ತಳಕು ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವಂತೆ ಬೀದಿಗಿಳಿದ ಗ್ರಾಮಸ್ಥರು

* ತಳಕು ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಗ್ರಾಮಸ್ಥರು ಒತ್ತಾಯ.
* ನೂರಾರು ಮಹಿಳೆಯರು & ಹೋರಾಟಗಾರರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ
* ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ತಳಕು ಗ್ರಾಮ

Thalaku  Villagers demands to upgrade Primary Health Hospital rbj

ಚಿತ್ರದುರ್ಗ, (ಜೂನ್ 13): ಇತ್ತೀಚೆಗೆ ಬೊಮ್ಮಾಯಿ ಸರ್ಕಾರ ನಾಡಿನ ಗ್ರಾಮಾಂತರ ಭಾಗದ ಜನರಿಗೆ ಉತ್ತಮ ಆರೋಗ್ಯ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸುವ ಮೂಲಕ ಉತ್ತಮ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆಗೆ ಸೂಚಿಸಿದೆ. ಆದ್ರೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ತಳಕು ಗ್ರಾಮದಲ್ಲಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಬಿಟ್ಟಿರುವುದಕ್ಕೆ ಇಡೀ ಗ್ರಾಮಸ್ಥರು ಉಗ್ರ ಪ್ರತಿಭಟನೆ ನಡೆಸಿದರು.

ಇಂದು(ಸೋಮವಾರ) ತಳಕು ಗ್ರಾಮದ ನೂರಾರು ಮಹಿಳೆಯರು ಹಾಗೂ ವಿವಿಧ ಜನಪರ ಹೋರಾಟಗಾರರೊಂದಿಗೆ ಚಿತ್ರದುರ್ಗದ ಪ್ರವಾಸಿ ಮಂದಿರದಿಂದ ಡಿಸಿ ಕಚೇರಿ ವರೆಗೆ ಬೃಹತ್ ಪ್ರತಿಭಟನೆ ನಡೆಸಿದರು. ಇಷ್ಟೇ ಅಲ್ಲದೇ ಜಿಲ್ಲಾಧಿಕಾರಿಯ ಕಚೇರಿ ಮುಂಭಾಗ ಧರಣಿ ಮಾಡಿದರು. ಯಾವುದೇ ಒಂದು ಸಂಘಟನೆಯ ಹೋರಾಟವಲ್ಲದೇ ಇದು ಹಲವು ಸಂಘಟನೆಗಳಾದ ಕರ್ನಾಟಕ ರಾಜ್ಯ ರೈತ ಸಂಘ ತ.ರಾ.ಸು ಕೆರೆ ಬಳಕೆದಾರರ ಸಂಘ, ಹಮಾಲರ ಸಂಘ, ದಲಿತರ ಸಂಘರ್ಷ ಸಮಿತಿ, ವಾಲ್ಮೀಕಿ ಯುವಕ ಸಂಘ, ಕಟ್ಟಡ ಕಾರ್ಮಿಕರ ಸಂಘ, ಶ್ರೀ ಶಕ್ತಿ ಮಹಿಳಾ ಸಂಘಗಳ ಒಕ್ಕೂಟ, ಆಟೋ ಚಾಲಕರ ಸಂಘ, ಹೀಗೆ ಹಲವು ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

Udupi ತಂಬಾಕು ಸೇವನೆ ಅಪಾಯದ ಕುರಿತು ಕಲಾವಿದನಿಂದ ವಿಶಿಷ್ಟ ಜಾಗೃತಿ

ಕರ್ನಾಟಕ ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಂಗಳೂರು ಇವರು ರಾಜ್ಯದ ಮಹತ್ವಕಾಂಕ್ಷಿ ತಾಲ್ಲೂಕುಗಳಲ್ಲಿ ಕಾರ್ಯ ಒತ್ತಡವಿರುವ ನೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸುವ ವಿಚಾರದಲ್ಲಿ ತಳಕು ಕೇಂದ್ರ ಸ್ಥಾನ ಕೈ ಬಿಟ್ಟಿರುವುದರಿಂದ ಈ ಭಾಗದ ತಳಕು ಹೋಬಳಿ ಎಲ್ಲಾ ರೈತರು, ಕೂಲಿ ಕಾರ್ಮಿಕ ವರ್ಗ ಹಾಗೂ ಬಡವರು ಮತ್ತು ಸಾರ್ವಜನಿಕರಿಗೆ ಬಹಳ ಅನ್ಯಾಯವಾಗಿರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು‌.

ಅದ್ದರಿಂದ ಆರೋಗ್ಯ ಇಲಾಖೆ ಅಧಿಕಾರಿಗಳು ನಮ್ಮ ತಳಕು ಆರೋಗ್ಯ ಕೇಂದ್ರಕ್ಕೆ ಭೇಟಿ ಕೊಟ್ಟು ಇಲ್ಲಿರುವ ವ್ಯವಸ್ಥೆಯನ್ನು ಪರಿಶೀಲನೆ ಮಾಡಿ ವರದಿಯನ್ನು ತಯಾರಿಸಿ ಸರ್ಕಾರದ ಈ ಮೇಲ್ದಾರ್ಜೆಯ ಪಟ್ಟಿಯಲ್ಲಿ ತಳಕು ಪ್ರಾಥಮಿಕ ಆರೋಗ್ಯ ಕೇಂದ್ರದ ಹೆಸರನ್ನು ಸೇರಿಸಿ ಈ ಭಾಗದ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಎಲ್ಲಾ ಒಕ್ಕೂಟಗಳು ಸರ್ಕಾರವನ್ನು ಒತ್ತಾಯ ಮಾಡಿದರು.

