ಉಡುಪಿ(ಫೆ.08): ಅನಾರೋಗ್ಯದ ಕಾರಣಕ್ಕೆ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಾಗಿರುವ 3 ಮಂದಿ ರೋಗಿಗಳಿಗೆ ಕೊರೋನಾ ವೈರಸ್‌ ತಗುಲಿದೆ ಎಂಬ ವದಂತಿಗಳು ಹರಡಿದ್ದು, ಆದರೆ ಅವರು ಶೀತ ಮತ್ತು ಕೆಮ್ಮು ತೊಂದರೆಯಿಂದ ದಾಖಲಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

"

ಈ ಮೂರು ಮಂದಿ ಇತ್ತೀಚೆಗೆ ಚೀನಾ ಪ್ರವಾಸಕ್ಕೆ ಹೋಗಿದ್ದರು. ಆಸ್ಪತ್ರೆಗೆ ದಾಖಲಾದವರಲ್ಲಿ ಇಬ್ಬರು ಪುರುಷರು ಮತ್ತು ಒಂದು ಮಗು ಸೇರಿದೆ. ಅವರ ಜತೆ ಮಗುವಿನ ತಾಯಿ ಕೂಡ ಚೀನಾಕ್ಕೆ ತೆರಳಿದ್ದರು. ಆದರೆ ಅವರಿಗೆ ಯಾವುದೇ ಅನಾರೋಗ್ಯ ಲಕ್ಷಣ ಕಂಡುಬಂದಿಲ್ಲ.

ಕೊರೋನಾ ಬಗ್ಗೆ ಮೊದಲೇ ಎಚ್ಚರಿಸಿದ್ದ ವೈದ್ಯ ಬಲಿ?

ಮೂವರು, ಮೊದಲು ಖಾಸಗಿ ವೈದ್ಯರಿಂದ ಚಿಕಿತ್ಸೆ ಪಡೆದಿದ್ದರು. ಆದರೆ ಅವರು ಚೀನಾ ಪ್ರವಾಸಕ್ಕೆ ತೆರಳಿದ್ದರು ಎಂದು ತಿಳಿದ ಮೇಲೆ ಖಾಸಗಿ ವೈದ್ಯರು, ಜಿಲ್ಲಾಸ್ಪತ್ರೆಯಲ್ಲಿ ಕೊರೋನಾ ಚಿಕಿತ್ಸೆಗಾಗಿಯೇ ಮುಂಜಾಗರೂಕ ಕ್ರಮವಾಗಿ ನಿರ್ಮಿಸಿರುವ ಪ್ರತ್ಯೇಕ ವಾರ್ಡ್‌ಗೆ ಕಳುಹಿಸಿದ್ದಾರೆ.

ಕೊರೋನಾ: ಭಾರತದ 2ನೇ ಕೇಸ್‌ ಪತ್ತೆ!

ಅಲ್ಲಿ ಅವರ ಕಫ ಮತ್ತು ರಕ್ತವನ್ನು ಸಂಗ್ರಹಿಸಿ ಬೆಂಗಳೂರಿನ ವೈದ್ಯಕೀಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಲ್ಲಿಂದ ವರದಿ ಬರಲು 3 ದಿನ ಬೇಕಿದೆ. ಈ ಮೂವರಲ್ಲಿ ಜ್ವರ, ನೋವು ಮೊದಲಾದ ಕೊರೋನಾದ ಇತರ ಗುಣಗಳು ಪತ್ತೆಯಾಗದಿರುವುದರಿಂದ ಇದು ಬಹುತೇಕ ಸಾಮಾನ್ಯ ಕೆಮ್ಮು ಮತ್ತು ಶೀತದ ಪ್ರಕರಣಗಳಾಗಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಕೆಎಂಸಿಯಲ್ಲಿ ಇಲ್ಲ!

ಈ ನಡುವೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿಯೂ ಕೊರೋನಾ ರೋಗಿಗಳು ದಾಖಲಾಗಿದ್ದರೆ ಎಂಬ ವದಂತಿಗಳು ಹರಡಿತ್ತು. ಆದರೆ ಇದನ್ನು ಅಲ್ಲಿನ ವೈದ್ಯಕೀಯ ಅಧೀಕ್ಷಕರು ನಿರಾಕರಿಸಿದ್ದು, ಇದುವರೆಗೆ ಯಾವುದೇ ಸಂಶಯಾಸ್ಪದ ರೋಗಿಗಳೂ ದಾಖಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.