ಬೆಂಗಳೂರು(ಫೆ.20):ಬೆಂಗಳೂರು ಟರ್ಫ್‌ ಕ್ಲಬ್‌ (ಬಿಟಿಸಿ) ಮೇಲೆ ದಿಢೀರ್‌ ದಾಳಿ ನಡೆಸಿರುವ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಕೋಟ್ಯಂತರ ರುಪಾಯಿಯ ವಹಿವಾಟಿನ ಸಂಬಂಧ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪಾವತಿಸದೇ ವಂಚನೆ ಮಾಡುತ್ತಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಬುಧವಾರ ಈ ದಾಳಿ ನಡೆಸಲಾಗಿದೆ. ದಾಳಿ ವೇಳೆ ಲಕ್ಷಾಂತರ ರುಪಾಯಿ ನಗದು ಪತ್ತೆಯಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ ಎಂದು ವಾಣಿಜ್ಯ ತೆರಿಗೆ ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರು: ನಗರದಲ್ಲಿ ರೇಬಿಸ್‌ ಕಾಯಿಲೆ ಆತಂಕ

ಒಟ್ಟು 20 ಬುಕ್ಕಿಗಳು ನಡೆಸುತ್ತಿದ್ದ ಸ್ಟಾಲ್‌ಗಳ ದಾಳಿ ನಡೆಸಿದ್ದು, ಸ್ಟಾಲ್‌ಗಳಿಂದ ತೆರಿಗೆ ವಂಚನೆ ಮಾಡುತ್ತಿದ್ದ ಮಾಹಿತಿ ಕಲೆ ಹಾಕಿದೆ. ಈ ಸಂಬಂಧ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ವಾಣಿಜ್ಯ ತೆರಿಗೆ ಅಧಿಕಾರಿಗಳು ಹೇಳಿದ್ದಾರೆ.

ಸ್ಟಾಲ್‌ನಲ್ಲಿ ಬುಕ್ಕಿಗಳು ಕುದರೆ ರೇಸ್‌ಗೆ ಬರುವ ಪಂಟ​ರ್‍ಸ್ಗಳಿಂದ (ಬೆಟ್ಟಿಂಗ್‌ ಕಟ್ಟುವವರು) ಹಣ ಕಟ್ಟಿಸಿಕೊಳ್ಳುತ್ತಿದ್ದರು. ಪಂಟ​ರ್‍ಸ್ ಕಟ್ಟುವ ಹಣಕ್ಕೆ ಸೂಕ್ತ ರಶೀದಿ ನೀಡದೆ ಕಡಿಮೆ ಹಣ ಬರೆದುಕೊಡುತ್ತಿದ್ದರು. ಜಿಎಸ್‌ಟಿ ಕಾಯ್ದೆ ಪ್ರಕಾರ, ಅವರು ತೆ​ರಿ​ಗೆ ಪಾವತಿ ಮಾಡುತ್ತಿರಲಿಲ್ಲ. ಅಲ್ಲದೆ, ಯಾರಿಗೂ ಇನ್‌ವಾಯ್‌್ಸ ಕೂಡ ಕೊಡುತ್ತಿರಲಿಲ್ಲ. ಜಿಎಸ್‌ಟಿ ಜಾರಿಯಾದ ಬಳಿಕ ನಡೆಸಿರುವ ಒಟ್ಟು ವ್ಯವಹಾರ ಎಷ್ಟುಎಂಬ ಮಾಹಿತಿಯನ್ನು ಟಫ್‌ರ್‍ ಕ್ಲಬ್‌ ಆಡಳಿತ ಮಂಡಳಿ ಬಳಿ ಕೇಳಲಾಗಿತ್ತು. ಈ ಸಂಬಂಧ ಮಾಹಿತಿ ನೀಡುವಂತೆ ಸಮನ್ಸ್‌ ನೀಡಲಾಗಿತ್ತು. ಆದರೆ, ಯಾರೊಬ್ಬರು ವಿಚಾರಣೆಗೆ ಆಗಮಿಸಿರಲಿಲ್ಲ. ಮಾಹಿತಿ ಕೂ​ಡ ನೀಡಿರಲಿಲ್ಲ. ಹೀಗಾಗಿ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಟಫ್‌ರ್‍ ಕ್ಲಬ್‌ನಿಂದ ಬುಕ್ಕಿಗಳಿಗೆ ಪರವಾನಗಿ ನೀಡಲಾಗಿದೆ. ಬುಕ್ಕಿಗಳು ಸ್ಟಾಲ್‌ಗಳನ್ನು ಹಾಕಿಕೊಂಡು ವರ್ಷಕ್ಕೆ 21 ಕೋಟಿ ಕ್ಲಬ್‌ಗೆ ಕಟ್ಟುತ್ತಿದ್ದಾರೆ. ಆದರೆ, ಅವರು ಲೆಕ್ಕ ಪುಸ್ತಕಗಳನ್ನು ಸರಿಯಾಗಿ ನಿರ್ವಹಿಸುತ್ತಿರಲಿಲ್ಲ. ಅ​ಲ್ಲ​ದೆ, ತಮ್ಮ ವಹಿವಾಟಿನ ಮೇಲೆ ಸರಿಯಾಗಿ ಜಿಎಸ್‌ಟಿ ಕಟ್ಟುತ್ತಿರಲಿಲ್ಲ. ದಾಳಿ ವೇಳೆ ಸಾಕಷ್ಟುಲೆಕ್ಕ ಪುಸ್ತಕಗಳು ಸಿಕ್ಕಿವೆ. ಅವುಗಳನ್ನು ಜಪ್ತಿ ಮಾಡಿ ಪರಿಶೀಲನೆ ನಡೆಸಲಾಗುತ್ತಿದೆ. ಪುಸ್ತಕಗಳ ಪರಿಶೀಲನೆ ಬಳಿಕ ನಿಖರವಾಗಿ ಎಷ್ಟುಜಿಎಸ್‌ಟಿ ವಂಚನೆ ಆಗಿದೆ ಎಂಬುದು ಗೊ​ತ್ತಾ​ಗ​ಲಿ​ದೆ ಎಂದು ಹೇಳಿದರು.

ಹೆಚ್ಚಿನ ಬಾಡಿಗೆ ಆಮಿಷ: ಕಾರು ಒಯ್ದು ಮಾರಾಟ!

ನಿಯಮಬಾಹಿರ ಚಟುವಟಿಕೆಗಳು ಮತ್ತು ತೆರಿಗೆ ವಂಚನೆಗೆ ಸಂಬಂಧಿಸಿದಂತೆ ಕಳೆ​ದ ವರ್ಷ ಸಿಸಿಬಿ ಅಧಿಕಾರಿಗಳು ಟಫ್‌ರ್‍ ಕ್ಲಬ್‌ ಮೇಲೆ ಎರಡು ಬಾರಿ ದಾಳಿ ನಡೆಸಿದ್ದರು. ಈ ವೇಳೆ ಜಿಎಸ್‌ಟಿ ವಂಚನೆ ವ್ಯವಹಾರಗಳು ಕಂಡು ಬಂದಿದ್ದ ಕಾರಣ, ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ತೆರಿಗೆ ಇಲಾಖೆಗೆ ಸಿಸಿಬಿ ಅಧಿಕಾರಿಗಳು ಪತ್ರ ಬರೆದಿದ್ದರು.