತ್ (23) ಕೊಲೆ ಮಾಡಿದ ಯುವಕ. ಈತ ತನ್ನ ಅಜ್ಜಿ ಸುಲೋಚನಾ (75) ಎಂಬವರನ್ನು ಕೊಲೆಗೈದು, ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ರಟ್ಟಿನ ಡಬ್ಬಕ್ಕೆ ಹಾಕಿ ಕಾರಿನಲ್ಲಿ ಕೆಆರ್‌ಎಸ್ ಹಿನ್ನೀರಿಗೆ ತಂದು ಒಂದು ಗುಂಡಿಯಲ್ಲಿ ಹಾಕಿ ಸುಟ್ಟಿದ್ದಾನೆ. ಇತ್ತೀಚೆಗೆ ಅರೆಬೆಂದ ಸ್ಥಿತಿಯಲ್ಲಿ ವೃದ್ಧೆಯೊಬ್ಬರು ಶವ ಪತ್ತೆಯಾದ ಬಗ್ಗೆ ಇಲವಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣದ ಬೆನ್ನತ್ತಿದ ಇಲವಾಲ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಜಿ.ಎಸ್. ಸ್ವರ್ಣ ಅವರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಗಾಗ್ಗೆ ಬೈಯುತ್ತಿದ್ದ ಅಜ್ಜಿಯನ್ನು ಆರೋಪಿ ಸುಪ್ರೀತ್ ತಳ್ಳಿದ್ದಾನೆ. ತಳ್ಳಿದ ರಭಸಕ್ಕೆ ಅಜ್ಜಿ ಬಿದ್ದು ಗಾಯಗೊಂಡಿದ್ದಾರೆ. ಈ ವೇಳೆ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ, ಮೃತಹೇದವನ್ನು ಕೆಆರ್‌ಎಸ್ ಹಿನ್ನೀರಿನಲ್ಲಿ ತಂದು ಸುಟ್ಟುಹಾಕಿದ್ದಾನೆ. ತನಿಖಾ ತಂಡದಲ್ಲಿ ಇನ್‌ಸ್ಪೆಕ್ಟರ್ ಜಿ.ಎಸ್. ಸ್ವರ್ಣ, ಎಸ್‌ಐ ಸುರೇಶ್ ಬೋಪಣ್ಣ, ಸಿಬ್ಬಂದಿ ರವಿಕುಮಾರ್, ಧರ್ಮ, ಸಿದ್ದವೀರಪ್ಪ, ಪ್ರಕಾಶ್, ಜಗದೀಶ್ ಶೆಟ್ಟಿ, ಆನಂದ್, ಮನೋಹರ್, ಅರುಣೇಶ್, ಮಂಜುನಾಥ್ ಹಾಗೂ ನಿಂಗರಾಜಗೌಡ ಇದ್ದರು. ಪೊಲೀಸರ ಈ ಕಾರ್ಯವನ್ನು ಎಸ್ಪಿ ಸೀಮಾ ಲಾಟ್ಕರ್ ಅಭಿನಂದಿಸಿದ್ದಾರೆ.
ಅಜ್ಜಿಯ ವಿಡಿಯೋ ವೈರಲ್
ಒಂದು ಕಾಲದಲ್ಲಿ ದ್ವಿಚಕ್ರವಿರಲಿ ಯಾವುದೇ ವಾಹನವಿರಲಿ ಎಲ್ಲವೂ ಕೇವಲ ಪುರುಷರಿಗೆ ಮಾತ್ರ ಸೀಮಿತ ಎಂಬ ಕಾಲವಿತ್ತು. ಆದರೆ ಈಗ ಕಾಲ ಬದಲಾಗಿದೆ. ಪ್ರತಿಯೊಂದು ಮನೆಯಲ್ಲೂ ಗಾಡಿ ಇದೆ. ಪ್ರತಿ ಹೆಣ್ಣು ಮಕ್ಕಳು ವಾಹನ ಚಾಲನೆ ಕಲಿತು ಕಾರು ಬೈಕ್ ಸ್ಕೂಟಿ ಓಡಿಸುತ್ತಾರೆ. ಮತ್ತೆ ಕೆಲವು ಹೆಣ್ಣು ಮಕ್ಕಳು ಇನ್ನೂ ಮುಂದೆ ಸಾಗಿದ್ದು, ಬಸ್ ಲಾರಿ ಟ್ರಕ್ ಮುಂತಾದ ಬೃಹತ್ ವಾಹನಗಳನ್ನು ಕೂಡ ಚಾಲನೆ ಮಾಡಿ ಅದನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ. ವಾಹನ ಚಾಲನೆ ಪುರುಷರಿಗೆ ಮಾತ್ರ ಸೀಮಿತ ಎಂಬಂತಹ ಕಾಲಘಟ್ಟದ ವೃದ್ಧ ಮಹಿಳೆಯೊಬ್ಬರ ಬಿಂದಾಸ್ ಆಗಿ ಹೈವೇಯಲ್ಲಿ ಗಾಡಿ ಓಡಿಸುತ್ತಿದ್ದರೆ ಹೇಗನಿಸುತ್ತದೆ? ಪರವಾಗಿಲ್ಲ, ಭಲೇ ನಾರಿ ಈಕೆ ಎಂದು ಬಹುತೇಕರಿಗೆ ಅನಿಸುತ್ತದೆ. ಅದೇ ಕಾರಣಕ್ಕೆ ವೃದ್ಧ ಮಹಿಳೆಯೊಬ್ಬರು ಗಾಡಿ ಓಡಿಸುತ್ತಿದ್ದಾರೆ ಅವರ ಪಕ್ಕಾದಲ್ಲೇ ಸಾಗುತ್ತಿದ್ದವರು ಇವರ ವೀಡಿಯೋ ಮಾಡಿದ್ದು, ವೀಡಿಯೋ ನೋಡಿದ ವೃದ್ಧೆ ಕ್ಯಾಮರಾದತ್ತ ಪ್ಲೈಯಿಂಗ್ ಕಿಸ್ ಕೊಟ್ಟಿದ್ದಾರೆ. ಅಜ್ಜಿಯ ಬಿಂದಾಸ್ ನಡೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಅಜ್ಜಿಯ ಬಿಂದಾಸ್ ಸ್ಟೈಲ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ವೀಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ Shabeerzyed ಎಂಬುವವರು ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಹಿಂದೊಬ್ಬರು ಮಹಿಳೆಯನ್ನು ಕೂರಿಸಿಕೊಂಡು ವೃದ್ಧ ಮಹಿಳೆ ಬಿಂದಾಸ್ ಆಗಿ ಜೊತೆಗೆ ಬಹಳ ವೇಗವಾಗಿ ಗಾಡಿ ಓಡಿಸುತ್ತಿರುವುದನ್ನು ಕಾಣಬಹುದಾಗಿದೆ. ಈ ವೇಳೆ ಕ್ಯಾಮರಾ ನೋಡಿದ ಅವರು ಕ್ಯಾಮರಾದತ್ತ ಕೈ ಬೀಸಿ ಪ್ಲೈಯಿಂಗ್ ಕಿಸ್ ಮಾಡಿದರೆ, ಅವರ ಹಿಂದೆ ಕೂತಿದ್ದ ಮಹಿಳೆ ಟಾಟಾ ಮಾಡಿದ್ದಾರೆ.