Asianet Suvarna News Asianet Suvarna News

Chamarajanagar: ಶಿಕ್ಷಕರ ಸಮಸ್ಯೆ ಅಧಿವೇಶನದಲ್ಲಿ ಚರ್ಚಿಸುವೆ: ಶಾಸಕ ಮಹೇಶ್‌

ಶಿಕ್ಷಕರ ಸಮಸ್ಯೆಗೆ ಕೈಲಾದ ಪ್ರಯತ್ನ ಮಾಡುವೆ, ಶಿಕ್ಷಕರ ಸಮಸ್ಯೆಗಳನ್ನು ಅಧಿವೇಶನದಲ್ಲಿ ಚರ್ಚಿಸುವೆ. ಈ ಸಂಬಂಧ ಶಿಕ್ಷಣ ಸಚಿವರ ಜೊತೆ ಚರ್ಚಿಸುವೆ ಎಂದು ಶಾಸಕ ಎನ್‌.ಮಹೇಶ್‌ ಹೇಳಿದರು. 

Teachers problem will be discussed in the cabinet session says mla n mahesh gvd
Author
First Published Sep 19, 2022, 12:58 AM IST

ಕೊಳ್ಳೇಗಾಲ (ಸೆ.19): ಶಿಕ್ಷಕರ ಸಮಸ್ಯೆಗೆ ಕೈಲಾದ ಪ್ರಯತ್ನ ಮಾಡುವೆ, ಶಿಕ್ಷಕರ ಸಮಸ್ಯೆಗಳನ್ನು ಅಧಿವೇಶನದಲ್ಲಿ ಚರ್ಚಿಸುವೆ. ಈ ಸಂಬಂಧ ಶಿಕ್ಷಣ ಸಚಿವರ ಜೊತೆ ಚರ್ಚಿಸುವೆ ಎಂದು ಶಾಸಕ ಎನ್‌. ಮಹೇಶ್‌ ಹೇಳಿದರು. ನ್ಯಾಷನಲ್‌ ಶಾಲಾ ಆವರಣದಲ್ಲಿ ಅಯೋಜಿಸಿದ್ದ ಶಿಕ್ಷಕರ ದಿನಾಚರಣೆ, ನಿವೃತ್ತ ಶಿಕ್ಷಕರಿಗೆ ಸನ್ಮಾನ, ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಹೆಚ್ಚಿನ ಕಲಿಕೆ, ಜ್ಞಾನಾರ್ಜನೆಗಾಗಿ ಸ್ಪೋಕನ್‌ ಇಂಗ್ಲೀಷ್‌ ಕಲಿಕೆ ಅಗತ್ಯವಿದೆ. ಹಾಗಾಗಿ, ಈ ಕುರಿತು ಸರ್ಕಾರ ಚಿಂತನೆ ನಡೆಸಿದೆ, ನಾನು ಶಾಸಕನಾದ ಬಳಿಕ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ರೀತಿ ಸ್ಪಂದಿಸಿದ್ದೆನೆ. 

