ಭಾರತೀಯತೆಯನ್ನು ವಿಶ್ವದಾದ್ಯಂತ ಪರಿಚಯಿಸಿದ ಕೊರೋನಾ
ಕೊರೋನಾ ವೈರಸ್ ಹಾವಳಿ ವಿಶ್ವದಲ್ಲಿ ಸಾವಿರಾರು ಜನರನ್ನು ಬಲಿ ಪಡೆದಿದೆ. ಇದೇ ಹೊತ್ತಲ್ಲಿ ಭಾರತೀಯತೆಯನ್ನು ವಿಶ್ವಕ್ಕೆ ಪರಿಚಯಿಸಿದೆ.
ಹೊಸದುರ್ಗ (ಮಾ.12): ಸನ್ಮಾನಗಳು ಜನರನ್ನು ಮೆಚ್ಚಿಸುವುದಕ್ಕಲ್ಲ ಜವಾಬ್ದಾರಿಯನ್ನು ಹೆಚ್ಚಿಸುವುದಕ್ಕಾಗಿ ಎಂದು ಕುಂಚಿಟಿಗ ಮಠದ ಡಾ.ಶಾಂತವೀರ ಸ್ವಾಮೀಜಿ ಹೇಳಿದರು.
ಪಟ್ಟಣದ ಕುಂಚಿಟಿಗ ಮಠದಲ್ಲಿ ಮಂಗಳವಾರ ಸಂಜೆ ನಡೆದ ಸುಜ್ಞಾನ ಸಂಗಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ದೇಶಕ್ಕೆ ಕಾಲಿಟ್ಟಿರುವ ಕೊರೊನಾ ವೈರಸ್‌ಗೆ ಹೆದರುವ ಅವಶ್ಯಕತೆಯಿಲ್ಲ.
ಇದರಿಂದ ಜನ ಜಾಗೃತರಾಗಬೇಕು. ನಮ್ಮ ಮನೆ, ಮನ, ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡರೆ ಯಾವ ಕಾಯಿಲೆಗಳು ಹರಡುವುದಿಲ್ಲ. ಭಾರತೀಯರು ಪಾಶ್ಚಿಮಾತ್ಯ ರಾಷ್ಟ್ರಗಳ ಸಂಸ್ಕೃತಿಗೆ ಎಷ್ಟೇ ಮಾರು ಹೋಗಿದ್ದರೂ, ಸನಾತನ ಧರ್ಮದ ಆಚರಣೆಗಳು ಹೊಸ ಸ್ವರೂಪ ಪಡೆದುಕೊಂಡು ನಮಗರಿವಿಲ್ಲ ದಂತೆಯೇ ಆಚರಣೆಗೆ ಒಳಪಡುತ್ತಿವೆ. ಹಿರಿಯರು ನಡೆಸಿಕೊಂಡು ಬಂದ ಪ್ರತಿಯೊಂದು ಆಚರಣೆ, ಪದ್ಧತಿಯ ಹಿಂದೆ ವೈಜ್ಞಾನಿಕ ಹಿನ್ನೆಲೆಯಿದೆ
ಎಂದರು.
ವಿಜಯಪುರ: ವಿದೇಶದಿಂದ ಬಂದ 10 ಮಂದಿ, ಕೊರೋನಾ ವೈರಸ್ ಭೀತಿ!...
ಕೊರೋನಾ ವೈರಸ್ ಭಾರತೀಯ ಸಂಸ್ಕೃತಿಯನ್ನು ವಿಶ್ವದಾದ್ಯಂತ ಹರಡುತ್ತಿದೆ. ಕರೋನಾ ವೈರಸ್‌ಗೆ ಹೆದರಿ ಪಾಶ್ಚಿಮಾತ್ಯ ದೇಶಗಳು ಕೈಕುಲುಕುವ, ಆಲಿಂಗನ ಮಾಡಿಕೊಳ್ಳುವ ಬದಲು ಭಾರತೀಯ ಸಂಸ್ಕೃತಿಯಂತೆ ಕೈಮುಗಿದು ನಮಸ್ಕರಿಸುವ ಮೂಲಕ ಜನರನ್ನು ಅಭಿನಂದಿಸಲಾಗುತ್ತಿದೆ ಎಂದರು.