Ramanagara: ಪಶುಪಾಲನಾ ಸೇವಾ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ

ರಾಜ್ಯದ ಪಶುಪಾಲನಾ ಮತ್ತು ಪಶು ವೈದ್ಯ​ಕೀಯ ಸೇವಾ ಇಲಾಖೆಯಲ್ಲಿ ವೈದ್ಯರ ಕೊರತೆಯಿಂದ ಆಸ್ಪತ್ರೆ ಮುಚ್ಚಿರುವುದರಿಂದ ಪಶು ಸಂಗೋಪನಾ ಇಲಾಖೆ ಸೌಲಭ್ಯದಿಂದ ಹಲವು ರೈತರು ವಂಚಿತರಾಗುತ್ತಿದ್ದಾರೆ.

Shortage of staff in Animal Husbandry Services Department at Ramanagara District gvd

ಗೋವಿಂದರಾಜು ಜಕ್ಕಸಂದ್ರ

ಹಾರೋ​ಹ​ಳ್ಳಿ (ನ.27): ರಾಜ್ಯದ ಪಶುಪಾಲನಾ ಮತ್ತು ಪಶು ವೈದ್ಯ​ಕೀಯ ಸೇವಾ ಇಲಾಖೆಯಲ್ಲಿ ವೈದ್ಯರ ಕೊರತೆಯಿಂದ ಆಸ್ಪತ್ರೆ ಮುಚ್ಚಿರುವುದರಿಂದ ಪಶು ಸಂಗೋಪನಾ ಇಲಾಖೆ ಸೌಲಭ್ಯದಿಂದ ಹಲವು ರೈತರು ವಂಚಿತರಾಗುತ್ತಿದ್ದಾರೆ. ಜೊತೆಗೆ ಹಾಲಿನ ಇಳುವರಿ ಹೆಚ್ಚಳಕ್ಕೆ ಉತ್ತಮ ಆಹಾರ ಉತ್ಪಾದನೆಯ ಬಿತ್ತನೆ ಬೀಜ, ಜೋಳ, ರಾಸುಗಳನ್ನು ಕಾಡುತ್ತಿರುವ ಗಂಟು ರೋಗಕ್ಕೆ ಲಸಿಕೆ ಚಿಕಿತ್ಸೆ ಸೌಲಭ್ಯಕ್ಕೂ ರೈತರು ಪರದಾಡುತ್ತಿದ್ದಾರೆ. ಇತ್ತೀಚೆಗೆ ರಾಸುಗಳನ್ನು ಕಾಡುತ್ತಿರುವ ಗಂಟು ರೋಗ ನಿವಾರಣೆಗೆ ಸರ್ಕಾರ ಲಸಿಕಾ ಅಭಿಯಾನ ಹಮ್ಮಿಕೊಂಡಿದೆ. ಆದರೆ, ಬಹುತೇಕ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲದೆ ಚರ್ಮ ಗಂಟುರೋಗ ಲಸಿಕಾ ಅಭಿಯಾನಕ್ಕೂ ತೊಡಕಾಗಿ ತುರ್ತು ಸಮಯದಲ್ಲಿ ಚಿಕಿತ್ಸೆ ನೀಡಲು ವೈದ್ಯರ ಕೊರತೆ ಉಂಟಾಗಿದೆ.

ಅರ್ಧಕರ್ಧ ಸಿಬ್ಬಂದಿಗಳಿಲ್ಲ: ರಾಜ್ಯದ ಪಶುಪಾಲನಾ ಸೇವಾ ಇಲಾಖೆಯಲ್ಲಿ 52 ದರ್ಜೆಯ ಶ್ರೇಣಿಗಳಿದ್ದು ಒಟ್ಟು 18,562 ಸಿಬ್ಬಂದಿಗಳಿರಬೇಕು. ಆದರೆ, ಅದರಲ್ಲಿ ಭರ್ತಿಯಾಗಿರುವುದು 9383 ಹುದ್ದೆಗಳು, ಇನ್ನುಳಿದ 9,179 ಖಾಲಿ ಹುದ್ದೆಗಳು ಭರ್ತಿಯಾಗಿಲ್ಲ. ಅಂದರೆ ರಾಜ್ಯದ ಪಶುಪಾಲನಾ ಇಲಾಖೆಯಲ್ಲಿ ಸೇವೆ ನೀಡಲು ಆರ್ಧಕರ್ಧ ಸಿಬ್ಬಂದಿಗಳಿಲ್ಲ ಸರ್ಕಾರ ಕೆಲವು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿ ಪ್ರಕ್ರಿಯೆ ಆರಂಭಿಸಿದೆ ಅವುಗಳು ಯಾವ ಕಾಲಕ್ಕೆ ಭರ್ತಿಯಾವುದೋ ತಿಳಿಯುವುದಿಲ್ಲ.

