Asianet Suvarna News Asianet Suvarna News

ಪರಸ್ತ್ರೀಯೊಂದಿಗೆ ಮಲಗಿದ ಫೋಟೋ ಸೋಷಿಯಲ್‌ ಮೀಡಿಯಾಗೆ ಶೇರ್‌ ಮಾಡಿದ ಪುಣ್ಯಾತ್ಮ..!

*  ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ನವಲಿ ಗ್ರಾಪಂ ಅಧ್ಯಕ್ಷೆಯ ಪತಿ
*  ತನ್ನ ಫೋಟೋಗಳನ್ನೇ ಅಪ್‌ಲೋಡ್‌ ಮಾಡಿದ ನಿಂಗಪ್ಪ
*  ನಾಗಪ್ಪ ಸಾಲೋಣಿ ಅಭಿಮಾನಿಗಳ ಫೇಸ್‌ಬುಕ್‌ನಲ್ಲಿ ಶೇರ್‌
 

Teacher Upload Private Photos in Social Media in Koppal grg
Author
Bengaluru, First Published Oct 17, 2021, 3:08 PM IST
  • Facebook
  • Twitter
  • Whatsapp

ಕೊಪ್ಪಳ(ಅ.17):  ಖಾಸಗಿ ಶಾಲೆಯ ಶಿಕ್ಷಕನೋರ್ವ(Teacher) ತಾನು ಪರಸ್ತ್ರೀಯೊಂದಿಗೆ ಕಾಮದಾಟಕ್ಕಾಗಿ ಮಲಗಿದಾಗ ತೆಗೆದ ಫೋಟೋಗಳನ್ನು ತಾನೆ ವಾಟ್ಸ್‌ಆ್ಯಪ್‌(WhatsApp) ಗ್ರೂಪ್‌ಗೆ ಅಪ್‌ಲೋಡ್‌(Upload) ಮಾಡಿ ಪೇಚಿಗೆ ಸಿಲುಕಿದ್ದಾನೆ.

ಈತನ ಹೆಸರು ನಿಂಗಪ್ಪ ಎನ್ನಲಾಗಿದ್ದು, ನವಲಿ ಗ್ರಾಪಂ ಅಧ್ಯಕ್ಷೆಯ ಪತಿ ಎಂದು ಹೇಳಲಾಗುತ್ತಿದೆ. ಆದರೆ, ಈತ ಆಚಾನಕ್‌ ಆಗಿ ಹಾಕಿದ್ದಾನೋ ಅಥವಾ ಉದ್ದೇಶಪೂರ್ವಕವಾಗಿ ಹಾಕಿದ್ದಾನೋ ಗೊತ್ತಿಲ್ಲ. ಆದರೆ, ಈ ಫೋಟೋಗಳಂತೂ(Photos) ಈಗ ವೈರಲ್‌(Viral) ಆಗಿದ್ದು, ನೆಟ್ಟಿಗರು ಹಿಗ್ಗಾಮುಗ್ಗಾ ಟೀಕಿಸಲು ಪ್ರಾರಂಭಿಸಿದ್ದಾರೆ.

ಬೆಂಗಳೂರು; ಮಾಜಿ ಪತ್ನಿಯ ಖಾಸಗಿ ಚಿತ್ರಗಳನ್ನೇ ವಾಟ್ಸಪ್ ಸ್ಟೇಟಸ್ ಮಾಡಿಕೊಂಡ!

ಮಾಜಿ ಸಚಿವ ನಾಗಪ್ಪ ಸಾಲೋಣಿ ಅವರ ಅಭಿಮಾನಿ ಬಳಗದ ಗ್ರೂಪ್‌ನಲ್ಲಿ ಈ ಫೋಟೋಗಳನ್ನು ಶೇರ್‌(Share) ಮಾಡಲಾಗಿದೆ. ಇವುಗಳನ್ನು ತನ್ನ ಮೊಬೈಲ್‌ನಿಂದ ತಾನೇ ಶೇರ್‌ ಮಾಡಿದನೋ ಅಥವಾ ಬೇರೆಯವರು ಈತನಿಗೆ ಗೊತ್ತಿಲ್ಲದೆ ಶೇರ್‌ ಮಾಡಿದ್ದಾರೋ ಎನ್ನುವುದು ಇನ್ನಷ್ಟೇ ಬೆಳಕಿಗೆ ಬರಬೇಕಾಗಿದೆ.
 

Follow Us:
Download App:
  • android
  • ios