Belagavi: ಸಂಕ್ರಮಣದ ಆಪತ್ತಿನಲ್ಲಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತ ಸ್ಥಳದಲ್ಲಿ ವಾಮಾಚಾರದ ಅನುಮಾನ
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕಾರು ಅಪಘಾತವಾದ ಸ್ಥಳದಲ್ಲಿ ವಾಮಾಚಾರ ನಡೆದಿರುವ ಶಂಕೆ ವ್ಯಕ್ತವಾಗಿದೆ. ಅಪಘಾತ ಸ್ಥಳದ ಬಳಿ ಮಡಿಕೆ, ನಿಂಬೆಹಣ್ಣು, ದಾರದ ಉಂಡಿಯಂತಹ ವಸ್ತುಗಳು ಪತ್ತೆಯಾಗಿವೆ. ಇತ್ತೀಚೆಗಷ್ಟೇ ಹೊಸ ಕಾರನ್ನು ಪಡೆದಿದ್ದ ಲಕ್ಷ್ಮೀ ಹೆಬ್ಬಾಳ್ಕರ್, ಅದಕ್ಕೆ ವಿಜಯದಶಮಿಯಂದು ಪೂಜೆ ಸಲ್ಲಿಸಿದ್ದರು.
ಬೆಳಗಾವಿ (ಜ.14): ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕಾರು ಅಪಘಾತವಾದ ಸ್ಥಳದಲ್ಲಿ ವಾಮಾಚಾರ ನಡೆದಿತ್ತಾ ಎನ್ನುವ ಅನುಮಾನ ವ್ಯಕ್ತವಾಗಿದೆ. ಕಾರು ಅಪಘಾತ ನಡೆದ ಕೆಲವೇ ಹೆಜ್ಜೆಗಳ ದೂರದಲ್ಲಿ ಮಡಿಕೆ, ನಿಂಬೆ ಹಣ್ಣು , ದಾರದ ಉಂಡಿ,ಕುಂಬಳಕಾಯಿ ಇಟ್ಟು ವಾಮಾಚಾರ ನಡೆಸಲಾಗಿದೆ. ಇದರ ನಡುವೆ ಅಪಘಾತಕ್ಕೂ ವಾಮಾಚಾರಕ್ಕೂ ಲಿಂಕ್ ಇದ್ಯಾ ಎನ್ನುವ ಅನುಮಾನ ಬಂದಿದೆ. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಕ್ರಾಸ್ ಬಳಿ ಅಪಘಾತ ನಡೆದಿದೆ. ಅಪಘಾತ ನಡೆದ 50 ಅಡಿಯಲ್ಲಿ ಈ ವಾಮಾಚಾರ ನಡೆದಿದೆ.
ಲಕ್ಕಿ ನಂಬರ್ ಕಾರು ಪಡೆದಿದ್ದ ಲಕ್ಷ್ಮೀ: ಇತ್ತೀಚೆಗಷ್ಟೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ವವರಿಗೆ ಹೊಸ ಸರ್ಕಾರಿ ಕಾರು ಹಂಚಿಕೆಯಾಗಿತ್ತು. ತಮ್ಮ ಲಕ್ಕಿ ಕಲರ್ ಹಾಗೂ ಲಕ್ಕಿ ನಂಬರ್ ಕಾರನ್ನು ಲಕ್ಷ್ಮೀ ಹೆಬ್ಬಾಳ್ಕರ್ ಅಲಾಟ್ ಮಾಡಿಸಿಕೊಂಡಿದ್ದರು. ಕಪ್ಪು ಬಣ್ಣದ ಟೊಯೋಟಾ ಇನೋವಾ ಹೈಕ್ರಾಸ್ ಕಾರು ತಮಗೆ ಬೇಕು ಎಂದು ಅವರು ಅಲಾಟ್ ಮಾಡಿಸಿಕೊಂಡಿದ್ದರು. ಅದರೊಂದಿಗೆ ಕೆಎ 01 ಜಿಎ 9777 ಸಂಖ್ಯೆಯ ನಂಬರ್ ಪ್ಲೇಟ್ ಕೂಡ ಪಡೆದಿದ್ದರು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರಿಗೆ ಸೇರಿದ ಎಲ್ಲಾ ಕಾರುಗಳು ಕಪ್ಪು ಬಣ್ಣದ್ದು ಹಾಗೂ 9777 ಸಂಖ್ಯೆಯ ಕಾರುಗಳಾಗಿವೆ. ವಿಜಯದಶಮಿಯಂದು ಬೆಂಗಳೂರಲ್ಲಿ ಕಾರಿಗೆ ಪೂಜೆ ಮಾಡಿಸಿದ್ದರು. ಸರ್ಕಾರಿ ಕಾರು ಚಾಲಕ ಶಿವು ಜೊತೆಗೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಪೂಜೆ ಮಾಡಿಸಿದ್ದರು.
