Asianet Suvarna News Asianet Suvarna News

35 ವರ್ಷದ ದಾಯಾದಿ ಕಲಹ ನಿಂತಲ್ಲೇ ಬಗೆಹರಿಸಿದ ತಹಸೀಲ್ದಾರ!

  • ಕಳೆದ 35 ವರ್ಷಗಳಿಂದ ಹಾರವಾಡದ ಗೌಡರ ಮನೆತನದಲ್ಲಿ ವೈಯಕ್ತಿಕ ಕಾರಣಗಳಿಂದ ವೈಷಮ್ಯ ಪ್ರಾರಂಭ
  • ಒಂದು ಕುಟುಂಬದ ಬಾಂಧವ್ಯವನ್ನು ಇಡೀ ಹಾಲಕ್ಕಿ ಸಮಾಜದ ಹಾರವಾಡ ಭಾಗದ ನಾಗರಿಕರು ಕಡಿದುಕೊಂಡಿದ್ದರು
  • ಈ ವಿಚಾರ ತಿಳಿದು ತಾಲೂಕಾ ದಂಡಾಧಿಕಾರಿ ಉದಯ ಕುಂಬಾರ ಮುಂದಾಳತ್ವದಲ್ಲಿ ಸುದೀರ್ಘ ಮಾತುಕತೆಯಲ್ಲಿ ಸುಖಾಂತ್ಯ

 

Tehsildar who resolved the 35 yearold  dispute between two families ankola karwar uttarakannada
Author
Hubli, First Published Aug 23, 2022, 11:44 AM IST

ಅಂಕೋಲಾ (ಆ.23) : ಕಳೆದ 35 ವರ್ಷಗಳಿಂದ ಹಾರವಾಡದ ಗೌಡರ ಮನೆತನದಲ್ಲಿ ವೈಯಕ್ತಿಕ ಕಾರಣಗಳಿಂದ ವೈಷಮ್ಯ ಪ್ರಾರಂಭವಾಗಿ 2 ಕುಟುಂಬಗಳು ಬೇರೆಯಾಗುವುದರೊಂದಿಗೆ ಒಂದು ಕುಟುಂಬದ ಬಾಂಧವ್ಯವನ್ನು ಇಡೀ ಹಾಲಕ್ಕಿ ಸಮಾಜದ ಹಾರವಾಡ ಭಾಗದ ನಾಗರಿಕರು ಕಡಿದುಕೊಂಡಿದ್ದರು. ಆದರೆ ಈ ವಿಚಾರ ತಿಳಿದು ತಾಲೂಕಾ ದಂಡಾಧಿಕಾರಿ ಉದಯ ಕುಂಬಾರ ಮತ್ತು ಪಿಎಸೈ ಪ್ರವೀಣಕುಮಾರ ಹಾಗೂ ಹಾರವಾಡ ಗ್ರಾಪಂ ಅಧ್ಯಕ್ಷ, ಸದಸ್ಯರು ಮತ್ತು ಗ್ರಾಮದ ಪ್ರಮುಖರ ಸಮ್ಮುಖದಲ್ಲಿ ಎರಡು ಕುಟುಂಬಗಳನ್ನು ಬೆಸೆಯುವ ಮೂಲಕ ಸಮಾಜದ ಒಗ್ಗೂಡಿಸುವಿಕೆಗೆ ಕಾರಣರಾದರು.

ಹಲೋ ಕಂದಾಯ ಸಚಿವರೆ ಕಾರ್ಯಕ್ರಮ ಅನುಷ್ಠಾನದಲ್ಲಿ ಉಕ ಪ್ರಥಮ

ದೀಪಕ ಗೌಡ ಎಂಬ ಕುಟುಂಬ ಮತ್ತು ಹಾರವಾಡದ ಹಾಲಕ್ಕಿ ಸಮಾಜದ ಊರ ಗೌಡ ಆನಂದು ಗೌಡ ಒಂದೇ ಕುಟುಂಬದವರಾಗಿದ್ದು, ಕಳೆದ 35 ವರ್ಷದ ಹಿಂದೆ ದಾಯಾದಿ ಕಲಹದಿಂದ ಈ ಕುಟುಂಬಗಳು ಧಾರ್ಮಿಕ ಸಂಪ್ರದಾಯಗಳಿಂದ ಹಿಡಿದು ಗ್ರಾಮದ ಎಲ್ಲರ ಸಂಬಂಧಗಳು ದೀಪಕ ಗೌಡ ಅವರ ಕುಟುಂಬಕ್ಕೆ ತಪ್ಪುವಂತಾಗಿತ್ತು. ಆನಂದು ಗೌಡ ಅವರಿಗೆ ಸಭೆಗೆ ಬರಲು ತಿಳಿಸಿದಾಗ ಹಾರವಾಡ ಗ್ರಾಮದ 200ಕ್ಕೂ ಹೆಚ್ಚು ಹಾಲಕ್ಕಿ ಸಮಾಜದ ಪ್ರಮುಖರು, ಮಹಿಳೆಯರು ಮತ್ತು ಯುವಕರು ತಾಲೂಕಾ ದಂಡಾಧಿಕಾರಿಗಳ ಕಚೇರಿಗೆ ಆಗಮಿಸಿದರು. ಪಿಎಸೈ ಪ್ರವೀಣಕುಮಾರ ಇವರಲ್ಲಿ ಐವರು ಪ್ರಮುಖರನ್ನು ಸಭೆಗೆ ಕರೆಯಿಸಿ 2 ಕುಟುಂಬಗಳ ಮಧ್ಯೆ ವಿವಾದಕ್ಕೆ ಕಾರಣವನ್ನು ಕೇಳಿ ಸಮಸ್ಯೆ ಆಲಿಸಿದರು. ವಿಜಯ ಗೌಡ ಕುಟುಂಬದಿಂದಲೂ ಚಿಕ್ಕ-ಪುಟ್ಟತಪ್ಪುಗಳು ನಡೆದಿದ್ದು, ಗ್ರಾಮಸ್ಥರು ಸಹ ಈ ವಿವಾದದ ವಿಚಾರದಲ್ಲಿ ಚಿಕ್ಕ-ಪುಟ್ಟಸಮಸ್ಯೆಗಳನ್ನು ಮಾಡಿಕೊಂಡಿದ್ದು, ಹಿಂದಿನ ಎಲ್ಲ ವಿಚಾರಗಳನ್ನು ಬಿಟ್ಟು ಮುಂದೆ ಎರಡು ದಾಯಾದಿ ಕುಟುಂಬಗಳು ಮತ್ತು ಗ್ರಾಮದ ಪ್ರತಿಯೊಬ್ಬರೂ ಜೊತೆಯಾಗಿ ಸಾರ್ವಜನಿಕವಾಗಿ ನಡೆಯುವ ಕಾರ್ಯದಲ್ಲಿ ಒಂದಾಗಿ ಹೊಂದಾಣಿಕೆ ಮಾಡಿಕೊಂಡು ಹೋಗಬೇಕೆಂದು ತಹಶೀಲ್ದಾರ ಉದಯ ಕುಂಬಾರ ನಿರ್ದೇಶನ ನೀಡಿದರು.

