ಬಿಎಸ್‌ಸಿ ಪದವಿಯಲ್ಲಿ ಸಹನಾ ಪಾಟಗೆ 17, ಹಾಗೂ ಭೀಮವ್ವಗೆ 16 ಚಿನ್ನದ ಪದಕಗಳು ಪಡೆದಿದ್ದು, ರಾಜ್ಯಪಾಲರಾದ ಥಾವರ್‌ಚಂದ್‌ ಗೆಹಲೋತ್‌ ಅವರು ಪದಕಗಳನ್ನು ಪ್ರದಾನ ಮಾಡಿದರು.

 ಬಾಗಲಕೋಟೆ : ಬೀದರ್‌ ತೋಟಗಾರಿಕೆ ಮಹಾವಿದ್ಯಾಲಯ ತೋಟಗಾರಿಕೆ ವಿವಿಯಲ್ಲಿ ಮಂಗಳವಾರ ನಡೆದ 14ನೇ ಘಟಿಕೋತ್ಸವದಲ್ಲಿ ಬಿಎಸ್‌ಸಿ ಪದವಿಯಲ್ಲಿ ಸಹನಾ ಪಾಟಗೆ 17, ಹಾಗೂ ಭೀಮವ್ವಗೆ 16 ಚಿನ್ನದ ಪದಕಗಳು ಪಡೆದಿದ್ದು, ರಾಜ್ಯಪಾಲರಾದ ಥಾವರ್‌ಚಂದ್‌ ಗೆಹಲೋತ್‌ ಅವರು ಪದಕಗಳನ್ನು ಪ್ರದಾನ ಮಾಡಿದರು.

ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹೊಳಲು ಗ್ರಾಮದ ಮಂಜುನಾಥ ಮತ್ತು ಶೋಭಾಳ ದಂಪತಿ ಪುತ್ರಿ. ಗ್ರಾಮದ ಟೈಲರ್ ದಂತಿಯ ವೃತ್ತಿಯಲ್ಲಿರುವ ಮಂಜುನಾಥ ಮತ್ತು ಶೋಭಾಳ ದಂಪತಿ ಪುತ್ರಿ ಸಹನಾ ಪಾಟಗೆ ಹೊಳಲು ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ಪ್ರೌಢಶಾಲಾ ವಿಭಾಗದಲ್ಲಿ 10ನೇ ತರಗತಿವರೆಗೆ ಅಧ್ಯಯನ ಮಾಡಿ, ಹೂವಿನ ಹಡಗಲಿಯ ಮ.ಮ.ಪಾಟೀಲ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಮುಗಿಸಿ ಪ್ರಸ್ತುತ ಬೀದರ್‌ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ತೋಟಗಾರಿಕೆ ಸ್ನಾತಕ ಪದವಿ ಅಧ್ಯಯನ ಮಾಡುತ್ತಿದ್ದಾರೆ.

ಭೀಮವ್ವ ಕೊಪ್ಪಳ ಜಿಲ್ಲೆಯ ತಳಬಾಳ ಗ್ರಾಮದ ಸಣ್ಣ ನಿಂಗಪ್ಪ ಮತ್ತು ಯಲ್ಲವ್ವ ದಂಪತಿ ಪುತ್ರಿಯಾಗಿದ್ದು, ತಂದೆ ಮೃತಪಟ್ಟಿದ್ದು, ತಾಯಿ ಕೃಷಿ ಮಾಡಿಕೊಂಡು ಮಗಳನ್ನು ಓದಿಸಿದ್ದಾರೆ. ಭೀಮವ್ವ ಬೇವೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 10ನೇ ತರಗತಿ, ನವಚೇತನ ಪಿಯು ಕಾಲೇಜಿನಲ್ಲಿ ಪಿಯುಸಿ ಹಾಗೂ ಸ್ನಾತಕ ಪದವಿಯನ್ನು ಬೀದರ್‌ ತೋಟಗಾರಿಕೆ ಮಹಾವಿದ್ಯಾಲಯಲ್ಲಿ ಅಧ್ಯಯನ ಮಾಡಿದ್ದಾರೆ.