ಸಚಿವೆ ಲಕ್ಷ್ಮೀ ಹೆಬ್ಬಾಳಕರ ಕಾರು ಅಪಘಾತ ಪ್ರಕರಣದಲ್ಲಿ ಕಿತ್ತೂರು ಪೊಲೀಸರ ಸ್ಥಳ ಭೇಟಿ ಮಾಡಿ ಪರಿಶೀಲನೆ ಮಾಡಿದ್ದಾರೆ. ಕಿತ್ತೂರು ಸಿಪಿಐ ಶಿವಾನಂದ, ಪಿಎಸ್‌ಐ ಪ್ರವೀಣ ಸ್ಥಳಕ್ಕೆ ಭೇಟಿ ನೀಡಿ ಅಪಘಾತ ಸ್ಥಳದ ಪರಿಶೀಲನೆ ಮಾಡಿದ್ದಾರೆ.
Belagavi: ಲಕ್ಷ್ಮೀ ಹೆಬ್ಬಾಳ್ಕರ್ ಆರೋಗ್ಯ ವಿಚಾರಿಸಿದ ಪತಿ ರವೀಂದ್ರ; ಚೇತರಿಕೆಗೆ ಹಾರೈಸಿದ ಸಿಟಿ ರವಿ!
ಆಸ್ಪತ್ರೆಗೆ ಬಂದ ಚನ್ನರಾಜ್ ಹಟ್ಟಿಹೊಳಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತ ಪ್ರಕರಣದಲ್ಲಿ, ಎಂ ಎಲ್ ಸಿ ಚನ್ನರಾಜ್ ಹಟ್ಟಿಹೊಳಿ ಆಸ್ಪತ್ರೆಗೆ ಬಂದು ಆರೋಗ್ಯ ವಿಚಾರಿಸಿದ್ದಾರೆ. ಬೆಳಗ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚನ್ನರಾಜ್ ಹಟ್ಟಿಹೊಳಿ ವಾಪಸ್ ಆಗಿದ್ದರು. ಮನೆಯಿಂದ ಮತ್ತೆ ಆಸ್ಪತ್ರೆಗೆ ಬಂದು ಅಕ್ಕನ ಆರೋಗ್ಯ ವಿಚಾರಿಸಿದ್ದಾರೆ.
ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಲಕ್ಕಿ ನಂಬರ್ ಕಾರಿನಿಂದಲೇ ಎದುರಾಯ್ತಾ ಸಂಕಷ್ಟ? ಬಣ್ಣ-ಸಂಖ್ಯೆ ರಹಸ್ಯ
'ಸಂಕ್ರಾಂತಿ ದಾಟುವ ವರೆಗೂ ಎಚ್ಚರವಾಗಿರಿ ಎಂದು ಕೆಲ ಜ್ಯೋತಿಷಿಗಳು ಹೇಳಿದ್ದರು. ಸಂಕ್ರಾಂತಿ ದಾಟುವವರೆಗೆ ಮನೆಯಲ್ಲಿ ಏನಾದರೂ ದುರ್ಘಟನೆ ಆಗುವ ಅಪಾಯವಿದೆ ಎಂದು ಎಚ್ಚರಿಸಿದ್ದರು' ಎಂದು ಚನ್ನರಾಜ್ ಹಟ್ಟಿಹೊಳಿ ಹೇಳಿದ್ದಾರೆ. ಆದರೂ ಕೂಡ ಈ ಅಚಾತುರ್ಯ ನಮ್ಮಿಂದಲೇ ಆಗಿದ್ದಕ್ಕೆ ಬೇಸರವಾಗಿದೆ ಎಂದು ಹೇಳಿದ್ದಾರೆ.