ಹುಬ್ಬಳ್ಳಿ: ಕೊರೋನಾ ಪಾಸಿಟಿವ್‌ ತುಂಬು ಗರ್ಭಿಣಿಗೆ ಶಸ್ತ್ರಚಿಕಿತ್ಸೆ, ಮುದ್ದಾದ ಮಗುವಿಗೆ ಜನ್ಮ ನೀಡಿದ ತಾಯಿ..!

ಮೂರೂವರೆ ಕೆಜಿ ತೂಕದ ಮಗುವಿಗೆ ಜನ್ಮ ನೀಡಿದ ಉಮಚಗಿ ಗ್ರಾಮದ ತಾಯಿ| ಹುಬ್ಬಳ್ಳಿ ತಾಲೂಕು ಉಮಚಗಿ ಗ್ರಾಮದ ತುಂಬು ಗರ್ಭಿಣಿಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾದ ಕಿಮ್ಸ್‌ ವೈದ್ಯರ ತಂಡ|

Surgery for pregnant women at KIMS in Hubballi

ಧಾರವಾಡ(ಜೂ.29): ಕೋವಿಡ್‌ ಪಾಸಿಟಿವ್‌ ಸೋಂಕು ಕಾಣಿಸಿಕೊಂಡಿರುವ, ಹುಬ್ಬಳ್ಳಿ ತಾಲೂಕು ಉಮಚಗಿ ಗ್ರಾಮದ ತುಂಬು ಗರ್ಭಿಣಿಗೆ (ಪಿ-10800, 25 ವರ್ಷ) 39 ವಾರಗಳು ಹಾಗೂ 4 ದಿನಗಳು ಪೂರ್ಣಗೊಂಡಿದ್ದರೂ ಸಹಜ ಹೆರಿಗೆ ಸಾಧ್ಯವಿಲ್ಲದ ಲಕ್ಷಣಗಳಿದ್ದುದರಿಂದ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸುವಲ್ಲಿ ಕಿಮ್ಸ್‌ ವೈದ್ಯರ ತಂಡ ಯಶಸ್ವಿಯಾಗಿದೆ.

ಕಿಮ್ಸ್‌ನಲ್ಲಿ ಭಾನುವಾರ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆಯಾಗಿದ್ದು, ಮೂರೂವರೆ ಕೆಜಿ ತೂಕದ ಹೆಣ್ಣು ಮಗುವಿಗೆ ತಾಯಿ ಜನ್ಮ ನೀಡಿದ್ದಾಳೆ. ವಿಭಾಗದ ಮುಖ್ಯಸ್ಥರಾದ ಡಾ. ಕಸ್ತೂರಿ ಡೋಣಿಮಠ, ಶಸ್ತ್ರಚಿಕಿತ್ಸಕ ಡಾ. ವೈ.ಎಂ. ಕಬಾಡಿ, ಅರವಳಿಕೆ ತಜ್ಞೆ ಡಾ. ವೀಣಾ, ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಾದ ಡಾ. ಅಕ್ಷತಾ ನಿಂಗನೂರೆ, ಡಾ. ಸಹನಾ, ಡಾ. ರೂಪಾ, ನರ್ಸಿಂಗ್‌ ವಿಭಾಗದ ಶ್ವೇತಾ, ರೇಷ್ಮಾ, ಸಹಾಯಕ ಸಿಬ್ಬಂದಿ ಕಳಕಪ್ಪ ಮತ್ತಿತರರ ತಂಡ ಈ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ.

ನವಲಗುಂದ: ಕೊರೋನಾ ಹಾಟ್‌ಸ್ಪಾಟ್‌ ಮೊರಬದಲ್ಲಿ ಕಟ್ಟುನಿಟ್ಟಿನ ಕ್ರಮ

ಕಿಮ್ಸ್‌ ತಜ್ಞರ ಕಾರ್ಯಕ್ಕೆ ಜಿಲ್ಲಾಧಿಕಾರಿ ದೀಪಾ ಚೋಳನ್‌, ಕಿಮ್ಸ್‌ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
 

Latest Videos
Follow Us:
Download App:
  • android
  • ios