ಮೈಸೂರು(ಡಿ.16): ಸ್ಪೆಷಲ್‌ ಕ್ಲಾಸ್‌ ಮಾಡುವುದಾಗಿ ಹೇಳಿ ವಿದ್ಯಾರ್ಥಿನಿಯರನ್ನು ಕರೆದೊಯ್ದು ಗುಪ್ತಾಂಗಕ್ಕೆ ಕೈ ಹಾಕಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕ ಶಿಕ್ಷಕ ಮೈಸೂರಿನಲ್ಲಿ ಸಿಕ್ಕಿಬಿದ್ದಿದ್ದಾನೆ. ಅಪ್ರಾಪ್ತ ಬಾಲಕಿಯರ ಮೇಲೆ ಸತತ ಒಂದು ವರ್ಷದಿಂದ ದೌರ್ಜನ್ಯ ನಡೆಸಿದ್ದು, ಶಿಕ್ಷಕನ ಕಾಮದಾಟಕ್ಕೆ ಪುಟ್ಟ ಕಂದಮ್ಮಗಳು ನರಕಯಾತನೆ ಅನುಭವಿಸಿದ್ದಾರೆ. 

ಅಪ್ರಾಪ್ತ ಬಾಲಕಿ ಮೇಲೆ ಒಂದು ವರ್ಷದಿಂದ ಸತತ ಲೈಂಗಿಕ ಕಿರುಕುಳ ನೀಡಲಾಗುತ್ತಿದ್ದು, ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕಿತ್ತೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದೆ. ಶಿಕ್ಷಕ ಕೃಷ್ಣಮೂರ್ತಿ ಎಂಬಾತನ ಕಾಮದಾಟಕ್ಕೆ ಪುಟ್ಟ ಕಂದಮ್ಮಗಳು ನರಕಯಾತನೆ ಅನುಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ : 10 ಮಹಿಳೆಯರ ರಕ್ಷಣೆ

ಖಾಲಿ ಕೊಠಡಿಯಲ್ಲಿ ಸ್ಪೇಷಲ್ ಕ್ಲಾಸ್ ಮಾಡುವುದಾಗಿ ಒಬ್ಬಬ್ಬರೆ ವಿಧ್ಯಾರ್ಥಿನಿಯರನ್ನು ಕರೆದು ಗುಪ್ತಾಂಗಗಳಿಗೆ ಕೈ ಹಾಕಿ ಲೈಂಗಿಕ ಕಿರುಕುಳ ನೀಡುತ್ತಿದ್ದ. ವಿಷಯ ಬಾಯಿ ಬಿಟ್ರೆ ಕಡಿಮೆ ಅಂಕ ಕೊಟ್ಟು ಫೇಲ್ ಮಾಡೋದಾಗಿ ಬೆದರಿಕೆ ಒಡ್ಡುತ್ತಿದ್ದ ಎಂಬುದು ತಿಳಿದು ಬಂದಿದೆ.

ಕಾಮುಕ ಶಿಕ್ಷಕ ಶಾಲೆಯ ಅಡುಗೆ ಸಿಬ್ಬಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಬಾಲಕಿ ಮುಖ್ಯೋಪಾಧ್ಯಾಯರ ಬಳಿ ನೋವು ತೋಡಿಕೊಂಡಿದ್ದು, ಬೆಟ್ಟದಪುರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ರೊಚ್ಚಿಗೆದ್ದ ಗ್ರಾಮಸ್ಥರು ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ. ಕಳೆದ ತಿಂಗಳು 25 ರಂದು ನಡೆದಿರುವ ಘಟನೆ ನಡೆದಿತ್ತು. ವಿಷಯ ಗ್ರಾಮಸ್ಥರಿಗೆ ತಿಳಿಯುವ ಮುಂಚೆ  ಹೆಚ್ಚುವರಿ ರಜೆ ಪಡೆದು ತಪ್ಪಿಸಿಕೊಂಡಿದ್ದಾನೆ.

ಹುಕ್ಕೇರಿ: ಕಾಮದಾಹ ತೀರಿಸಿಕೊಳ್ಳಲು ಮಗನನ್ನೇ ಕೊಂದ ತಾಯಿ!

ಕ್ಷೇತ್ರ ಶಿಕ್ಷಣ ಅಧಿಕಾರಿ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನ ವಿರುದ್ದ ಕ್ರಮ ಕೈಗೊಂಡಿಲ್ಲ. ಸ್ಥಳಕ್ಕೆ ಬಿಇಒ,ಬರಬೇಕು ಕಾಮುಕ ಶಿಕ್ಷಕನನ್ನ ಅಮಾನತ್ತು ಮಾಡುವಂತೆ ಆಗ್ರಹಿಸಿ ಪ್ರತಿಭಟನೆ.