ಕೋಲಾರ(ಮಾ.04): ಶಿವರಾತ್ರಿ ಸಂದರ್ಭದಲ್ಲಿಯೇ ಊರಿನಿಂದ ನಾಪತ್ತೆಯಾಗಿದ್ದ ಸ್ವಾಮೀಜಿ ಸಂಸಾರಿಯಾಗಿ ಪತ್ತೆಯಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ತಾಲೂಕು ಹೊಳಲಿ ಗ್ರಾಮದಿಂದ ಯುವತಿ ಜೊತೆ ನಾಪತ್ತೆಯಾಗಿದ್ದ ಸ್ವಾಮಿ ವಿವಾಹಿತನಾಗಿ ಪತ್ತೆಯಾಗಿದ್ದಾನೆ.

ಕಾಣಿಯಾಗಿದ್ದ ಸನ್ಯಾಸಿ ಸಂಸಾರಿಯಾಗಿ ಕಂಡು ಬಂದಿದ್ದು, ಫೆ.27 ರಂದು ಕೋಲಾರ ತಾಲೂಕು ಹೊಳಲಿ ಗ್ರಾಮದಿಂದ ಯುವತಿ ಜೊತೆ ನಾಪತ್ತೆಯಾಗಿದ್ದ. ಹೊಳಲಿ ಭೀಮಲಿಂಗೇಶ್ವರ ಸೇವಾಶ್ರಮದ ಪೀಠಾಧಿಪತಿ ದತ್ತಾತ್ರೇಯ ಅವದೂತ ಸ್ವಾಮಿ ಇದೀಗ ವಿವಾಹಿತನಾಗಿದ್ದಾನೆ.

ಮಠ ಸ್ಥಾಪಿಸಲು ಬಂದ ಸ್ವಾಮೀಜಿ ಯುವತಿಯೊಂದಿಗೆ ಪರಾರಿ

ಅದೇ ಗ್ರಾಮದ 20 ವರ್ಷದ ಶ್ಯಾಮಲ ಎಂಬ ಯುವತಿ ಜೊತೆಗೆ ಸ್ವಾಮೀಜಿ ಪರಾರಿಯಾಗಿದ್ದ. ಈ ಬಗ್ಗೆ ಯುವತಿಯ ಪೋಷಕರು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸದ್ಯ ಯುವತಿಯನ್ನು ಮದುವೆಯಾಗಿರುವ ಸ್ವಾಮಿ ಪೊಲೀಸರ ವಶದಲ್ಲಿದ್ದಾನೆ. ಸ್ವಾಮೀಜಿ ಮಂಗಳೂರು ಬಳಿ ಯವತಿಯೊಂದಿಗೆ ಸಿಕ್ಕಿಬಿದ್ದಿದ್ದಾನೆ.

ಮಾರ್ಚ್ 4ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