Asianet Suvarna News Asianet Suvarna News

ಕೇಸರಿ ಬಾವುಟ ತೆರವಿನಿಂದ ಗೊಂದಲ: ಶಿವಮೊಗ್ಗದಲ್ಲಿ ಉದ್ವಿಗ್ನ ಪರಿಸ್ಥಿತಿ

ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ವೇಳೆ ನಗರದ ಶಿವಪ್ಪ ನಾಯಕ ವೃತ್ತ ಹಾಗೂ ಎ.ಎ. ವೃತ್ತದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು.  ಇದನ್ನು ತೆರವುಗೊಳಿಸುವ ವಿಚಾರಕ್ಕೆ ಶುಕ್ರವಾರ ರಾತ್ರಿ ಎರಡು ಕೋಮುಗಳ ನಡುವೆ ಗೊಂದಲ ಉಂಟಾಗಿತ್ತು.  ಇದರಿಂದ ಬಿಗುವಿನ ವಾತಾವರಣ ಸೃಷ್ಠಿಯಾಗಿತ್ತು.  ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್‌ ಸ್ಥಳಕ್ಕೆ ಭೇಟಿ ನೀಡಿ, ಪರಿಸ್ಥಿತಿ ತಿಳಿಗೊಳಿಸಿದರು. 

Tense Situation in Shivamogga For Confusion from Saffron Flag Clearance grg
Author
First Published Oct 1, 2023, 5:44 AM IST

ಶಿವಮೊಗ್ಗ(ಅ.01): ಹಿಂದೂ ಮಹಾಮಂಡಳಿ ಗಣಪತಿ ವಿಸರ್ಜನೆ ಮೆರವಣಿಗೆ ದಿನ ನಗರದಲ್ಲಿ ಕಟ್ಟಲಾಗಿದ್ದ ಕೇಸರಿ ಬಾವುಟವನ್ನು ತೆಗೆದಿದ್ದಕ್ಕೆ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ ಕಾರಣ, ಶುಕ್ರವಾರ ರಾತ್ರಿ ನಗರದ ಶಿವಪ್ಪ ನಾಯಕ ವೃತ್ತದ ಬಳಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. 

ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ವೇಳೆ ನಗರದ ಶಿವಪ್ಪ ನಾಯಕ ವೃತ್ತ ಹಾಗೂ ಎ.ಎ. ವೃತ್ತದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು.  ಇದನ್ನು ತೆರವುಗೊಳಿಸುವ ವಿಚಾರಕ್ಕೆ ಶುಕ್ರವಾರ ರಾತ್ರಿ ಎರಡು ಕೋಮುಗಳ ನಡುವೆ ಗೊಂದಲ ಉಂಟಾಗಿತ್ತು.  ಇದರಿಂದ ಬಿಗುವಿನ ವಾತಾವರಣ ಸೃಷ್ಠಿಯಾಗಿತ್ತು.  ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್‌ ಸ್ಥಳಕ್ಕೆ ಭೇಟಿ ನೀಡಿ, ಪರಿಸ್ಥಿತಿ ತಿಳಿಗೊಳಿಸಿದರು. 

ಹಿಂದೂ ಮಹಾಗಣಪತಿ ವಿಸರ್ಜನೆ: ಕೇಸರಿಮಯವಾದ ಶಿವಮೊಗ್ಗ..!

ಓಂ ಗಣಪತಿ ವಿಸರ್ಜನೆ ಮೆರವಣಿಗೆ ಮುಗಿದ ಮೇಲೆ ಕೇಸರಿ ಬಾವುಟ ಹಾಗೂ ಬಂಟಿಂಗ್ಸ್‌ಗಳನ್ನು ತೆರವು ಮಾಡಲಾಗುವುದು ಎಂದು ಅಲಂಕಾರ ಸಮಿತಿ ತಿಳಿಸಿತ್ತು.  ಅದರಂತೆ ನಗರದ ವಿವಿಧ ವೃತ್ತಗಳಲ್ಲಿ ಮೆರವಣಿಗೆ ಹಾದುಹೋಗುವ ಮಾರ್ಗದಲ್ಲಿ ಅಲಂಕಾರ ಮಾಡಲಾಗಿತ್ತು.  ಕಟ್ಟಡಗಳ ಮೇಲೆ ಕೇಸರಿ ಬಾವುಟಗಳನ್ನು ಸಹ ಕಟ್ಟಲಾಗಿತ್ತು. ಆದರೆ, ಶುಕ್ರವಾರ ಸಂಜೆ ಕಸ್ತೂರ ಬಾ ಫ್ಲೆಕ್ಸ್‌ ಹೋರ್ಡಿಂಗ್ಸ್‌ ಮೇಲೆ ಕಟ್ಟಿದ್ದ ಕೇಸರಿ ಬಾವುಟವನ್ನು ತೆರವು ಮಾಡಲಾಗಿತ್ತು. 
ಇದರಿಂದ ಅಲಂಕಾರ ಸಮಿತಿಯರು ಓಂ ಗಣಪತಿ ಮೆರವಣಿಗೆ ನಂತರ ನಾವೇ ತೆಗೆಯುತ್ತೇವೆ.  ತೆರವುಗೊಳಿಸಿರುವ ಕೇಸರಿ ಬಾವುಟವನ್ನು ಮತ್ತೆ ಕಟ್ಟುವಂತೆ ಪಟ್ಟುಹಿಡಿದರು. ಈ ವೇಳೆ ಬಿಗುವಿನ ವಾತಾವರಣ ಸೃಷ್ಠಿಯಾಗಿತ್ತು.  ಕೂಡಲೇ ಸ್ಥಳಕ್ಕೆ ಆಗಮಿಸಿದ ಎಸ್‌ಪಿ ಮಿಥುನ್‌ಕುಮಾರ್‌ ಎರಡು ಸಮುದಾಯದವರೊಂದಿಗೆ ಚರ್ಚೆ ನಡೆಸಿದರು.  ಬಳಿಕ ತೆರವುಗೊಳಿಸಿದ್ದ ಸ್ಥಳದಲ್ಲಿಯೇ ಪೊಲೀಸರು ಕೇಸರಿ ಧ್ವಜಗಳನ್ನು ಕಟ್ಟಿಸಿದರು.  ಅನಂತರ ಅಲಂಕಾರ ಸಮಿತಿಯವರು ಅಲ್ಲಿಂದ ವಾಪಸ್‌ ಆದರು.  

ಘಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್‌ ಅವರು, ಅಲಂಕಾರದ ವಿಚಾರವಾಗಿ ಎರಡು ಕಡೆಯಿಂದಲೂ ಕೆಲ ಗೊಂದಲಗಳಿದ್ದವು.  ಸಣ್ಣ ಗೊಂದಲ ಉಂಟಾಗಿತ್ತು.  ಎಲ್ಲರೊಟ್ಟಿಗೆ ಮಾತನಾಡಿ  ಗೊಂದಲವನ್ನು ನಿವಾರಿಸಿದ್ದೇವೆ.  ಕೆಲವೊಮ್ಮೆ ಸಣ್ಣಪುಟ್ಟ ವಿಷಯಕ್ಕೆ ಈ ರೀತಿ ಘಟನೆ ನಡೆಯುತ್ತದೆ.  ಸಾರ್ವಜನಿಕರು ಯಾರು ಕೂಡ ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದರು. 

Follow Us:
Download App:
  • android
  • ios