ಈ ವಿಚಾರವಾಗಿ ಚರ್ಚೆಗಳು ನಡೆದು ಆನಂದು ಗೌಡ ಮತ್ತು ವಿಜಯ ಗೌಡ ಪರಸ್ಪರ ಒಪ್ಪಿಕೊಂಡು ಇಂದಿನಿಂದಲೇ ಸಾರ್ವಜನಿಕವಾಗಿ ನಡೆಯುವ ಸಭೆ ಸಮಾರಂಭಗಳಿಗೆ ತಾವು ಗ್ರಾಮದಲ್ಲಿ ಒಂದಾಗಿ ನಡೆಯುತ್ತೇವೆ ಎಂದು ತಿಳಿಸಿದರು. 35 ವರ್ಷದ ಹಿಂದಿನಿಂದ ನಡೆದು ಬಂದ ಆಂತರಿಕ ಕಲಹ ತಾಲೂಕಾ ದಂಡಾಧಿಕಾರಿ ಉದಯ ಕುಂಬಾರ ಮುಂದಾಳತ್ವದಲ್ಲಿ ಸುದೀರ್ಘ ಎರಡೂವರೆ ಗಂಟೆಗಳ ಕಾಲ ನಡೆದ ಸಭೆಯಲ್ಲಿ ಮುಕ್ತಾಯಗೊಂಡಿತು.

ಕಾರವಾರ: ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟ ಯುವತಿ ನಿಗೂಢ ಕಣ್ಮರೆ ಪ್ರಕರಣ

ದೀಪಕ ಗೌಡ, ಶಾಂತಿ ಗೌಡ, ಸಾಯಿನಾಥ ಗೌಡ, ನಾರಾಯಣ ಗೌಡ, ಕೃಷ್ಣ ಗೌಡ, ರತ್ನಾಕರ ಗೌಡ, ಅರ್ಜುನ ಗೌಡ, ಮೋಹನ ಗೌಡ, ಚಾಂದು ಗೌಡ, ಪ್ರದೀಪ ಗೌಡ, ಸಂಜಯ ಗೌಡ, ಗಂಗೆ ಗೌಡ, ಗ್ರಾಪಂ ಅಧ್ಯಕ್ಷ ಮಂಜುನಾಥ ಠಾಕೇಕರ, ಪಿಡಿಒ ಲಕ್ಷ್ಮೀ ಗೌಡ, ಗ್ರಾಪಂ ಸದಸ್ಯರಾದ ಮೋಹಿನಿ ಗೌಡ, ಸುಭಾಷ ನಾಯ್ಕ, ಕಂದಾಯ ನಿರೀಕ್ಷಕ ಎಸ್‌.ಡಿ. ಎಳಗದ್ದೆ, ಪ್ರೊಬೇಷನರಿ ಪಿಎಸೈ ಸುನೀಲ, ಗ್ರಾಮ ಲೆಕ್ಕಾಧಿಕಾರಿ ಮಾನಸಾ ನಾಯಕ ಮತ್ತು ಕೆಲವು ಅಧಿಕಾರಿಗಳು ಸೇರಿದಂತೆ 200ಕ್ಕೂ ಹೆಚ್ಚು ಜನ ಉಪಸ್ಥಿತರಿದ್ದರು.

ನಾವು ಸಮಾಜದ ನಿಯಮದಂತೆ ಮತ್ತು ಸಂಪ್ರದಾಯದಂತೆ ನಡೆದುಕೊಳ್ಳುತ್ತೇವೆ. ಹಿರಿಯರಿಗೆ ಗೌರವ ನೀಡಿ, ಗ್ರಾಮದಲ್ಲಿ ನಡೆಯುವ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳುತ್ತೇನೆ.

- ವಿಜಯ ಗೌಡ

Follow Us:
Download App:
  • android
  • ios