ಶುಕ್ರವಾರ ದಿನದಂದೇ ವೃದ್ದೆಯರ ಟಾರ್ಗೆಟ್ ಮಾಡಿ ಸರಗಳ್ಳತನ ಮಾಡುತ್ತಿದ್ದ ಗ್ಯಾಂಗ್ ಬಂಧನ

ಇರುವ ವೈದ್ಯರಿಗೂ ಒತ್ತಡ ಹೆಚ್ಚಳ: ರಾಜ್ಯದ ಗ್ರಾಮೀಣ ಪ್ರದೇಶದ ಪಶು ಆಸ್ಪತ್ರೆಗಳಲ್ಲಿ 2800ಕ್ಕೂ ಹೆಚ್ಚು ಪಶು ವೈದ್ಯರ ಅವಶ್ಯಕತೆಯಿದ್ದು ಈ ಪೈಕಿ 1800 ವೈದ್ಯರಿದ್ದು ಇನ್ನು 1000ಕ್ಕೂ ಹೆಚ್ಚು ವೈದ್ಯರಿಲ್ಲದೇ ಆಸ್ಪತ್ರೆಗಳಿಗೆ ಇರುವ ವೈದ್ಯರನ್ನು ಪ್ರಭಾರ ವೈದ್ಯರಾಗಿ ನೇಮಕ ಮಾಡಿರುವುದರಿಂದ ಒತ್ತಡ ಹೆಚ್ಚಾಗಿದೆ. ಬಿಡುವಿಲ್ಲದೆ ಒತ್ತಡದಲ್ಲಿರುವ ಪಶು ವೈದ್ಯರಿಗೆ ಮತ್ತೊಂದು ಆಸ್ಪತ್ರೆ ಜವಾಬ್ದಾರಿ ನೀಡಿಲಾಗಿದೆ. ಜೊತೆಗೆ ಗ್ರೂಪ್‌ ಡಿ ನೌಕರರ ಕೊರತೆ ಇರುವುದರಿಂದ ವೈದ್ಯರು ಮತ್ತಷ್ಟುಒತ್ತಡದಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯವಿದೆ.

