Asianet Suvarna News Asianet Suvarna News

Ramanagara: ಹಾಟ್‌ ಏರ್‌ ಬಲೂ​ನಿನ ಪರೀ​ಕ್ಷಾರ್ಥ ಹಾರಾಟ ಯಶ​ಸ್ವಿ

ರೇಷ್ಮೆ​ನ​ಗರಿ ರಾಮ​ನ​ಗರ ಜಿಲ್ಲೆಯ ಪ್ರವಾಸಿ ತಾಣ​ಗ​ಳನ್ನು ಅಭಿ​ವೃದ್ಧಿ ಪಡಿಸುವ ನಿಟ್ಟಿ​ನಲ್ಲಿ ಸಾಹಸ ಕ್ರೀಡೆ​ಗಳ ಪ್ರವಾ​ಸೋ​ದ್ಯ​ಮದ ಭಾಗ​ವಾಗಿ ಶನಿ​ವಾರ ಹಾಟ್‌ ಏರ್‌ ಬಲೂ​ನಿನ ಪ​ರೀ​ಕ್ಷಾರ್ಥ ಹಾರಾಟ ನಡೆ​ಸ​ಲಾ​ಯಿ​ತು.

Test flight of hot air balloon is successful at Ramanagara gvd
Author
First Published Nov 27, 2022, 10:18 PM IST

ರಾಮ​ನ​ಗರ (ನ.27): ರೇಷ್ಮೆ​ನ​ಗರಿ ರಾಮ​ನ​ಗರ ಜಿಲ್ಲೆಯ ಪ್ರವಾಸಿ ತಾಣ​ಗ​ಳನ್ನು ಅಭಿ​ವೃದ್ಧಿ ಪಡಿಸುವ ನಿಟ್ಟಿ​ನಲ್ಲಿ ಸಾಹಸ ಕ್ರೀಡೆ​ಗಳ ಪ್ರವಾ​ಸೋ​ದ್ಯ​ಮದ ಭಾಗ​ವಾಗಿ ಶನಿ​ವಾರ ಹಾಟ್‌ ಏರ್‌ ಬಲೂ​ನಿನ ಪ​ರೀ​ಕ್ಷಾರ್ಥ ಹಾರಾಟ ನಡೆ​ಸ​ಲಾ​ಯಿ​ತು.

ತಾಲೂ​ಕಿನ ಸುಗ್ಗ​ನ​ಹಳ್ಳಿ ಸಮೀ​ಪದ ಖಾಸಗಿ ರೆಸಾರ್ಚ್‌ವೊಂದ​ರಲ್ಲಿ ಹಾಟ್‌ ಏರ್‌ ಬಲೂ​ನಿನ ಪರೀ​ಕ್ಷಾರ್ಥ ಹಾರಾಟ ಯಶ​ಸ್ವಿ​ಯಾ​ಗಿದ್ದು, ಜಿಲ್ಲೆ​ಯಲ್ಲಿ ಚಾಲನೆ ನೀಡಲು ಉದ್ದೇ​ಶಿ​ಸಿ​ರುವ ಸಾಹಸ ಕ್ರೀಡೆ ಪ್ರವಾ​ಸೋ​ದ್ಯ​ಮಕ್ಕೆ ಹೊಸ ಹುರುಪು ಬಂದಂತಾ​ಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.​ಎನ್‌. ಅಶ್ವತ್ಥ ನಾರಾ​ಯಣ ಜಿಲ್ಲೆಯ ಪ್ರವಾ​ಸೋ​ದ್ಯ​ಮ​ದ ಅಭಿ​ವೃ​ದ್ಧಿಗೆ ಹೆಚ್ಚಿನ ಒತ್ತು ನೀಡು​ವು​ದರ ಜತೆಗೆ ಪೂರ​ಕ​ವಾದ ಯೋಜ​ನೆ​ಗಳನ್ನು ತಯಾ​ರಿಸಿ ಟೂರಿಂಗ್‌ ಹಬ್‌ ರೂಪಿ​ಸುವ ಕನಸು ಕಾಣು​ತ್ತಿ​ದ್ದಾರೆ.

