ಮೈಸೂರು : ಚಾಮುಂಡೇಶ್ವರಿ ಸೇರಿ 93 ದೇವಾಲಯ ನೆಲಸಮಕ್ಕೆ ಸುಪ್ರೀಂ ಆದೇಶ
- ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆ ಮೈಸೂರಿನ ನಗರದ ಹಲವು ದೇವಾಲಯಗಳಿಗೆ ನೆಲಸಮ ಭೀತಿ
- 93 ದೇವಾಲಯಗಳನ್ನು ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಮೈಸೂರು ಮಹಾನಗರ ಪಾಲಿಕೆ ಪಟ್ಟಿ
ಮೈಸೂರು (ಸೆ.12): ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆ ಮೈಸೂರಿನ ನಗರದ ಹಲವು ದೇವಾಲಯಗಳಿಗೆ ನೆಲಸಮ ಭೀತಿ ಎದುರಾಗಿದೆ.
93 ದೇವಾಲಯಗಳನ್ನು ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಮೈಸೂರು ಮಹಾನಗರ ಪಾಲಿಕೆ ಪಟ್ಟಿ ಮಾಡಿದೆ. ಇದರಲ್ಲಿ ಪ್ರಸಿದ್ಧ ಅಗ್ರಹಾರದ ನೂರೊಂದು ಗಣಪತಿ ದೇವಾಲಯವೂ ಸೇರಿದೆ.
ಇದೇ ತಿಂಗಳ 22ರಂದು ಮೈಸೂರು ನಗರದಲ್ಲಿರುವ 93 ದೇವಾಲಯಗಳ ತೆರವು ಕಾರ್ಯ ಆರಂಭವಾಗಲಿದೆ.
ಅನಧಿಕೃತ ದರ್ಗಾ ಮುಟ್ಟಲು ನಿಮ್ಮ ತೊಡೆ ನಡುಗುತ್ತಾ? ಕೆಡಿಪಿ ಸಭೆಯಲ್ಲಿ ಪ್ರತಾಪ್ ಸಿಂಹ ಗರಂ
ಚಾಮುಂಡೇಶ್ವರಿ ದೇವಾಲಯ, ವಿದ್ಯಾರಣ್ಯಪುರಂ ರಾಮಲಿಂಗೇಶ್ವರ ದೇವಾಲಯ, ಇಟ್ಟಿಗೆಗೂಡು ದುರ್ಗಾ ಪರಮೇಶ್ವರಿ, ನ್ಯೂ ಸಯ್ಯಾಜಿರಾವ್ ಪಂಚಮುಖಿ ಗಣಪತಿ ದೇವಾಲಯ, ವಿಜಯನಗರ ಚಾಮುಂಡೇಶ್ವರಿ ದೇವಾಲಯಗಳೂ ಸುಪ್ರೀಂಕೋರ್ಟ್ ನೀಡಿದ ಪಟ್ಟಿಯಲ್ಲಿವೆ.
ಇದರಿಂದ ಹಲವು ವಿರೋಧ ವ್ಯಕ್ತವಾಗಿದ್ದು, ದೇವಾಲಯಗಳ ತೆರವಿಗೆ ಸ್ಥಳೀಯರು ಅಸಮಾಧಾನ ಹೊರಹಾಕಿದ್ದು, ಪ್ರತಿಭಟನೆಯನ್ನೂ ನಡೆಸಿದ್ದಾರೆ.