ಅದರ ಪ್ರತಿಫಲವೇ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಹೆಚ್ಚಳ ಮತ್ತು ಹೆಚ್ಚಿನ ರೀತಿ ಮಕ್ಕಳ ಸಾಧನೆಗೆ ಕಾರಣ, ಈ ಸಾಧನೆಗೆ ಕಾರಣಕರ್ತರಾದ ಎಲ್ಲಾ ಶಿಕ್ಷಕರಿಗೂ, ಪರಿಣಾಮಕಾರಿ ಫಲಿತಾಂಶ ತಂದ ಎಲ್ಲರಿಗೂ ಅಭಿನಂದಿಸುವೆ ಎಂದರು . ಅಲ್ಪ ಮಾನವನನ್ನು ವಿಶ್ವಮಾನವನಾಗಿಸುವ ಅಗಾಧ ಶಕ್ತಿ ಶಿಕ್ಷಣಕ್ಕಿದೆ, ಮಾತೆ ಸಾವಿತ್ರಿಬಾಯಿಪುಲೆ ಹೆಣ್ಣು ಮಕ್ಕಳ ಅಭ್ಯುದಯಕ್ಕೆ ಸ್ಪಂದಿಸಿದ ಮೊದಲ ಮಹಿಳಾ ಶಿಕ್ಷಕಿ. ಅವರ ಆದರ್ಶಗಳನ್ನು ನಾವೆಲ್ಲರೂ ರೂಡಿಸಿಕೊಳ್ಳಬೇಕಿದೆ. ವಿದ್ಯಾರ್ಥಿ ಆಲೋಚನ ಕ್ರಮವನ್ನು ಬದಲಿಸುವ ಶಕ್ತಿ ಶಿಕ್ಷಕರಿಗಿದೆ. ಶಿಕ್ಷಕರು ಮೊಸರಲ್ಲಿ ಕಲ್ಲನ್ನು ಹುಡುಕುವ ಕೆಲಸ ಮಾಡದೆ, ಗ್ರಹಿಕಾ ಶಕ್ತಿ ಬದಲಾಗಬೇಕು.

Chamarajanagar: ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಿಸಬೇಕು: ನ್ಯಾ.ಬಿ.ಎಸ್‌.ಭಾರತಿ

ಆ ಮೂಲಕ ಹೆಚ್ಚಿನ ರೀತಿಯಲ್ಲಿ ಸಾರ್ಥಕ ಕೆಲಸ ಮಾಡಬೇಕು, ಶಿಕ್ಷಕರ ಪರ ನಾನಿದ್ದೇನೆ. ಆಧುನಿಕ ಜಗತ್ತಿನಲ್ಲಿ ಉದ್ಯೋಗ ಮಾರುಕಟ್ಟೆಬೇಕಾಗಿರುವಂತಹ ಪ್ರಮುಖ ಅಂಶ ಸ್ಪೋಕನ್‌ ಇಂಗ್ಲೀಷ್‌ ಆಗಿದ್ದು, ಸರ್ಕಾರ ಚಿಂತನೆ ನಡೆಸಬೇಕಿದೆ. ಪ್ರತಿ ಶಾಲೆಯಲ್ಲೂ ಸೈಕಾಲಜಿ ಕಲಿಸುವ ಶಿಕ್ಷಕರ ಅಗತ್ಯತೆ ಇಂದಿನ ವ್ಯವಸ್ಥೆಯಲ್ಲಿ ಬಂದೊದಗಿದೆ ಎಂದರು. ಈ ಸಂದರ್ಭದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಸಮಿತಿ ಅಧ್ಯಕ್ಷ ಪ್ರಭುಸ್ವಾಮಿ, ಉಪಾಧ್ಯಕ್ಷೆ ಇಂದಿರಮ್ಮ, ಡಿವೈಎಸ್ಪಿ ನಾಗರಾಜು, ನಗರಸಭೆ ಅಧ್ಯಕ್ಷೆ ಸುಶೀಲಾ ಶಾಂತರಾಜು, ಸ್ಥಾಯಿ ಸಮಿತಿ ಅಧ್ಯಕ್ಷ ಶಂಕರನಾರಾಯಣ ಗುಪ್ತ, ಪೌರಾಯುಕ್ತ ನಂಜುಂಡಸ್ವಾಮಿ, ಸದಸ್ಯರುಗಳಾದ ಕವಿತಾ.

