Asianet Suvarna News Asianet Suvarna News

ಬೆಂಗಳೂರು: ನಗರದಲ್ಲಿ ರೇಬಿಸ್‌ ಕಾಯಿಲೆ ಆತಂಕ

ಬೆಂಗಳೂರಿನಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿ ರೇಬಿಸ್‌ ಕಾಯಿಲೆ ಆತಂಕ ಮೂಡಿರುವುದರಿಂದ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್‌ ಸದಸ್ಯ ಜಯಮಾಲಾ ಆಗ್ರಹಿಸಿದ್ದಾರೆ.

 

Rabies spreading in bangalore jayamala asks to take necessary steps
Author
Bangalore, First Published Feb 20, 2020, 10:51 AM IST

ಬೆಂಗಳೂರು(ಫೆ.20): ಬೆಂಗಳೂರಿನಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿ ರೇಬಿಸ್‌ ಕಾಯಿಲೆ ಆತಂಕ ಮೂಡಿರುವುದರಿಂದ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್‌ ಸದಸ್ಯ ಜಯಮಾಲಾ ಆಗ್ರಹಿಸಿದ್ದಾರೆ.

ಸದನದಲ್ಲಿ ವಿಷಯ ಪ್ರಸ್ತಾಪಿಸಿದ ಅವರು ಬೀದಿ ನಾಯಿಗಳಿಗೆ ರೇಬಿಸ್‌ ಲಸಿಕೆ ನೀಡದೇ ಇರುವುದು ಆತಂಕದ ವಿಷಯವಾಗಿದೆ. ಬೆಂಗಳೂರು ನಗರದಲ್ಲಿ ಈವರೆಗೆ ಕೇವಲ 28 ಸಾವಿರ ಬೀದಿ ನಾಯಿಗಳಿಗೆ ಮಾತ್ರ ರೇಬಿಸ್‌ ಲಸಿಕೆ ಹಾಕಲಾಗಿದೆ.

ಹೆಚ್ಚಿನ ಬಾಡಿಗೆ ಆಮಿಷ: ಕಾರು ಒಯ್ದು ಮಾರಾಟ!

ಇನ್ನೂ ಎರಡೂವರೆ ಲಕ್ಷ ನಾಯಿಗಳಿಗೆ ಲಸಿಕೆ ಹಾಕುವುದು ಬಾಕಿ ಇದೆ ಎಂದು ಬಿಬಿಎಂಪಿ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ. ಈಗಾಗಲೇ ರೇಬಿಸ್‌ನಿಂದಾಗಿ ಐದು ಜನರು ಸತ್ತಿದ್ದಾರೆ, ಈ ಹಿನ್ನೆಲೆಯಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

Follow Us:
Download App:
  • android
  • ios