Asianet Suvarna News

ಕೊಪ್ಪಳ: ಕೋವಿಡ್‌ ನಿಯಮ ಉಲ್ಲಂಘಿಸಿ ಕನಕಗಿರಿ ತಹಶೀಲ್ದಾರ್‌ ಬರ್ತ್‌ಡೇ ಸಂಭ್ರಮ

* ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣ 
* ಕಚೇರಿಯಲ್ಲೇ ತಹಶೀಲ್ದಾರ್‌ ರವಿ ಅಂಗಡಿ ಹುಟ್ಟುಹಬ್ಬ 
* ಹುಟ್ಟುಹಬ್ಬ ಆಚರಣೆಗೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ 

Tahashildar Celebrated Birthday in Violation of Covid Rules at Kanakagiri in Koppal grg
Author
Bengaluru, First Published Jun 13, 2021, 12:27 PM IST
  • Facebook
  • Twitter
  • Whatsapp

ಕೊಪ್ಪಳ(ಜೂ.13): ಕೋವಿಡ್‌ ನಿಯಮ ಉಲ್ಲಂಘಿಸಿ ತಹಶೀಲ್ದಾರ್‌ ಹುಟ್ಟುಹಬ್ಬ ಆಚರಿಸಿಕೊಂಡ ಘಟನೆ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ಇಂದು(ಭಾನುವಾರ) ನಡೆದಿದೆ. ಕನಕಗಿರಿಯ ತಾಲೂಕು ದಂಡಾಧಿಕಾರಿ ಕಚೇರಿಯಲ್ಲೇ ತಹಶೀಲ್ದಾರ್‌ ರವಿ ಅಂಗಡಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.  

ಕಚೇರಿ ರಜೆ ಇದ್ದರೂ ಬಾಗಿಲು ತೆಗೆದು ತಹಶೀಲ್ದಾರ್‌ ರವಿ ಅಂಗಡಿ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ.  ಸಾಮಾಜಿಕ ಅಂತರ ಇರದೆ, ಮಾಸ್ಕ್ ಹಾಕಿಕೊಳ್ಳದೆ ತಹಶೀಲ್ದಾರ್‌ ರವಿ ಅಂಗಡಿ ಕೇಕ್ ಕತ್ತರಿಸಿದ್ದಾರೆ. ಬರ್ತ್‌ಡೇ ಸಂಭ್ರಮದಲ್ಲಿ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಕೂಡ ಭಾಗಿಯಾಗಿದ್ದಾರೆ. 

ಬಿಜೆಪಿ ಹೈಕಮಾಂಡ್‌ ಲೋ ಕಮಾಂಡ್‌ ಆಗಿರುವಂತೆ ಕಾಣ್ತಿದೆ: ಭಯ್ಯಾಪುರ

ಕೊರೋನಾ ನಿಯಮ ಪಾಲಿಸಬೇಕಾದವರಿಂದಲೇ ಕೋವಿಡ್‌ ನಿಯಮ ಉಲ್ಲಂಘನೆಯಾಗಿದೆ. ತಹಶೀಲ್ದಾರ್‌ ಹುಟ್ಟುಹಬ್ಬ ಆಚರಣೆಗೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಲಾಕ್‌ಡೌನ್‌ ನಿಯಮ ಉಲ್ಲಂಘಿಸಿ ಹುಟ್ಟುಹಬ್ಬ ಆಚರಿಸಿಕೊಂಡ ತಹಶೀಲ್ದಾರ್‌ ರವಿ ಅಂಗಡಿ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿದ್ದಾರೆ. 
 

Follow Us:
Download App:
  • android
  • ios