Asianet Suvarna News Asianet Suvarna News

'ಹಿಂದೂಗಳ ಮನಸ್ಸಿಗೆ ನೋವು ಮಾಡಿದರೆ ಬಿಜೆಪಿ ಒಂದೂ ಸ್ಥಾನ ಗೆಲ್ಲಲ್ಲ'

  •  'ಹಿಂದೂಗಳ ಮನಸ್ಸಿಗೆ ನೋವು ಮಾಡಿದರೆ ಬಿಜೆಪಿ ಒಂದೂ ಸ್ಥಾನ ಗೆಲ್ಲಲ್ಲ'
  • ಇಡೀ ವಿಶ್ವದಲ್ಲಿ ಹಿಂದೂ ಧರ್ಮ ಉಳಿದಿರುವುದು. ಭಾರತದಲ್ಲಿ ಮಾತ್ರ
  • ಹಿಂದುತ್ವ, ರಾಷ್ಟ್ರೀಯತೆ ಆಧಾರದಲ್ಲಿರುವ ಬಿಜೆಪಿಯು ಹಿಂದೂಗಳಿಗೆ ನೋವುಂಟಾಗುವ ವಿಚಾರಕ್ಕೆ ಕೈ ಹಾಕಬಾರದು ಎಂದ ಸ್ವಾಮೀಜಿ
Temple Demolition issue Om Shri mutt swamiji unhappy over Karnataka Bjp govt snr
Author
Bengaluru, First Published Sep 27, 2021, 3:25 PM IST

ಚಾಮರಾಜನಗರ (ಸೆ.27): ಹಿಂದೂಗಳ (Hindu) ಮನಸ್ಸಿಗೆ ನೋವುಂಟು ಮಾಡಿದರೆ ಕರ್ನಾಟಕದಲ್ಲಿ (Karnataka) ಬಿಜೆಪಿ ಒಂದೂ ಸ್ಥಾನವನ್ನು ಗೆಲ್ಲಲ್ಲವೆಂದು ಮಂಗಳೂರಿನ ಓಂ ಶ್ರೀ ಮಠದ ಸ್ವಾಮೀಜಿ ಎಚ್ಚರಿಸಿದರು. 

ರಾಮೇಶ್ವರಕ್ಕೆ ತೆರಳುವಾಗ ನಗರದಲ್ಲಿ ಮಾಧ್ಯಗಳೊಂದಿಗೆ ಶ್ರೀಗಳು ಮಾತನಾಡಿ, ಇಡೀ ವಿಶ್ವದಲ್ಲಿ ಹಿಂದೂ ಧರ್ಮ ಉಳಿದಿರುವುದು. ಭಾರತದಲ್ಲಿ (India) ಮಾತ್ರ, ನಮ್ಮಲ್ಲಿ ಮಾತ್ರ ಹಿಂದೂ ಸಂಸ್ಕೃತಿ ಉಳಿಸಲು ಸಾಧ್ಯ. ಹಿಂದುತ್ವ, ರಾಷ್ಟ್ರೀಯತೆ ಆಧಾರದಲ್ಲಿರುವ ಬಿಜೆಪಿಯು ಹಿಂದೂಗಳಿಗೆ ನೋವುಂಟಾಗುವ ವಿಚಾರಕ್ಕೆ ಕೈ ಹಾಕಬಾರದು. 

ಒಂದು ವೇಳೆ ನೋವುಂಟು ಮಾಡಿದ್ದಲ್ಲಿ ಚುನಾವಣೆಯಲ್ಲಿ ಅವರು ಒಂದೂ ಸ್ಥಾನವನ್ನು ಗೆಲ್ಲಲ್ಲ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು. 

ಮೈಸೂರಲ್ಲಿ 93 ದೇವಾಲಯ ತೆರವು : ಚರ್ಚ್ ಮತ್ತು ಮಸೀದಿ ಇಲ್ಲವೆ ಎಂದು ಸಿಂಹ ಆಕ್ರೋಶ

ಆರ್ ಟಿಸಿ ಹಿಡಿದು ದೇವಾಲಯ ಕಟ್ಟಲು ಸಾಧ್ಯವಿಲ್ಲ. ಚೈತನ್ಯ, ಶಕ್ತಿ, ಪ್ರಾಣ ಎಲ್ಲಿ ದೆಯೋ ಅಲ್ಲಿ ದೇವಾಸ್ಥಾನ (Temple) ನಿರ್ಮಾಣವಾಗ ಲಿದೆ. ಹಿಂದೂ ಧರ್ಮದ ಹೆಸರಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿಯು ದೇವಾ ಲಯಗಳ ರಕ್ಷಣೆಗೆ ಮುಂದಾಗಬೇಕೆ ಹೊರತು ತೆರವು ಗೊಳಿಸುವುದಲ್ಲ ಎಂದು ಹೇಳಿದರು. 

