UHS Bagalkot Counselling: ಬಾಗಲಕೋಟೆಯ ತೋಟಗಾರಿಕೆ ವಿವಿಯ ಖಾಲಿ ಸೀಟುಗಳಿಗೆ ಮಾರ್ಚ್ 10 ರಂದು ಕೌನ್ಸಿಲಿಂಗ್

2021-22 ನೇ ಶೈಕ್ಷಣಿಕ ವರ್ಷದಲ್ಲಿ ಖಾಲಿ ಇರುವ ಸೀಟುಗಳನ್ನು ಭರ್ತಿ ಮಾಡಲು ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಮಾರ್ಚ್ 10 ರಂದು   ಕೌನ್ಸಿಲಿಂಗ್ ನಡೆಸುತ್ತಿದೆ. 

Bagalkot University of Horticultural Sciences Counselling for various courses gow

ಬೆಂಗಳೂರು(ಮಾ.5): 2021-22 ನೇ ಶೈಕ್ಷಣಿಕ ವರ್ಷದಲ್ಲಿ ಖಾಲಿ ಇರುವ ಸೀಟುಗಳನ್ನು ಭರ್ತಿ ಮಾಡಲು ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು (Bagalkot University of Horticultural Sciences) ಕೌನ್ಸಿಲಿಂಗ್ ನಡೆಸುತ್ತಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೌನ್ಸಿಲಿಂಗ್ ನಲ್ಲಿ ಭಾಗವಹಿಸಿಲು ವಿಶ್ವವಿದ್ಯಾಲಯವು ಪ್ರಕಟಣೆ ಹೊರಡಿಸಿದೆ.  ಪಿಜಿ-ಸಿಇಟಿ (PG-CET) ಮತ್ತು ಐಸಿಎಆರ್‌ (ICAR) ಕೋಟಾದಡಿ ಖಾಲಿ ಇರುವ ಎಂಎಸ್ಸಿ (ತೋಟಗಾರಿಕೆ) ಹಾಗೂ ಪಿಹೆಚ್‌ಡಿ (PHD) ಪದವಿಯ ವಿವಿಧ ಕಾರ್ಯಕ್ರಮಗಳಲ್ಲಿ ಖಾಲಿ ಇರುವ ಸೀಟುಗಳಿಗೆ ಈ ಕೌನ್ಸಿಲಿಂಗ್ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಕೌನ್ಸಿಲಿಂಗ್ ಪ್ರಕ್ರಿಯೆ  ಮಾರ್ಚ್ 10 ರಂದು ನಡೆಯಲಿದೆ ಎಂದು ವಿವಿ ಕುಲಸಚಿವ ಡಾ ಟಿ.ಬಿ ಅಳ್ಳೊಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಮೇಲೆ ಉಲ್ಲೇಖಿಸಲಾಗಿರುವ ಕೋರ್ಸ್‌ಗಳಲ್ಲಿ ಆಸಕ್ತಿ ಇರುವ, ಅರ್ಹ ಅಭ್ಯರ್ಥಿಗಳು ಪ್ರವೇಶ ಪಡೆಯಲು  ಮಾರ್ಚ್ 10 ರಂದು ನಡೆಯಲಿರುವ ಕೌನ್ಸಿಲಿಂಗ್‌ಗೆ ಅಗತ್ಯ ದಾಖಲೆಗಳೊಂದಿಗೆ ಹಾಜರಾಗಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಆಡಳಿತ ಕಚೇರಿಗೆ ಖುದ್ದು ಭೇಟಿ ನೀಡಬಹುದು. ಇಲ್ಲವೇ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ತಾಣ https://www.horticulturedir.karnataka.gov.in ಗೆ ಭೇಟಿ ನೀಡಲು ಸೂಚಿಸಲಾಗಿದೆ.

Ukraine Educational Institutions: ರಷ್ಯಾ ದಾಳಿಯಿಂದ ಉಕ್ರೇನ್ ನಲ್ಲಿ 160 ಶಿಕ್ಷಣ ಸಂಸ್ಥೆಗಳು ನಾಶ!

ಕೌನ್ಸಿಲಿಂಗ್‌ಗೆ ಹಾಜರಾಗಲು ಇಚ್ಚಿಸುವ ಅಭ್ಯರ್ಥಿಗಳು ಈ ಕೆಳಗಿನ ದಾಖಲೆಗಳನ್ನು ಅಗತ್ಯವಾಗಿ ತಪ್ಪದೇ ತರಬೇಕು.

