ವಿಜಯಪುರ (ಮಾ.12): ಈಗಾಗಲೇ ದೇಶದ ಜನರಲ್ಲಿ ಭೀತಿ ಮೂಡಿಸಿರುವ ಕೊರೋನಾ ಬಗ್ಗೆ ಜನ ಆತಂಕಕ್ಕೊಳಗಾಗಿದ್ದಾರೆ. ವಿದೇಶದಿಂದ ಬರುತ್ತಿರುವವರ ಮೇಲಂತೂ ವಿಶೇಷ ನಿಗಾ ಇರಿಸಲಾಗುತ್ತಿದೆ.

ತಾಯಿ ಹಾಗೂ ಮಗುವಿನಲ್ಲಿ ಕೊರೋನಾ ವೈರಸ್ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ತಾಯಿ ಮತ್ತು ಮಗುವಿನ ಗಂಟಲು ದ್ರವದ ಮಾದರಿಯನ್ನು ಗುರುವಾರ ಪರೀಕ್ಷೆಗೆ ರವಾನೆ ಮಾಡಲಾಗಿದೆ.

ಭಾರತೀಯತೆಯನ್ನು ವಿಶ್ವದಾದ್ಯಂತ ಪರಿಚಯಿಸಿದ ಕೊರೋನಾ

ಮೊನ್ನೆ ಬೆಲ್ಜಿಯಂನಿಂದ ವಿಜಯಪುರಕ್ಕೆ ಆಗಮಿಸಿರುವ 26 ವರ್ಷದ ತಾಯಿ ಹಾಗೂ 1ವರೆ ವರ್ಷದ ಮಗುವನ್ನು ವೈರಸ್ ಬಾಧಿಸಿರಬಹುದೇ ಎಂಬ ಆತಂಕ ಸ್ಥಳೀಯರಲ್ಲಿ ಮನೆ ಮಾಡಿದೆ.

ಆರೋಗ್ಯ ಅಧಿಕಾರಿಗಳು ಇಂದು ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಿದ್ದಾರೆ. ಈ ಬಗ್ಗೆ ವಿಜಯಪುರ ಆರೋಗ್ಯ ಮೂಲಗಳು ಮಾಹಿತಿ ನೀಡಿವೆ. ಈಗಾಗಲೇ ದೇಶದಲ್ಲಿ ವಿದೇಶದಿಂದ ಬರುವವರ ಮೇಲೆ ತೀವ್ರ ನಿಗಾ ವಹಿಸಲಾಗಿದೆ.