ತಳಕು ಗ್ರಾಮವು ಚಿತ್ರದುರ್ಗ ಜಿಲ್ಲೆಯಲ್ಲಿ ಹೋಬಳಿ ಕೇಂದ್ರಸ್ಥಾನವಾಗಿದ್ದು ಇಲ್ಲಿ ಪೋಲಿಸ್ ಠಾಣೆ, ರೈಲ್ವೇ ನಿಲ್ದಾಣ, ನಾಡ ಕಛೇರಿ, ಅಂಚೆ ಕಛೇರಿ, ಪಶು ವೈದ್ಯ ಶಾಲೆ, ಪ್ರೌಢ ಶಾಲೆ ಮತ್ತು ಸಂಯುಕ್ತ ಪದವಿ ಪೂರ್ವ ಕಾಲೇಜು ಇವೆ. ಇದರ ಜೊತೆಗೆ ವ್ಯವಸಾಯ ಸೇವಾ ಸಹಕಾರ ಸಂಘ, ವಾರದ ಸಂತೆ , ಮುಖ್ಯವಾಗಿ ರಾಷ್ಟ್ರೀಯ ಹೆದ್ದಾರಿ 151ಎ ರಸ್ತೆ ಇಲ್ಲಿ ಹಾದು ಹೋಗುತ್ತಿದ್ದು ಸುಮಾರು 40 ಸಾವಿರದಿಂದ 50 ಸಾವಿರ ಜನರ ಬದುಕಿನ ಆಶಾಕಿರಾಣವಾಗಿದ್ದು ಈ ಪ್ರಾಥಮಿಕ ಆರೋಗ್ಯ ಕೇಂದ್ರ ಚಿಕಿತ್ಸೆಯ ಸೇವೆಯನ್ನು ನೀಡುತ್ತಿದೆ. 

ಅಲ್ಲದೇ ತಳಕಿನ ಸಾಹಿತಿ ದಿಗ್ಗಜರಾದ ತ.ರಾ.ಸು, ತಳುಕಿನ ವೆಂಕಣಯ್ಯ, ತಾ.ಸು ಶಾಮರಾಯರು ಜನಿಸಿದ ಗ್ರಾಮವಾಗಿರುತ್ತದೆ ಈ ಸಾಹಿತಿಗಳ ತವರೂರನ್ನು ನೋಡಲು ಅನೇಕ ಪ್ರವಾಸಿಗರು ಈ ಸ್ಥಳಕ್ಕೆ ಬರುತ್ತಾರೆ. ಅದ್ದರಿಂದ ಈ ಭಾಗದ ಬಡ ಕೂಲಿ ಕಾರ್ಮಿಕರ ಹಾಗೂ ಸಾರ್ವಜನಿಕರ ಸೇವಾ ಹಿತ ದೃಷ್ಠಿಯಿಂದ ಮೇಲ್ದರ್ಜೆಯ ಸಮುದಾಯ ಆರೋಗ್ಯ ಕೇಂದ್ರ ಮುಖ್ಯವಾಗಿ ಬೇಕಾಗಿರುತ್ತದೆ. ಅದ್ದರಿಂದ ತಾವುಗಳು ಇದನ್ನು ಮನಗೊಂಡು ರಾಜ್ಯ ಸರ್ಕಾರ, ಜಿಲ್ಲಾ ಆಡಳಿತ, ತಾಲ್ಲೂಕು ಆಡಳಿತ ಹೋಬಳಿ ಮಟ್ಟದ ನಾಡ ಕಛೇರಿ ಮತ್ತು ಗ್ರಾಮ ಪಂಚಾಯಿ ಈ ಎಲ್ಲಾ ಸರ್ಕಾರದ ಆಡಳಿತಗಳು ಸೇರಿ ಈ ತಳಕಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮಾಡಬೇಕೆಂದು ತಳಕು ಹೋಬಳಿಯ ಎಲ್ಲಾ ಸಂಘಟನೆಗಳ ಒತ್ತಾಯಿಸಿದರು.

ತಳಕು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹೋರಾಟಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಅದಕ್ಕೆ ಸರ್ಕಾರ ಎಡೆಮಾಡಿಕೊಡದೇ ನಮ್ಮ ಮನವಿಗೆ ಕೂಡಲೇ ಸ್ಪಂದಿಸಬೇಕು ಎಂದು ಎಲ್ಲಾ ಗ್ರಾಮಸ್ಥರು ಆಗ್ರಹಿಸಿದರು.

Latest Videos
Follow Us:
Download App:
  • android
  • ios