ಶಿರವಾಡ ರೈಲು ನಿಲ್ದಾಣದಲ್ಲಿ ಉಗ್ರರ ಸೆರೆ! ಸಾಗರ ಕವಚ ಅಣಕು ಕಾರ್ಯಾಚರಣೆಯ ಭಾಗವಾಗಿ ಜಾಗೃತಿ ಕಾರ್ಯಕ್ರಮ

ಕಾರವಾರ (ನ.16) : ತಾಲೂಕಿನ ಶಿರವಾಡ ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ ಇಬ್ಬರು ಉಗ್ರರನ್ನು ಪೊಲೀಸರು ಬಂಧಿಸಿದ್ದು, ಅವರ ಬಳಿ ಇದ್ದ ಬಾಂಬ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇದು ನಿಜವಲ್ಲ. ಭಯಪಡುವ ಅಗತ್ಯವಿಲ್ಲ. ವಿವಿಧ ಭದ್ರತಾ ಪಡೆಗಳು ಕರಾವಳಿ ಭಾಗದಲ್ಲಿ ಮಂಗಳವಾರ ನಡೆದ ಸಾಗರ ಕವಚ ಅಣಕು ಕಾರ್ಯಾಚರಣೆಯ ಸಂದರ್ಭವಾಗಿದೆ. ಕರಾವಳಿ ಪ್ರದೇಶದಲ್ಲಿ ಭದ್ರತೆಯನ್ನು ಪರಿಶೀಲಿಸಲು ವಿವಿಧ ಭದ್ರತಾ ಪಡೆಗಳು ಜಂಟಿಯಾಗಿ ನಡೆಸುವ ವಿಶೇಷ ಅಣಕು ಕಾರ್ಯಾಚರಣೆಯಾಗಿದೆ.

ಅಣಕು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಕರಾವಳಿ ತಾಲೂಕಿನಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದು, ರಾಷ್ಟ್ರೀಯ ಹೆದ್ದಾರಿಯ ಆಯ್ದ ಕಡೆ ತಾತ್ಕಾಲಿಕ ನಾಕಾಬಂದಿಗಳನ್ನು ನಿರ್ಮಿಸಿ, ವಾಹನಗಳನ್ನು ತಪಾಸಣೆ ಮಾಡಿದರು.\ ಅರಬ್ಬಿ ಸಮುದ್ರದಲ್ಲಿ ಕೋಸ್ಟ್‌ಗಾರ್ಡ್‌ ಹಾಗೂ ಕರಾವಳಿ ಕಾವಲು ಪಡೆ ಸಿಬ್ಬಂದಿ ಗಸ್ತು ತಿರುಗಿದರು. ಆಯಕಟ್ಟಿನ ಜಾಗದಲ್ಲೂ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ.

ಅರೆಬರೆ ಉಡುಪು ಧರಿಸಿ ಸಂಚರಿಸಬೇಡಿ: ಗೋಕರ್ಣ ಮಹಾಬಲೇಶ್ವರ ದೇಗುಲ ಸಮಿತಿಯ ವಿವಾದಿತ ಬ್ಯಾನರ್..!

ಭಾರತೀಯ ನೌಕಾಸೇನೆ, ಕೋಸ್ಟ್‌ಗಾರ್ಡ್‌, ಕರಾವಳಿ ಕಾವಲು ಪಡೆ ಹಾಗೂ ಪೊಲೀಸ್‌ ಇಲಾಖೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು, ಇದರಲ್ಲಿ ರೆಡ್‌ ಫೋರ್ಸ್‌ ಹಾಗೂ ಬ್ಲೂ ಫೋರ್ಸ್‌ ಎಂದು ಎರಡು ಗುಂಪುಗಳನ್ನು ಮಾಡಲಾಗುತ್ತದೆ.

ರೆಡ್‌ ಫೋರ್ಸ್‌ನಲ್ಲಿ ಇರುವ ನೌಕಾನೆಲೆ ಸಿಬ್ಬಂದಿ ಮಾರುವೇಷದಲ್ಲಿ ಬಂದು ಬಾಂಬ್‌ ಮಾದರಿಯ ಪೆಟ್ಟಿಗೆಗಳನ್ನು ಆಯ್ದ ಸ್ಥಳಗಳಲ್ಲಿ ಇಡಬೇಕು. ಬ್ಲೂ ಪೋರ್ಸ್‌ನಲ್ಲಿ ಇರುವ ಪೊಲೀಸ್‌ ಸಿಬ್ಬಂದಿ ನಿಗದಿತ ಸ್ಥಳಕ್ಕೆ ನೌಕಾಸೇನಾ ಸಿಬ್ಬಂದಿ ಬಾಂಬ್‌ ತೆಗೆದುಕೊಂಡು ಹೋಗುವ ಮೊದಲೇ ಪತ್ತೆ ಮಾಡಬೇಕು. ಇದರಲ್ಲಿ ಪೊಲೀಸರು ವಿಫಲರಾದರೆ ಭದ್ರತೆ ಹೆಚ್ಚಿಸುವ ಕುರಿತು ಗಮನ ನೀಡಲಾಗುತ್ತದೆ. ವರ್ಷದಲ್ಲಿ ಎರಡು ಬಾರಿ ಈ ಕಾರ್ಯಾಚರಣೆ ನಡೆಸಲಾಗುತ್ತದೆ. Uttara Kannada: ಆಸ್ತಿ ವಿವಾದಕ್ಕೆ ಅಣ್ಣನನ್ನೇ ಹೊಡೆದು ಕೊಂದ ಸಹೋದರರು, ವಿಡಿಯೋ ವೈರಲ್!