ಉಡುಪಿ(ಜ.15): ಉಡುಪಿಯಲ್ಲಿ ಬಂಧಿತರಾದ ಉಗ್ರರು ತಮ್ಮ ಗುರುತು ಅಡಗಿಸಿಕೊಳ್ಳಲು ಶೇವ್ ಮಾಡಿದ್ದರು ಎಂಬ ಮಾಹಿತಿ ಈಗ ಬೆಳಕಿಗೆ ಬಂದಿದೆ. ತಮಿಳುನಾಡಿನಿಂದ ತಪ್ಪಿಸಿಕೊಂಡಿದ್ದ ಉಗ್ರರನ್ನು ಉಡುಪಿಯಲ್ಲಿ ಬಂಧಿಸಲಾಗಿದ್ದು, ಗುರುತು ಪತ್ತೆ ಹಚ್ಚಲು ಸಾಧ್ಯವಾಗದಂತೆ ಶೇವ್ ಮಾಡಿಕೊಳ್ಳಲಾಗಿದೆ.

ಮಿಳುನಾಡಿನಿಂದ ಪರಾರಿಯಾಗಿ ತಪ್ಪಿಸಿಕೊಂಡಿದ್ದ ಇಬ್ಬರು ಉಗ್ರರನ್ನು ಉಡುಪಿಯಲ್ಲಿ ಬಂಧಿಸಲಾಗಿದೆ. ರಾಜ್ಯದಲ್ಲಿ ಜಿಹಾದಿಗಳಿಂದ ವಿಧ್ವಂಸಕ ಕೃತ್ಯಕ್ಕೆ ಸಂಚು ನಡೆಸಲು ಪ್ಲಾನ್ ಮಾಡಲಾಗಿತ್ತು ಎನ್ನಲಾಗಿದೆ. ಉಡುಪಿಯಲ್ಲಿ ಅರೆಸ್ಟ್ ಆದ ಅಬ್ದುಲ್‌ ಶಮೀಮ್ ಹಾಗೂ ತೌಫಿಕ್‌ನ್ನು ಜಡ್ಜ್ ಮನೆಗೆ ಹಾಜರುಪಡಿಸಲಾಗಿದೆ.

ತಮಿಳುನಾಡಲ್ಲಿ ತಪ್ಪಿಸಿಕೊಂಡ ಉಗ್ರರು ಉಡುಪಿಯಲ್ಲಿ ಅರೆಸ್ಟ್

ಇಂದು ತಮಿಳುನಾಡಿನಲ್ಲೂ ಸರ್ಕಾರಿ ರಜೆ ಇರುವ ಹಿನ್ನೆಲೆಯಲ್ಲಿ ಕನ್ಯಾಕುಮಾರಿಯ ಜಡ್ಜ್ ಮನೆಯಲ್ಲಿ ಇಬ್ಬರು ಉಗ್ರರನ್ನು ಹಾಜರುಪಡಿಸಲು ತೀರ್ಮಾನಿಸಲಾಗಿದೆ. ಎಎಸ್‌ಐ ವಿಲ್ಸನ್ ಹತ್ಯೆ ಸಂಬಂಧ ತಮಿಳುನಾಡು ಟೀಮ್ ಕನ್ಯಾಕುಮಾರಿ ಕೋರ್ಟ್ ಜಡ್ಜ್ ಮನೆಗೆ ಆರೋಪಿಗಳನ್ನು ಹಾಜರುಪಡಿಸಲಿದ್ದಾರೆ.

ಹಾಜರು ಪಡಿಸಿದ ನಂತ ತಮಿಳುನಾಡು ಕ್ಯೂ ಟೀಮ್ ಉಗ್ರರ ವಿಚಾರಣೆ ನಡೆಸಲಿದ್ದಾರೆ. ಉಡುಪಿಯಲ್ಲಿ ಅರೆಸ್ಟ್ ಆಗಿದ್ದ ಉಗ್ರಗಾಮಿಗಳ ಫೋಟೋ ಸುವರ್ಣನ್ಯೂಸ್‌ಗೆ ಲಭ್ಯವಾಗಿದ್ದು, ಉಗ್ರರು ಪೊಲೀಸರಿಗೆ ಗೊತ್ತಾಗದಂತೆ ಕ್ಲೀನ್ ಶೇವ್ ಮಾಡಿಕೊಂಡಿದ್ದರು.

ಮಂಗಳೂರು ಪ್ರತಿಭಟನಾ ಸಭೆ: ಹೀಗಿದೆ ಪೊಲೀಸ್ ಭದ್ರತೆ..!

ಶಮೀಮ್ ಹಾಗೂ ತೌಫಿಕ್ ಸಿಸಿಬಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಕ್ಲೀನ್ ಶೇವ್ ಮಾಡಿಕೊಂಡಿದ್ದರು. ಆದರೆ ಉಗ್ರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ನಂತರ ತಮಿಳುನಾಡು ಕ್ಯೂ ಟೀಮ್‌ಗೆ ಹಸ್ತಾಂತರಿಸಿದ್ದಾರೆ.