Ramanagara: ಪಶುಪಾಲನಾ ಸೇವಾ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ

ಇತ್ತೀ​ಚೆ​ಗಷ್ಟೇ ಸಚಿ​ವರು ಪ್ರವಾ​ಸೋ​ದ್ಯಮ ಹೂಡಿ​ಕೆ​ದಾ​ರರ ಸಮಾ​ವೇಶ ​ನಡೆಸಿ ಪ್ರವಾ​ಸೋ​ದ್ಯ​ಮದ ಅಭಿ​ವೃದ್ಧಿ, ಬಂಡ​ವಾಳ ಹೂಡಿಕೆ ಹಾಗೂ ಉದ್ಯೋಗ ಸೃಷ್ಟಿಕುರಿತು ಚರ್ಚೆ ನಡೆ​ಸಿ​ದ್ದ​ರು. ಇದರ ಫಲ​ವಾಗಿ ಹೂಡಿ​ಕೆ​ದಾ​ರರು ಜಿಲ್ಲೆಯ ಪ್ರವಾ​ಸೋ​ದ್ಯ​ಮ​ದತ್ತ ಒಲವು ತೋರು​ತ್ತಿ​ದ್ದಾರೆ. ಜಿಲ್ಲೆಯಲ್ಲಿ ಪ್ರವಾಸಿ ತಾಣಗಳಲ್ಲಿ ಟ್ರಕ್ಕಿಂಗ್‌, ರಾಕಿಂಗ್‌, ಹೈ ರೋಪ್‌ ಕೋರ್ಸ್‌, ಕಾನ್‌ ಫಿ ರಾಕ್‌ ಮತ್ತು ಜಿಪ್‌ ಲೈನ್‌, ಬೋಟ್‌ ರೈಡಿಂಗ್‌, ಮೈಕ್ರೋ ಏರೋ ಸ್ಪೋಟ್ಸ್‌ರ್‍, ಪ್ಯಾರಾ ಮೋಟರ್ಸ್‌, ಹಾಚ್‌ ಏರ್‌ ಬಲೂನ್‌, ಬಂಜಿ ಜಂಪಿಂಗ್‌ ಸೇರಿದಂತೆ ಪ್ರವಾಸಿಗರನ್ನು ಆಕರ್ಷಿಸಲು ಇರುವಂತಹ ಚಟುವಟಿಕೆಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ.

ಇನ್ನು ಜಿಲ್ಲಾ​ಡ​ಳಿತ ಪ್ರವಾಸಿ ಸ್ಥಳಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಬರುವ ಸಂಘ-ಸಂಸ್ಥೆಗಳು ಹಾಗೂ ವ್ಯಕ್ತಿಗಳಿಗೆ ಅವಶ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸಲು ಮುಂದಾ​ಗಿ​ದೆ. ಇದರಿಂದ ಜಿಲ್ಲೆಯಲ್ಲಿನ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವು​ದರ ಜೊತೆಗೆ ಸ್ಥಳೀಯರಿಗೆ ಉದ್ಯೋಗ ಒದಗಿಸುವಂತಾಗುತ್ತದೆ ಎನ್ನುತ್ತಾರೆ ಪ್ರವಾ​ಸೋದ್ಯಮ ಇಲಾಖೆ ಅಧಿ​ಕಾ​ರಿ​ಗಳು.

Ramanagara: ಶುಕ್ರವಾರ ದಿನದಂದೇ ವೃದ್ದೆಯರ ಟಾರ್ಗೆಟ್ ಮಾಡಿ ಸರಗಳ್ಳತನ ಮಾಡುತ್ತಿದ್ದ ಗ್ಯಾಂಗ್ ಬಂಧನ

ಏರ್‌ ಅಡ್ವೆಂಚರ್‌ ಸ್ಪೋರ್ಟ್ಸ್‌ ಬಲೂನಿಂಗ್‌: ಬಲೂ​ನಿಂಗ್‌ ಬಿಸಿ ಗಾಳಿಯ ಬಲೂನಿನ ಹಾರಾಟವನ್ನು ಒಳಗೊಂಡಿರುವ ಒಂದು ಉತ್ತೇಜಕ ಏರ್‌ ಕ್ರೀಡೆಯಾಗಿದೆ. ಹಾಟ್‌ ಏರ್‌ ಬಲೂನಿಂಗ್‌ ಇದರ ಇನ್ನೊಂದು ಹೆಸರು. ಸಾಹಸಮಯ ಕ್ರೀಡೆಗಳಲ್ಲಿ ಒಂದಾಗಿರುವ ಹಾಟ್‌ ಏರ್‌ ಬಲೂ​ನಿಂಗ್‌ ಸಾಹಸ, ರೋಮಾಂಚನಕಾರಿ ಆಗಿ​ರು​ತ್ತದೆ. ಆಕಾಶವನ್ನು ಅನ್ವೇಷಿಸಲು ಹಾಗೂ ಹೆಚ್ಚಿನ ಎತ್ತರದಿಂದ ಭೂದೃಶ್ಯದ ಪಕ್ಷಿ ನೋಟವನ್ನು ಬಲೂ​ನಿಂಗ್‌ನಲ್ಲಿ ಕಣ್ತುಂಬಿ​ಕೊ​ಳ್ಳ​ಬ​ಹು​ದಾ​ಗಿದೆ.

Follow Us:
Download App:
  • android
  • ios