ನೆಲದ ಸಂಸ್ಕೃತಿ, ಮಹತ್ವ ಅರಿಯದ ಐಎಎಸ್ (IAS) ಅಧಿಕಾರಿಗಳ ಮಾತನ್ನು ಕೇಳುವುದನ್ನು ಸರ್ಕಾರ ಮೊದಲು ಬಿಡಬೇಕು ಎಂದು ಅಭಿಪ್ರಾಯಪಟ್ಟರು. ಕೊಡಚಾದ್ರಿ ದೇವಾಲಯ ಅಭಿವೃದ್ಧಿಗೆ ಒತ್ತಾಯ: ಜನರ ಕಲ್ಯಾಣಕ್ಕೆ ಕಾನೂನು ಮಾಡಬೇಕೆ ಹೊರತು ತೊಂದರೆ ಕೊಡು ವುದಕ್ಕಲ್ಲ ಎಂಬುದನ್ನು ಸರ್ಕಾರ ಅರಿಯಲಿ ಎಂದರು.

ಕೊಡಚಾದ್ರಿಯಲ್ಲಿರುವ ಶ್ರೀ ಚಕ್ರದ ದೇವಾ ಲಯ ಅಭಿವೃದ್ಧಿ ಪಡಿಸಲು ಸರ್ಕಾರ ಸಮಿತಿ ರಚಿಸಬೇಕು, ಸಂಜೆ ನಂತರವೂ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡ ಬೇಕು, ಧಾರ್ಮಿಕ ವಿಧಿ-ವಿಧಾನಕ್ಕೆ ಸರ್ಕಾರ ಅಡ್ಡಿ ಮಾಡಬಾರದೆಂದು ಅವರು ಇದೇ ವೇಳೆ ಮನವಿ ಮಾಡಿದರು. 

ಮೈಸೂರಿನಲ್ಲಿ ದೇಗುಲಗಳ ಧ್ವಂಸ:  ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆ ಮೈಸೂರಿನ ನಗರದ ಹಲವು ದೇವಾಲಯಳನ್ನು ನೆಲಸಮ ಮಾಡಲಾಗಿತ್ತು. 93 ದೇವಾಲಯಗಳನ್ನು ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಮೈಸೂರು ಮಹಾನಗರ ಪಾಲಿಕೆ ಪಟ್ಟಿ ಮಾಡಿತ್ತು. ಇದರಲ್ಲಿ ಇಲ್ಲಿನ ಪ್ರಸಿದ್ಧ ಅಗ್ರಹಾರದ ನೂರೊಂದು ಗಣಪತಿ ದೇವಾಲಯ, ಹುಚ್ಚಗಣಿ ಮಹದೇವಮ್ಮ ದೆವಾಲಯಗಳು ಇದ್ದವು.  

 ಅನಧಿಕೃತ ದರ್ಗಾ ಮುಟ್ಟಲು ನಿಮ್ಮ ತೊಡೆ ನಡುಗುತ್ತಾ? ಕೆಡಿಪಿ ಸಭೆಯಲ್ಲಿ ಪ್ರತಾಪ್ ಸಿಂಹ ಗರಂ

ಚಾಮುಂಡೇಶ್ವರಿ ದೇವಾಲಯ, ವಿದ್ಯಾರಣ್ಯಪುರಂ ರಾಮಲಿಂಗೇಶ್ವರ ದೇವಾಲಯ, ಇಟ್ಟಿಗೆಗೂಡು ದುರ್ಗಾ ಪರಮೇಶ್ವರಿ, ನ್ಯೂ ಸಯ್ಯಾಜಿರಾವ್ ಪಂಚಮುಖಿ ಗಣಪತಿ ದೇವಾಲಯ, ವಿಜಯನಗರ ಚಾಮುಂಡೇಶ್ವರಿ ದೇವಾಲಯಗಳೂ ಸುಪ್ರೀಂಕೋರ್ಟ್ ನೀಡಿದ ಪಟ್ಟಿಯಲ್ಲಿದ್ದು, ಇಲ್ಲಿನ ಜಿಲ್ಲಾಧಿಕಾರಿ ತೆರವು ಮಾಡಿಸಿದ್ದರಿ.  ಹಲವು ವಿರೋಧಗಳ ನಡುವೆಯೇ ದೇಗುಲ ಧ್ವಂಸ ಕಾರ್ಯ ನಡೆದಿತ್ತು.

Follow Us:
Download App:
  • android
  • ios