ಸಂತಾನೋತ್ಪತ್ತಿಗೂ ತೊಂದರೆ: ವೈದ್ಯರಿಲ್ಲದ ಗ್ರಾಮಗಳಲ್ಲಿ ರಾಸುಗಳ ಸಂತಾನೋತ್ಪತ್ತಿಗೂ ಹಿನ್ನಡೆಯಾಗುತ್ತಿದೆ. ಕಾಲಕಾಲಕ್ಕೆ ರಾಸುಗಳಿಗೆ ಕೃತಕ ಗರ್ಭಧಾರಣೆ ಚಿಕಿತ್ಸೆಗೆ ವೈದ್ಯರು ಬೇಕು. ಆದರೆ, ವೈದ್ಯರಿಲ್ಲದಿರುವುದು ರೈತರಲ್ಲಿ ಹೈನುಗಾರಿಕೆ ಮೇಲಿನ ಆಸಕ್ತಿ ಕಡಿಮೆಯಾಗುತ್ತಿದೆ. ಸ್ವಾವಲಂಬನೆ ಸಾಧಿಸಬೇಕು ಎಂದು ಹೇಳುವ ಸರ್ಕಾರ ಮಾತ್ರ, ಸ್ವಾವಲಂಬನೆ ಸಾಧಿಸಿರುವ ರೈತರ ಸಮಸ್ಯೆಗೆ ಸ್ಪಂದಿಸದಿರುವುದು ರೈತರಲ್ಲಿ ಅಸಮಾಧಾನ ತಂದಿದೆ. ಸರ್ಕಾರ ಇತ್ತ ಗಮನಹರಿಸಿ, ಪಶು ಆಸ್ಪತ್ರೆಯಲ್ಲಿ ಖಾಲಿ ಹುದ್ದೆಗಳನ್ನುಭರ್ತಿ ಮಾಡಿ, ರೈತರ ಸಮಸ್ಯೆಗೆ ಅಂತ್ಯ ಹಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಸರಿಯಾದ ಚಿಕಿತ್ಸೆ ಸಿಗದೆ ಸಾಕು ಪ್ರಾಣಿಗಳ ಸಾವು: ವೈದ್ಯರ ಕೊರತೆಯಿಂದ ಸಮಯಕ್ಕೆ ಸರಿ ಚಿಕಿತ್ಸೆ ಸಿಗದೆ, ಸಾಕು ಪ್ರಾಣಿಗಳು ಸಾವನ್ನಪ್ಪಿದರೆ, ರಾಸುಗಳ ವಿಮಾ ಪರಿಹಾರ ಪಡೆಯುವುದು ರೈತರಿಗೆ ಸವಾಲಾಗಿ ಪರಿಣಮಿಸಿದೆ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಪಶು ವೈದ್ಯರ ಕೊರತೆ ಹೆಚ್ಚಾಗಿದೆ. ಕೆಲವು ಗ್ರಾಮಗಳಲ್ಲಿ ಅನಾರೋಗ್ಯಕ್ಕೆ ತುತ್ತಾಗುವ ರಾಸುಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ, ಸಾವನ್ನಪ್ಪಿರುವ ಉದಾಹರಣೆಗಳಿವೆ. ಮೃತಪಡುವ ರಾಸುಗಳ ವಿಮಾ ಪರಿಹಾರ ಪಡೆಯಲು ವೈದ್ಯರು ಇಲ್ಲದಿರುವುದು ರೈತರಿಗೆ ತೊಡಕಾಗಿ ಪರಿಣಮಿಸಿದೆ. ರಾಸುಗಳು, ಕುರಿ, ಮೇಕೆಯಂತಹ ಸಾಕು ಪ್ರಾಣಿಗಳು ಆಕಸ್ಮಿಕವಾಗಿ ಮೃತಪಟ್ಟರೆ, ವಿಮಾ ಸೌಲಭ್ಯ, ಸರ್ಕಾರದಿಂದ ಪರಿಹಾರ ಸಿಗಲಿದೆ.

ಮರಣೋತ್ತರ ಪರೀಕ್ಷೆ ನಡೆಸಲು ವೈದ್ಯರಿಲ್ಲ: ಯಾವುದೇ ಸಾಕುಪ್ರಾಣಿಗಳು ಮೃತಪಟ್ಟಾಗ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ, ನೀಡುವ ವರದಿ ಆಧಾರ ಮೇಲೆ ಪರಿಹಾರ ಬಿಡುಗಡೆಯಾಗಬೇಕು. ಆದರೆ, ವೈದ್ಯರ ಕೊರತೆಯಿಂದ ಅನಾರೋಗ್ಯ ಮತ್ತು ವಿಷ ಜಂತುಗಳ ಕಡಿತಕ್ಕೆ ಬಲಿಯಾಗುವ ರಾಸು, ಕುರಿ, ಮೇಕೆಗಳು ಸಾವನ್ನಪ್ಪಿದಾಗ ಮರಣೋತ್ತರ ಪರೀಕ್ಷೆ ನಡೆಸಲು ವೈದ್ಯರಿಲ್ಲದೆ, ಅನೇಕ ರೈತರು ಪರಿಹಾರ ಸಿಗದೆ ನಷ್ಟಅನುಭವಿಸುತ್ತಿದ್ದಾರೆ. ಮೃತ ಪ್ರಾಣಿಗಳನ್ನು ತಾಲೂಕು ಕೇಂದ್ರದ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಿ, ಪರಿಹಾರಕ್ಕೆ ಅರ್ಜಿ ಸಲ್ಲಿಸಬೇಕಾದ ಅನಿವಾರ್ಯ ರೈತರಿಗಿದೆ.