ನಟರಾಜು, ಮಧುಚಂದ್ರ, ಸೆಲ್ವರಾಜು, ಸೋಮು, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಪಾಟೀಲ್‌, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜೋಸೇಫ್‌ ಅಲೆಕ್ಸಾಂಡರ್‌, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ನಂದೀಶ್‌, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಕ್ಬರ್‌, ಕಾರ್ಯದರ್ಶಿ ಶಾಂತರಾಜು, ಜಿಲ್ಲಾ ಉಪಾಧ್ಯಕ್ಷ ಬುಕಾನಿ, ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಚಿಕ್ಕರಾಜು, ಅಕ್ಷರ ದಾಸೋಹದ ಅ​ಧಿಕಾರಿ ರಂಗಸ್ವಾಮಿ, ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷೆ ಮಂಜುಳ, ರಾಜ್ಯ ಸಮಿತಿ ಸದಸ್ಯ ವಾಸು, ರಾಜು , ಹೂವಮ್ಮ, ಸಾವಿತ್ರಮ್ಮ, ಶಿವಶಾಂತಿ, ಕಲಿಂ ಷರೀಫ್‌, ರಾಜಪ್ಪ ಎಂ.ರಾಜು, ಚಾಮರಾಜು, ಬಸವರಾಜು ಇದ್ದರು.

9 ಮಂದಿ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ: ನಗರಸಭಾಧ್ಯಕ್ಷೆ ಸುಶೀಲ ಶಾಂತರಾಜು ಮಾತನಾಡಿ, ಶಿಕ್ಷಕ ವೃತ್ತಿ ಪವಿತ್ರವಾದುದು. ಅಂತಹ ವೃತ್ತಿಯಲ್ಲಿರುವವರ ಸೇವೆ ನಿಜಕ್ಕೂ ಸಾರ್ಥಕ ಎಂದರು. ಕಾರ್ಯಕ್ರಮದಲ್ಲಿ ಶಿಕ್ಷಕರುಗಳಾದ ಶಿವರಾಜು, ಭಾಸ್ಕರ್‌, ಮುರುಗ, ಸೀತಾರಾಂ, ಮಾದೇಶಪ್ಪ, ಗೀತ, ಪದ್ಮಾವತಿ, ಬಸವರಾಜು, ಪುಷ್ಪಲತಾ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಸರಸ್ವತಿ, ಕಲಿಂಪಾಶಾ, ಸುಬ್ರಮಣ್ಯಂ ಅವರಿಗೆ ಗೌರವಿಸಲಾಯಿತು.

Chamarajanagar: ಭಾರತ್‌ ಜೋಡೋ ನಡಿಗೆ ದೇಶಕ್ಕೊಂದು ಕೊಡುಗೆ: ಡಿ.ಕೆ.ಶಿವಕುಮಾರ್‌

ನಿವೃತ್ತ ಶಿಕ್ಷಕರುಗಳಾದ ನಾಗಸುಂದರಿ, ಮಹದೇವಿ, ಭಾಗ್ಯವತಿ, ರಾಗಿಣಿ, ಲೂಮಿತ, ಸೋಮಾಜಿ, ಮರಿಯಪ್ಪ, ವೆಂಕಟೇಶ್‌, ಲಾರೆನ್ಸ್‌, ಚಿಂತಾಮಣಿ, ಮಹದೇವಪ್ಪ ಸೇರಿದಂತೆ ಹಲವು ನಿವೃತ್ತ ಶಿಕ್ಷಕರನ್ನು ಗೌರವಿಸಲಾಯಿತು. ಶಿಕ್ಷಣ ಕ್ಷೇತ್ರ ವಲಯದ ಸರ್ಕಾರಿ, ಅನುದಾನಿತ, ಅನುದಾನಿತ ರಹಿತ ಶಾಲೆಯ ಶಿಕ್ಷಕರಿಗೆ ಬ್ಯಾಗ್‌ಗಳನ್ನು ಉಡುಗೊರೆಯಾಗಿ ನೀಡಿದರು. ಜೋಗಪ್ಪ, ನಂದೀಶ್‌, ಬುಕಾನಿ ಹಲವು ಶಿಕ್ಷಕರು ವೇದಿಕೆಯಲ್ಲಿ ಹಾಡುಗಳನ್ನು ಹಾಡುವ ಮೂಲಕ ರಂಜಿಸಿದರು.

Follow Us:
Download App:
  • android
  • ios