ಲಾಕ್‌ಡೌನ್‌ ಎಫೆಕ್ಟ್‌: ಲಂಡನ್‌ನಲ್ಲಿ ಟೆಕ್ಕಿ ಆತ್ಮಹತ್ಯೆ, 50 ದಿನಗಳಾದ್ರೂ ಭಾರತಕ್ಕೆ ಬಾರದ ಮೃತದೇಹ

ಲಂಡನ್‌ನಲ್ಲಿ ಹುಬ್ಬಳ್ಳಿ ಮೂಲದ ಎಂಜಿನಿಯರ್ ಆತ್ಮಹತ್ಯೆ| ಆತನ ಶವವನ್ನು ದೇಶಕ್ಕೆ ತರಲು ಭಾರತ ಸರಕಾರದ ಮೊರೆ ಹೋದ ಪಾಲಕರು| ಮಾ. 13 ರಂದೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಹೇಳಲಾಗಿದೆ| ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಲಾಕ್‌ಡೌನ್ ಜಾರಿ ಇದ್ದುದರಿಂದ ಈವರೆಗೆ ಆತನ ಶವವನ್ನು ಭಾರತಕ್ಕೆ ತರಲು ಸಾಧ್ಯವಾಗಿಲ್ಲ|
 

Techie Deadbody not yet come to Hubballi after He Dead in London due to Lockdown

ಹುಬ್ಬಳ್ಳಿ(ಮೇ.09): ಹುಬ್ಬಳ್ಳಿ ಮೂಲದ ಎಂಜಿನಿಯರ್‌ವೊಬ್ಬ (ಟೆಕ್ಕಿ) ಲಂಡನ್‌ನಲ್ಲಿ  50  ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಶವವನ್ನು ದೇಶಕ್ಕೆ ತರಲು ಪಾಲಕರು ಭಾರತ ಸರಕಾರದ ಮೊರೆ ಹೋಗಿದ್ದಾರೆ.

2015 ರಲ್ಲಿ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದಿರುವ ಟೆಕ್ಕಿ ಉದ್ಯೋಗಕ್ಕಾಗಿ ಲಂಡನ್‌ನಲ್ಲಿ ವಾಸವಾಗಿದ್ದರು. ಮಾ. 13 ರಂದೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಹೇಳಲಾಗಿದೆ. ಆದರೆ, ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಲಾಕ್‌ಡೌನ್ ಜಾರಿ ಇದ್ದುದರಿಂದ ಈವರೆಗೆ ಆತನ ಶವವನ್ನು ಭಾರತಕ್ಕೆ ತರಲು ಸಾಧ್ಯವಾಗಿಲ್ಲ. 

ಪ್ರತಿ 40 ಸೆಕೆಂಡ್‌ಗಳಿಗೊಬ್ಬ ಆತ್ಮಹತ್ಯೆ! ಉಳಿಸುವ ಬಗೆ ಹೇಗೆ ?

ಆತನ ಅಂತ್ಯಕ್ರಿಯೆಯನ್ನು ಭಾರತದಲ್ಲಿಯೇ ಮಾಡಬೇಕೆಂಬ ಉದ್ದೇಶದಿಂದ ಪಾಲಕರು ಈವರೆಗೆ ಶವದ ಅಂತ್ಯಕ್ರಿಯೆ ನಡೆಸಲು ಅವಕಾಶ ನೀಡಿಲ್ಲ. ಇದೀಗ ಕೇಂದ್ರ ಸರ್ಕಾರದ ಸಂಸದೀಯ ವ್ಯವಹಾರಗಳ ಸಚಿವ ಹಾಗೂ ಲೋಕಸಭಾ ಸದಸ್ಯ ಪ್ರಹ್ಲಾದ್ ಜೋಶಿ ಅವರ ಮೂಲಕ ಶವವನ್ನು ಭಾರತಕ್ಕೆ ತರಲು ಪ್ರಯತ್ನ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ.

Latest Videos
Follow Us:
Download App:
  • android
  • ios