ಶಿವಮೊಗ್ಗ [ಡಿ.25]: ಶಾಲಾ ಪ್ರವಾಸ ಮುಗಿಸಿ ಮರಳುವಾಗ ಬಸ್ ಮರಕ್ಕೆ ಡಿಕ್ಕಿಯಾಗಿ ಶಿಕ್ಷಕ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. 

ಶಿವಮೊಗ್ಗ ಜಿಲ್ಲೆಯ ಮಾರಶೆಟ್ಟಿಹಳ್ಳಿಯ ಮಂಜುನಾಥ್ ಪ್ರೌಢಶಾಲಾ ಶೈಕ್ಷಣಿಕ ಪ್ರವಾಸ ಮುಗಿಸಿ ವಾಪಸಾಗುವಾದ ಹೊಳೆಹೊನ್ನೂರು ಬಳಿಯಲ್ಲಿ ಈ ದರ್ಘಟನೆಯಾಗಿದೆ. 

ಇನ್ನು ಬಸ್ಸಿನಲ್ಲಿದ್ದ ಕ್ಲೀನರ್ ಕಾಲು ಮುರಿದಿದೆ. ಅಪಘಾತ ಸಂಭವಿಸುವ ವೇಳೆ  ಬಸ್ಸಿನಲ್ಲಿ ಇಬ್ಬರೇ ಮಕ್ಕಳಿದ್ದು ಅವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಗಾಯಾಳುಗಳನ್ನು ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಮಂಗಳೂರು ಹಿಂಸಾಚಾರದ ಸಮಗ್ರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಶೈಕ್ಷಣಿಕ ಪ್ರವಾಸ ಮುಗಿಸಿ ಮಕ್ಕಳನ್ನು ಇಳಿಸಿ ವಾಪಸಾಗುತ್ತಿದ್ದ ವೇಳೆ ಪಕ್ಕದಲ್ಲಿದ್ದ ಅಡಕೆ ತೋಟಕ್ಕೆ ಬಸ್ ನುಗ್ಗಿದ್ದು ಮರವೊಂದಕ್ಕೆ ಡಿಕ್ಕಿಯಾಗಿದೆ. 

ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿಈ ಸಂಬಂಧ ಪ್ರಕರಣ ದಾಖಲಾಗಿದೆ.