Belagavi: ಲಕ್ಷ್ಮೀ ಹೆಬ್ಬಾಳ್ಕರ್‌ ಆರೋಗ್ಯ ವಿಚಾರಿಸಿದ ಪತಿ ರವೀಂದ್ರ; ಚೇತರಿಕೆಗೆ ಹಾರೈಸಿದ ಸಿಟಿ ರವಿ!

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕಾರು ಅಪಘಾತಕ್ಕೊಳಗಾಗಿದ್ದು, ಅವರಿಗೆ ಬೆನ್ನುಮೂಳೆಯಲ್ಲಿ ಗಾಯಗಳಾಗಿವೆ. ಚಿಕಿತ್ಸೆಗಾಗಿ ಬೆಳಗಾವಿಯ ವಿಜಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಂದು ತಿಂಗಳ ಕಾಲ ವಿಶ್ರಾಂತಿ ಬೇಕಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.

 

Ravindra Hebbalkar Visit To Hospital to See lakshmi hebbalkar CT Ravi Tweet san

ಬೆಳಗಾವಿ (ಜ.14): ಭೀಕರ ರಸ್ತೆ ಅಪಘಾತದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆನ್ನುಮೂಳೆಯ ಎಲ್‌1 ಹಾಗೂ ಎಲ್‌4 ಅಲ್ಲಿ ಹೇರ್‌ಲೈನ್‌ ಫ್ರಾಕ್ಚರ್‌ ಆಗಿರುವುದಾಗಿ ವೈದ್ಯರು ತಿಳಿಸಿದ್ದು, ಒಂದು ತಿಂಗಳು ವಿಶ್ರಾಂತಿ ಬೇಕಾಗಬಹುದು ಎಂದಿದ್ದಾರೆ. ಇನ್ನು ಆಸ್ಪತ್ರೆಯಲ್ಲಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರನ್ನು ನೋಡಲು ಪತಿ ರವೀಂದ್ರ ಹೆಬ್ಬಾಳ್ಕರ್‌ ಆಗಮಿಸಿದ್ದಾರೆ. ಖಾನಾಪುರದಿಂದ ಬೆಳಗಾವಿಯ ವಿಜಯ ಆಸ್ಪತ್ರೆಗೆ ಆಗಮಿಸಿ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಆರೋಗ್ಯ ವಿಚಾರಿಸಿದ್ದಾರೆ. ಅನಾರೋಗ್ಯದ ಮಧ್ಯೆಯೂ ಪತ್ನಿ ಹೆಬ್ಬಾಳ್ಕರ್ ಆರೋಗ್ಯ ವಿಚಾರಿಸಲು ರವೀಂದ್ರ ದೌಡಾಯಿಸಿದ್ದಾರೆ. ಇನ್ನು ಲಕ್ಷ್ಮೀ ಹೆಬ್ಬಾಳ್ಕರ್‌ ಶೀಘ್ರ ಗುಣಮುಖರಾಗಲಿ ಎಂದು ಸಿಟಿ ರವಿ ಟ್ವೀಟ್‌ ಮೂಲಕ ಹಾರೈಸಿದ್ದಾರೆ. ಇತ್ತೀಚೆಗೆ ಸಿಟಿ ರವಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್‌ ನಡುವಿನ ಅಶ್ಲೀಲ ಪದದ ಗಲಾಟೆ ವಿಚಾರ ಸಾಕಷಟು ಸುದ್ದಿಯಾಗಿತ್ತು. ಅದರ ನಡುವೆಯೂ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಶೀಘ್ರ ಚೇತರಿಕೆಗೆ ಹಾರೈಸಿದ್ದಾರೆ.

'ಇಂದು ಬೆಳಗಾವಿಯ ಕಿತ್ತೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಅವರ ಸಹೋದರ ಶೀಘ್ರ ಗುಣಮುಖರಾಗಲಿ ಎಂದು ಶ್ರೀ ದೇವರಲ್ಲಿ ಪ್ರಾರ್ಥಿಸುವೆ' ಎಂದು ಬಿಜೆಪಿ ಎಂಎಲ್‌ಸಿ ಸಿಟಿ ರವಿ ಟ್ವೀಟ್‌ ಮಾಡಿದ್ದಾರೆ.ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆರೋಗ್ಯ ವಿಚಾರಿಸಲು ಪೊಲೀಸ್ ಕಮೀಷನರ್ ಯುಡಾ ಮಾರ್ಟಿನ್‌ ಕೂಡ ಆಗಮಿಸಿದ್ದಾರೆ.

