ತುಮಕೂರು (ನ.16):  ತಾಲೂಕಿನ ಗೌಜುಗಲ್ಲು ಗ್ರಾಮದಲ್ಲಿ ಆಂಜನೇಯ ಸ್ವಾಮಿದಶಮಾನೋತ್ಸವ ಕಾರ್ಯಕ್ರಮದಲ್ಲಿ ಮೂರು ಮಠಾಧೀಶ್ವರರಿಂದ ಡಾ.ಜಿ.ಪರಮೇಶ್ವರ್‌ ಮುಖ್ಯಮಂತ್ರಿ ಪದವಿ ಬಗ್ಗೆ ಒಂದೇ ಧ್ವನಿಗೊಡಿಸಿದರು. ತುಮಕೂರು ತಿಗಳರ ಸಂಸ್ಥಾನದ ಜ್ಞಾನಾನಂದಗಿರಿ ಸ್ವಾಮೀಜಿ, ತುಮಕೂರು ಜಿಲ್ಲೆ 2013ರ ಚುನಾವಣೆಯಲ್ಲಿ ಡಾ.ಜಿ.ಪರಮೇಶ್ವರ್‌ ಸೊಲಿನಿಂದ ಮಹತ್ತರ ಪದವಿ ಮತ್ತು ಅಭಿವೃದ್ಧಿಯನ್ನು ಕಳೆದುಕೊಂಡಿತ್ತು ಎಂದರೆ, ಎಲೆರಾಂಪುರದ ಕುಂಚಿಟಿಗ ಮಹಾಸಂಸ್ಥಾನದ ಹನುಮಂಥನಾಥ ಸ್ವಾಮೀಜಿ ಮಾತನಾಡಿ, ಮುಂಬರುವ ವಿಧಾನ ಸಭಾ ಚುನಾವಣೆಯಲ್ಲೂ ಪರಮೇಶ್ವರ್‌ ಕೊರಟಗೆರೆ ಕ್ಷೇತ್ರದಿಂದ ಮುಖ್ಯಮಂತ್ರಿ ಪದವಿಗೆ ಏರಿ ಜಿಲ್ಲೆಯ ಅಭಿವೃದ್ಧಿಗೊಳಿಸಲಿ ಎಂದರು.

ಪ್ರಮಾದ ಮರುಕಳಿಸದಂತೆ ಕಾಂಗ್ರೆಸ್‌ನಲ್ಲಿ ತಂತ್ರ

ಸಿದ್ದರಬೆಟ್ಟದ ಶ್ರೀ ವೀರಭದ್ರಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಡಾ.ಜಿ.ಪರಮೇಶ್ವರ್‌ ಮುಖ್ಯಮಂತ್ರಿಯಾಗಿ ಬಯಲು ಸೀಮೆಯ ಈ ಭಾಗಕ್ಕೆ ಹೆಚ್ಚಿನ ಶಾಶ್ವತ ನೀರಾವರಿ ಯೋಜನೆಗಳನ್ನು ನೀಡಿದರೆ ಈ ಭಾಗದ ಜನತೆಯ ಬದುಕು ಹಸನಾಗುತ್ತದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಡಾ.ಜಿ.ಪರಮೇಶ್ವರ್‌, ಕ್ಷೇತ್ರದ ಜನರ ಆಶೀರ್ವಾದದಿಂದ ಉಪಮುಖ್ಯಮಂತ್ರಿಯಾಗಿ ಸೇವೆ ಮಾಡಿದೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಪದವಿ ದೊರೆತಲ್ಲಿ ರಾಜ್ಯಕ್ಕೆ ಮತ್ತು ಕ್ಷೇತ್ರಕ್ಕೆ ನಿಸ್ವಾರ್ಥ ಹಾಗೂ ಪ್ರಮಾಣಿಕ ಸೇವೆಯನ್ನು ಮಾಡುವುದಾಗಿ ಈ ಮೂರು ಮಠಾಧೀರುಗಳ ನಂಬಿಕೆಯನ್ನು ಉಳಿಸಿಕೊಳ್ಳುವ ಭರವಸೆ ನೀಡಿದರು.