ತಮಿಳುನಾಡಿನಲ್ಲಿ ನಮಗಿಂತ ಹೆಚ್ಚು ನೀರಿದೆ: ಅಶ್ವಥನಾರಾಯಣ
ಕಾವೇರಿ ನದಿ ನೀರಿಗೆ ಬೇಡಿಕೆ ಇಡುತ್ತಿರುವ ತಮಿಳುನಾಡು ತನ್ನ ನೆಲದಲ್ಲಿ ನಿಗದಿಗಿಂತ ಎರಡು-ಮೂರು ಪಟ್ಟು, ಹೆಚ್ಚು ವಿಸ್ತೀರ್ಣದಲ್ಲಿ ಅಕ್ರಮವಾಗಿ ಬೆಳೆ ಬೆಳೆಯುತ್ತಿರುವುದನ್ನು ಪ್ರಾಧಿಕಾರ ಮತ್ತು ಸುಪ್ರೀಂಕೋರ್ಟ್ ಗಮನಕ್ಕೆ ತರಬೇಕು ಎಂದು ವಿಧಾನಪರಿಷತ್ ಮಾಜಿ ಸದಸ್ಯ ಅಶ್ವಥನಾರಾಯಣ ಸರ್ಕಾರಕ್ಕೆ ಸಲಹೆ ನೀಡಿದರು.
ಮಂಡ್ಯ (ಅ.01): ಕಾವೇರಿ ನದಿ ನೀರಿಗೆ ಬೇಡಿಕೆ ಇಡುತ್ತಿರುವ ತಮಿಳುನಾಡು ತನ್ನ ನೆಲದಲ್ಲಿ ನಿಗದಿಗಿಂತ ಎರಡು-ಮೂರು ಪಟ್ಟು, ಹೆಚ್ಚು ವಿಸ್ತೀರ್ಣದಲ್ಲಿ ಅಕ್ರಮವಾಗಿ ಬೆಳೆ ಬೆಳೆಯುತ್ತಿರುವುದನ್ನು ಪ್ರಾಧಿಕಾರ ಮತ್ತು ಸುಪ್ರೀಂಕೋರ್ಟ್ ಗಮನಕ್ಕೆ ತರಬೇಕು ಎಂದು ವಿಧಾನಪರಿಷತ್ ಮಾಜಿ ಸದಸ್ಯ ಅಶ್ವಥನಾರಾಯಣ ಸರ್ಕಾರಕ್ಕೆ ಸಲಹೆ ನೀಡಿದರು.
ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯಿಂದ ನಡೆಯುತ್ತಿರುವ ಕಾವೇರಿ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಸ್ರೋಗೆ ಪತ್ರ ಬರೆದು ತಮಿಳುನಾಡು ಬೆಳೆ ಬೆಳೆಯುತ್ತಿರುವ ವಿಸ್ತೀರ್ಣದ ಸ್ಯಾಟಲೈಟ್ ಫೋಟೋಗಳನ್ನು ತೆಗೆಸಲಿ. ಡ್ರೋನ್ ಸರ್ವೇ ಮಾಡಿಸಲಿ. ನೀರನ್ನು ಸಂಗ್ರಹಿಸಿಡಲು ಅಣೆಕಟ್ಟೆಗಳು ಇಲ್ಲದಿರುವುದನ್ನು ಸಾಬೀತುಪಡಿಸಬೇಕು ಎಂದು ಆಗ್ರಹಿಸಿದರು.
ಪ್ರಧಾನಿ ಮೋದಿ ಜಗತ್ತೇ ಮೆಚ್ಚುವಂತಹ ನಾಯಕ: ಸಂಸದ ರಮೇಶ ಜಿಗಜಿಣಗಿ
ತಮಿಳುನಾಡಿನಲ್ಲಿ ನಮಗಿಂತ ಹೆಚ್ಚು ನೀರಿದೆ. ಅವರಿಗೆ ನೀರಿನ ಅವಶ್ಯಕತೆ ಇಲ್ಲ ಎಂದು ಸುಪ್ರೀಂಕೋರ್ಟ್ ಗೆ ಸರ್ಕಾರ ಕೂಡಲೇ ಅರ್ಜಿ ಹಾಕಬೇಕು. ಇಲ್ಲದಿದ್ದರೆ ರೈತರು ಮತ್ತು ಜನರ ಬೀದಿಗೆ ಬೀಳುವುದು ನಿಶ್ಚಿತ. ಸರ್ಕಾರ ನೀರು ಬಿಡುಗಡೆ ನಿರ್ಧಾರ ಮಾಡದೆ ಕಾನೂನಾತ್ಮಕ ಹೋರಾಟವನ್ನು ತೀವ್ರಗೊಳಿಸಬೇಕು ಎಂದು ಹೇಳಿದರು.
ನೀರು ಹಂಚಿಕೆ ವಿಷಯದಲ್ಲಿ ಸಂಸದರು ಏನೂ ಮಾಡಲಾಗುವುದಿಲ್ಲ. ಸರ್ಕಾರಗಳು ಎಚ್ಚೆತ್ತುಕೊಂಡು ಕೆಲಸ ಮಾಡಬೇಕು. 2007ರಲ್ಲಿ ಕಾವೇರಿ ಅಂತಿಮ ತೀರ್ಪು ಹೊರಬಿದ್ದಾಗ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರು. ಇದರ ಪರಿಣಾಮ 2018ರಲ್ಲಿ ರಾಜ್ಯಕ್ಕೆ 14.75 ಟಿಎಂಸಿ ನೀರು ಹೆಚ್ಚುವರಿಯಾಗಿ ದೊರಕಿತು. ಅದೇ ರೀತಿ ಸರ್ಕಾರಗಳು ಜಾಗ್ರತೆಯಿಂದ ಕೆಲಸ ಮಾಡಬೇಕೇ ವಿನಃ ಬೇರೆಯವರ ಮೇಲೆ ಗೂಬೆ ಕೂರಿಸಬಾರದು ಎಂದರು.
ಮನುಷ್ಯನ ಜೀವ ಮತ್ತು ಜೀವನ ಯಾವುದು ಶಾಶ್ವತವಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ
ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಮೇಕೆದಾಟು ಅಣೆಕಟ್ಟು ಯೋಜನೆಗೆ 9000 ಕೋಟಿ ರು. ವೆಚ್ಚದ ಅಂದಾಜುಪಟ್ಟಿಯನ್ನು ಪ್ರಾಧಿಕಾರದ ಸೂಚನೆಯಂತೆ ಕಳುಹಿಸಿದ್ದೆವು. ಕಾಂಗ್ರೆಸ್ ಸರ್ಕಾರ ನಮ್ಮ ನೀರು-ನಮ್ಮ ಹಕ್ಕು ಎಂದು ಪಾದಯಾತ್ರೆ ನಡೆಸಿತು. ಕಾಂಗ್ರೆಸ್ ಸರ್ಕಾರದ ಎಡವಟ್ಟಿನಿಂದ ಸಮಸ್ಯೆಗೆ ಪರಿಹಾರವೇ ಸಿಗದಂತಾಗಿದೆ ಎಂದು ನುಡಿದರು.ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ಮುಖಂಡರಾದ ಡಾ.ಇಂದ್ರೇಶ್, ಹೆಚ್.ಆರ್.ಅರವಿಂದ್ ಇತರರಿದ್ದರು.