  • ಎಸ್‌ಎಸ್‌ಎಲ್‌ಸಿ, ಪಿಯುಸಿ ಅಂಕಪಟ್ಟಿ
  • ಪದವಿ ಅಂಕಪಟ್ಟಿ
  • ಪಿಜಿ-ಸಿಇಟಿ ರಿಸಲ್ಟ್‌ ದಾಖಲೆಗಳು
  • ಪಿಹೆಚ್‌ಡಿ ಎಂಟ್ರ್ಯಾನ್ಸ್‌ ಎಕ್ಸಾಮ್‌ ದಾಖಲೆಗಳು
  • ಎನ್‌ಇಟಿ / ಎಸ್‌ಎಲ್‌ಇಟಿ ದಾಖಲೆಗಳು
  • ಆಧಾರ್ ಕಾರ್ಡ್‌
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಇತರೆ ಅಗತ್ಯ ದಾಖಲೆಗಳು

NWDA Recruitment 2022: ರಾಷ್ಟ್ರೀಯ ಜಲಾನಯನ ಅಭಿವೃದ್ಧಿ ಏಜೆನ್ಸಿಯಲ್ಲಿ ಇಂಜಿನಿಯರ್ ಹುದ್ದೆಗೆ ನೇಮಕಾತಿ 

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ  ತಾಂತ್ರಿಕ ಅಧಿಕಾರಿ ಹುದ್ದೆಗೆ ನೇಮಕಾತಿ ಅಧಿಸೂಚನೆ: ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ (University of Agricultural Sciences Dharwad) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. 1  ತಾಂತ್ರಿಕ ಅಧಿಕಾರಿ (Technical Officer) ಹುದ್ದೆಯನ್ನು ಭರ್ತಿ ಮಾಡಲು ಮುಂದಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ https://uasd.edu/ ಗೆ ಭೇಟಿ ನೀಡಿ. ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಿಕೊಳ್ಳಬಹುದು. ಮಾರ್ಚ್ 9 ,2022ರಂದು  ನೇರ ಸಂದರ್ಶನ ನಡೆಯಲಿದೆ.

ಶೈಕ್ಷಣಿಕ ವಿದ್ಯಾರ್ಹತೆ: ಕೃಷಿ ವಿಶ್ವವಿದ್ಯಾಲಯ ಧಾರವಾಡ ನೇಮಕಾತಿಯ  ತಾಂತ್ರಿಕ ಅಧಿಕಾರಿ  ಹುದ್ದೆಗಳಿಗೆ  ನೇರ ಸಂದರ್ಶನದಲ್ಲಿ ಭಾಗವಹಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್/ಸಂಸ್ಥೆಯಿಂದ  ಕೃಷಿ ಪವನಶಾಸ್ತ್ರ (Agrometeorology)ದಲ್ಲಿ ಸ್ನಾತಕೋತ್ತರ ಪದವಿ  ಪೂರ್ಣಗೊಳಿಸಿರಬೇಕು.

ವಯೋಮಿತಿ : ಕೃಷಿ ವಿಶ್ವವಿದ್ಯಾಲಯ ಧಾರವಾಡ ನೇಮಕಾತಿಯ  ತಾಂತ್ರಿಕ ಅಧಿಕಾರಿ  ಹುದ್ದೆಗೆ   ನೇರ ಸಂದರ್ಶನದಲ್ಲಿ ಭಾಗವಹಿಸಲು ಇಚ್ಚಿಸುವ  ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ನಿಗದಿಪಡಿಸಲಾಗಿದೆ. ಸರಕಾರದ ನಿಯಮದ ಪ್ರಕಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ. 

ಸಂದರ್ಶನದ ವಿವರ: ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯೊಂದಿಗೆ ಅಗತ್ಯ ದಾಖಲೆಗಳ ಜೊತೆ ಮಾರ್ಚ್9, 2022 ರಂದು ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾಗುವ ನೇರ ಸಂದರ್ಶನಕ್ಕೆ ಪಾಲ್ಗೊಳ್ಳಲು ಈ ಕೆಳಗಿನ ವಿಳಾಸದಲ್ಲಿ ಇರತಕ್ಕದ್ದು,
ಸಹ ಸಂಶೋಧನಾ ನಿರ್ದೇಶಕರು,
ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರ,
ಕೃಷಿ ವಿಶ್ವವಿದ್ಯಾಲಯ,
ವಿಜಯಪುರ
ಕರ್ನಾಟಕ

Latest Videos
Follow Us:
Download App:
  • android
  • ios