Asianet Suvarna News

ಬಿಜೆಪಿ ಹೈಕಮಾಂಡ್‌ ಲೋ ಕಮಾಂಡ್‌ ಆಗಿರುವಂತೆ ಕಾಣ್ತಿದೆ: ಭಯ್ಯಾಪುರ

* ಬಿಜೆಪಿಯವರದು ಡಬಲ್‌ ಶೂನ್ಯ
* ಯಡಿಯೂರಪ್ಪ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಒಂದಿಲ್ಲೊಂದು ಸಮಸ್ಯೆ 
* ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನುದಾನ, ಆಕ್ಸಿಜನ್‌ ನೀಡುವಲ್ಲಿ ಅನ್ಯಾಯ

Kushtagi Congress MLA Amaregouda Bayyapur Slam BJP grg
Author
Bengaluru, First Published Jun 12, 2021, 12:26 PM IST
  • Facebook
  • Twitter
  • Whatsapp

ಕೊಪ್ಪಳ(ಜೂ.12): ಕಾಂಗ್ರೆಸ್‌ ಸಾಧನೆ ಶೂನ್ಯ ಎಂದು ಅಧಿಕಾರಕ್ಕೆ ಬಂದಿರುವ ಬಿಜೆಪಿಯವರದು ಡಬಲ್‌ ಶೂನ್ಯ ಸಾಧನೆ ಎಂದು ಕುಷ್ಟಗಿ ಶಾಸಕ ಅಮರೇಗೌಡ ಭಯ್ಯಾಪುರ ಕಿಡಿಕಾರಿದ್ದಾರೆ. 

ಕೊಪ್ಪಳದಲ್ಲಿ ಪೆಟ್ರೋಲ್‌ ಬೆಲೆ ಏರಿಕೆಯ ವಿರುದ್ಧ ಪೆಟ್ರೋಲ್‌ ಹಾಕಿ ಪ್ರತಿಭಟನೆ ನಡೆಸಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು. ಇವರು ಅಧಿಕಾರಕ್ಕೆ ಬಂದ ಮೇಲೆ ಮಾಡಿದ್ದಾದರೂ ಏನು? ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ, ಆಕ್ಸಿಜನ್‌ ನೀಡುವಲ್ಲಿ ಅನ್ಯಾಯ ಮಾಡಿದೆ. ಇದ್ಯಾವುದನ್ನೂ ಸ್ಥಳೀಯ ಬಿಜೆಪಿ ನಾಯಕರು ಕೇಳುತ್ತಲೇ ಇಲ್ಲ ಎಂದು ಕಿಡಿಕಾರಿದ್ದಾರೆ. 

'ಕಾಂಗ್ರೆಸ್‌ನಿಂದ ಬ್ರಾಹ್ಮಣರಿಗೆ ಅವಹೇಳನ'

ಯಡಿಯೂರಪ್ಪ ಅವರು ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಒಂದಿಲ್ಲೊಂದು ಸಮಸ್ಯೆ ಎದುರಾಗಿವೆ. ಈಗ ಅವರನ್ನು ಅಧಿಕಾರದಿಂದ ಇಳಿಸಲು ಕಸರತ್ತು ನಡೆಸಿದೆ. ಆದರೆ, ರಾಜ್ಯದಲ್ಲಿ ಯಡಿಯೂರಪ್ಪ ಇಲ್ಲದೆ ಬಿಜೆಪಿ ಇಲ್ಲ ಎಂದ ಅವರು, ನೋ ಯಡಿಯೂರಪ್ಪ ನೋ ಬಿಜೆಪಿ ಎಂದರು. 

ಬಿಜೆಪಿ ಹೈಕಮಾಂಡ್‌ ಏನು ಮಾಡುತ್ತಿದೆಯೋ ಗೊತ್ತಿಲ್ಲ. ಅದು ಲೋ ಕಮಾಂಡ್‌ ಆಗಿರುವಂತೆ ಕಾಣುತ್ತಿದೆ. ತಮ್ಮ ಕೈಗೊಂಬೆಯಾಗಿರುವವರನ್ನು ಮುಖ್ಯಮಂತ್ರಿ ಮಾಡಲು ಹೊರಟಂತೆ ಇದು. ಅದು ಅವರ ಪಕ್ಷದ ಆಂತರಿಕ ವಿಷಯ. ಆದರೆ, ರಾಜ್ಯದ ಜನರು ಅನುಭವಿಸುತ್ತಿರುವ ಯಾತನೆಗೆ ಸರ್ಕಾರ ಸ್ಪಂದನೆ ಮಾಡದೆ ಇರುವುದು ದುರಂತ ಎಂದರು.
 

Follow Us:
Download App:
  • android
  • ios