ಕಿತ್ತೂರ ತಾಲೂಕಿನ ಅಂಬಡಗಟ್ಟಿ ಬಳಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತ ಪ್ರಕರಣದಲ್ಲಿ ಬೆಳಗಾವಿಯಲ್ಲಿ ಎಸ್ಪಿ ಡಾ. ಭೀಮಾಶಂಕರ ‌ಗುಳೇದ್ ಪ್ರತಿಕ್ರಿಯೆ ನೀಡಿದ್ದಾರೆ. 'ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಅಪಘಾತವಾದ ಕಾರು ಸರ್ಕಾರದ್ದು. ಸರ್ಕಾರಿ ಚಾಲಕನೇ ಕಾರನ್ನು ಡ್ರೈವ್‌ ಮಾಡುತ್ತಿದ್ದ. ಬೆಂಗಾವಲು ಪಡೆ ವಾಹನ ಕ್ಯಾಂಟರ್ ಮುಂದಿತ್ತು. ಅಡ್ಡ ಬಂದ ಯಾವುದೋ ಪ್ರಾಣಿ ಜೀವ ಉಳಿಸಲು ಮತ್ತು ಮುಂದಿದ್ದ ಕ್ಯಾಂಟರ್ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಅಪಘಾತವಾಗಿದೆ. ಕಿತ್ತೂರು ತಾಲ್ಲೂಕಿನ ಅಂಬಡಗಟ್ಟಿ ಕ್ರಾಸ್ ಬಳಿ 5 ಗಂಟೆಗೆ ಅವಘಡ ಸಂಭವಿಸಿದೆ. ಅಡ್ಡ ಬಂದ ಪ್ರಾಣಿ ಜೀವ ಉಳಿಸಲು ಚಾಲಕನ ನಿಯಂತ್ರಣ ತಪ್ಪಿದೆ ಎಂದು ಹೇಳಿದ್ದಾರೆ.

ಬೆಳಗಾವಿ: ಲಕ್ಷ್ಮಿ ಹೆಬ್ಬಾಳ್ಕರ್ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತ, ಸಚಿವೆಗೆ ಗಂಭೀರ ಗಾಯ!

ಸರ್ವೀಸ್ ರಸ್ತೆಯ ಪಕ್ಕದ ಗಿಡಕ್ಕೆ ಕಾರು ಡಿಕ್ಕಿ ಹೊಡೆದಿದೆ, ಇದೊಂದು ದುರಾದೃಷ್ಟ ಘಟನೆ. ಈಗಾಗಲೇ ಬೆಳಗಾವಿಯ ವಿಜಯಾ ಆಸ್ಪತ್ರೆಗೆ ಸಚಿವರನ್ನು ದಾಖಲಿಸಲಾಗಿದೆ. ಇಲ್ಲಿನ ವೈದ್ಯರ ಜೊತೆ ನಾನು ಮಾತಾಡಿದ್ದು, ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕತ್ತಿಗೆ ನೋವಾಗಿದ್ದರಿಂದ ಎರಡು ದಿನ‌ ಅವರು ಆಸ್ಪತ್ರೆಯಲ್ಲೆ ಇರುವ ಅಗತ್ಯವಿದೆ. ಇನ್ನು ಚನ್ನರಾಜ ಹಟ್ಟಿಹೊಳಿ ಅವರಿಗೆ ತಲೆಗೆ‌ ಸಣ್ಣ ಗಾಯವಾಗಿದ್ದು, ಇಲ್ಲಿ‌ ಚಿಕಿತ್ಸೆ ಪಡೆದಿರುವ ಅವರು ಮನೆಗೆ ಹೋಗಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅದೇ ರೀತಿ ಚಾಲಕ ಮತ್ತು ಗನ್ ಮ್ಯಾನ್‌ಗೂ ಸಣ್ಣಪುಟ್ಟ ಗಾಯಗಳಾಗಿವೆ. ಆಸ್ಪತ್ರೆಗೆ ದಾಖಲಾಗುವಷ್ಟು ಗಾಯಗಳಾಗಿಲ್ಲ. ಹಿರಿಯ ಅಧಿಕಾರಿಗಳು ಮತ್ತು ಮೇಲಾಧಿಕಾರಿಗಳಿಗೆ ಘಟನೆ ಕುರಿತು ಮಾಹಿತಿ ನೀಡಿದ್ದೇನೆ. ಕಿತ್ತೂರು ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಸಿಟಿ ರವಿ-ಹೆಬ್ಬಾಳ್ಕರ್‌ ಅವಾಚ್ಯ ಶಬ್ದ ಪ್ರಕರಣ; ಸಿಐಡಿ ತನಿಖೆಗೆ ಆಕ್ಷೇಪ ಎತ್ತಿದ್ದ ಹೊರಟ್ಟಿಗೆ ಗೃಹ ಸಚಿ ತಿರುಗೇಟು!

Latest Videos
Follow Us:
Download App:
  • android
  • ios