ಪಶು ಸಂಚಾರಿ ಆಂಬುಲೆನ್ಸ್‌ ಸೇವೆ ಇಲ್ಲ: ಸಿಬ್ಬಂದಿ ಹಾಗೂ ಚಾಲಕರ ಕೊರತೆ ಜತೆಗೆ ವೈದ್ಯರ ಕೊರತೆಯಿಂದ ಜಿಲ್ಲೆಯಲ್ಲಿ ಪಶು ಸಂಚಾರಿ ಆಯಂಬುಲೆನ್ಸ್‌ ಆಸ್ಪತ್ರೆಯ ಆವರಣದಲ್ಲೇ ತುಕ್ಕು ಹಿಡಿಯುತ್ತಿದೆ. ಪಶು ಇಲಾಖೆ ನೀಡಿದ ತುರ್ತು ಸೇವಾ ನಂರ್ಬ ಗೆ ಕರೆ ಮಾಡಿದರಂತೂ ಆಂಬುಲೆನ್ಸ್‌ ಸೇವೆ ತಾತ್ಕಾಲಿಕವಾಗಿ ಲಭ್ಯವಿಲ್ಲ ಎಂಬ ಉತ್ತರ ದೊರೆಯುತ್ತದೆ. ಇದರಿಂದ ಜಿಲ್ಲೆಯ ಹೆದ್ದಾರಿಯಲ್ಲಿ ಪಶುಗಳು ಅಪಘಾತಕ್ಕೀಡಾದರೆ ತುರ್ತು ಸೇವೆ ಸಿಗುತ್ತಿಲ್ಲ. ಪಶುಗಳಿಗೆ ರೋಗ ರುಜಿನಗಳು ಬಂದರೂ ಚಿಕಿತ್ಸೆ ನೀಡಲು ವೈದ್ಯರೇ ಇಲ್ಲ. ಅಲ್ಲದೇ, ಪಶುಗಳಿಗೆ ಅಗತ್ಯವಿರುವ ಔಷಧಿಗಳ ಕೊರತೆ ಕೂಡಾ ಸಾಕಷ್ಟಿದೆ. ಸರ್ಕಾರ ಕೋಟಿಗಟ್ಟಲೇ ವೆಚ್ಚ ಮಾಡಿ ಸಂಚಾರಿ ಪಶು ಸಂಜೀವಿನಿ ಆಯಂಬುಲೆನ್ಸ್‌ ಸೇವೆ ಪ್ರಾರಂಭಿಸಿದರೂ ಎಲ್ಲವೂ ವ್ಯರ್ಥವಾಗಿ ಹೋಗಿರುವುದರಿಂದ ಇದೀಗ ಗೋಪಾಲಕರು ಸರ್ಕಾರದ ಕಾರ್ಯವೈಖರಿ ವಿರುದ್ಧ ಕಿಡಿ​ಕಾ​ರು​ತ್ತಿ​ದ್ದಾ​ರೆ.

ವಿಧಾನಸೌಧದ ಮುಂಭಾಗದಲ್ಲೂ ಕೆಂಪೇಗೌಡರ ಪ್ರತಿಮೆ ನಿರ್ಮಾಣ: ಸಚಿವ ಅಶ್ವತ್ಥ ನಾರಾ​ಯಣ

ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದ್ದು ಈಗಾಗಲೇ ಕೆಲವು ಹುದ್ದೆಗಳಿಗೆ ಭರ್ತಿ ಮಾಡುವ ಪ್ರಕ್ರಿಯೆ ಆರಂಭಗೊಡಿದ್ದು ಕೆಲವು ತಾಂತ್ರಿಕ ಸಮಸ್ಯೆಯಿಂದ ನಿಧಾನವಾಗುತ್ತಿದ್ದು ಆದಷ್ಟುಬೇಗ ಭರ್ತಿ ಮಾಡಲಾಗುವುದು.
- ಎಸ್‌.ಅ​ಶ್ವತಿ, ಆಯುಕ್ತರು ಪಶುಪಾಲನಾ ಮತ್ತು ಪಶು ವೈದ್ಯ ಇಲಾಖೆ

ರಾಸುಗಳಿಗೆ ಆರೋಗ್ಯದ ತೊಂದರೆ ಉಂಟಾದರೆ ವೈದ್ಯರು ಸಂಪರ್ಕ ಮಾಡಲು ಹೋದಾಗ ಕೆಲವು ಸಮಯದಲ್ಲಿ ವೈದ್ಯರಿಲ್ಲದೇ ವೈದ್ಯರು ಎರಡು ಮೂರು ಕಡೆಗಳಲ್ಲಿ ಕೆಲಸ ಮಾಡುವುದರಿಂದ ಅವರಿಗೂ ಕೆಲಸದ ಒತ್ತಡ ಆಗಿ ನಮ್ಮಗೂ ಬಹಳ ತೊಂದರೆಯಾಗಿದೆ.
- ಶ್ರೀನಿ​ವಾಸ, ರೈತ, ರಾಮ​ನ​ಗರ

Latest Videos
Follow Us:
Download App:
  • android
  • ios