Asianet Suvarna News Asianet Suvarna News

ಸುವರ್ಣ ನ್ಯೂಸ್ ನಿರೂಪಕಿ ಭಾವನಾ ನಾಗಯ್ಯಾಗೆ 'ಮಾಧ್ಯಮ ರತ್ನ' ಪ್ರಶಸ್ತಿ ಪ್ರದಾನ

* ಸುವರ್ಣ ನ್ಯೂಸ್ ನಿರೂಪಕಿ ಭಾವನಾಗೆ ಮಾಧ್ಯಮ ರತ್ನ ಪ್ರಶಸ್ತಿ
* ಮುದ್ದೇಬಿಹಾಳ ತಾಲೂಕಾ ಘಟಕ ಪ್ರತಿವರ್ಷ ಕೊಡಮಾಡುವ ಪುರಸ್ಕಾರ
* ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು

Suvarna news Anchor Journalist Bhavana nagaiah honoured with muddebihal-madhyama-ratna-award mah
Author
Bengaluru, First Published Aug 7, 2021, 4:32 PM IST
  • Facebook
  • Twitter
  • Whatsapp

ವಿಜಯಪುರ(ಆ. 07) ಏಷ್ಯಾನೆಟ್ ಸುವರ್ಣ ನ್ಯೂಸ್ ನಿರೂಪಕಿ ಭಾವನಾ ನಾಗಯ್ಯರಿಗೆ "ಮಾಧ್ಯಮ ರತ್ನ" ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ನಿಂದ ಮಾಧ್ಯಮ ರತ್ನ ಪ್ರಶಸ್ತಿ ಪುರಸ್ಕಾರ ಪ್ರದಾನ ಮಾಡಲಾಗಿದೆ.

ಮುದ್ದೇಬಿಹಾಳ ತಾಲೂಕಾ ಘಟಕದಿಂದ ಪ್ರತಿವರ್ಷ ಕೊಡಮಾಡುವ "ಮಾಧ್ಯಮ ರತ್ನ" ಪ್ರಶಸ್ತಿಗೆ ಭಾವನಾ ಆಯ್ಕೆಯಾಗಿದ್ದರು. ಪತ್ರಕರ್ತ ದಿ. ನಾಗರಾಜ್ ಬಿ ಜಮಖಂಡಿ ಅವರ ಸ್ಮರಣಾರ್ಥ ಈ ಪ್ರಶಸ್ತಿ ನೀಡಿಕೊಂಡು ಬರಲಾಗಿದೆ.

ರಾಜೀವ್ ಗಾಂಧಿ ಖೆಲ್ ರತ್ನ ಪ್ರಶಸ್ತಿ ಇನ್ನು ಮುಂದೆ ಇಲ್ಲ!

ವಿಜಯಪುರ ಜಿ. ಮುದ್ದೇಬಿಹಾಳ ಪಟ್ಟಣದ ರಾಘವೇಂದ್ರ ಕಲ್ಯಾಣ  ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.  ಪತ್ರಕರ್ತ ದಿನಾಚರಣೆ ನಿಮಿತ್ತ ಹಮ್ಮಿಕೊಮಡಿದ್ದ ಸಮಾರಂಭದಲ್ಲಿ ಗೌರವ ನೀಡಲಾಯಿತು.

ಭಾವನಾ ಅವರ ವಿಶೇಷ ಪೆನ್ಸಿಲ್ ಆರ್ಟ್ ಬಿಡಿಸಿ ಬಸವರಾಜ್ ಹಡಪದ್ ಮೆಚ್ಚುಗೆಗೆ ಪಾತ್ರವಾದರು. ಜತೆಯಲ್ಲಿ  ಹಿರಿಯ ಪತ್ರಕರ್ತ ಸಂಗಮೇಶ ಚೂರಿರಿಗು ಮಾಧ್ಯಮ ಸಾಧನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಾಡೋಜ ಮಹೇಶ ಜೋಶಿ, ತಾಳಿಕೋಟೆ ಖಾಸ್ಗತೇಶ್ವರ ಸ್ವಾಮೀಜಿ ವಿಜಯಪುರ ಜಿ.ಪಂ ಆರ್ ಎಸ್ ಪಾಟೀಲ್ ಕುಚಬಾಳ, ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಸೇರಿದಂತೆ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗಿಯಾಗಿದ್ದರು. 

 

Follow Us:
Download App:
  • android
  • ios