Asianet Suvarna News Asianet Suvarna News

Bengaluru: ಪಾರಿವಾಳ ಹಿಡಿಯಲು ಹೋಗಿ ವಿದ್ಯುತ್‌ ತಗುಲಿದ್ದ ಸುಪ್ರೀತ್‌ ಸಾವು

ಮಹಾಲಕ್ಷ್ಮೀ ಲೇಔಟ್‌ನಲ್ಲಿ ಪಾರಿವಾಳ ಹಿಡಿಯಲು ಹೋಗಿ ವಿದ್ಯುತ್‌ ಪ್ರವಹಿಸಿ ಗಂಭೀರವಾಗಿ ಗಾಯಗೊಂಡಿದ್ದ ಸುಪ್ರೀತ್‌ ಇಂದು ಬೆಳಗ್ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಇದ್ದ ಒಬ್ಬ ಮಗನನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

Supreet died after getting electrocuted while catching pigeons
Author
First Published Dec 4, 2022, 2:04 PM IST

ಬೆಂಗಳೂರು (ಡಿ.4): ನಗರದ ಮಹಾಲಕ್ಷ್ಮೀ ಲೇಔಟ್‌ ವಿಧಾನಸಭಾ ಕ್ಷೇತ್ರದ ನಂದಿನಿ ಲೇಔಟ್‌ ಬಳಿಯ ವಿಜಯಾನಂದ ನಗರದಲ್ಲಿ ಇತ್ತೀಚೆಗೆ ಪಾರಿವಾಳ ಹಿಡಿಯಲು ಹೋಗಿದ್ದ ಸುಪ್ರೀತ್‌ (11) ಮತ್ತು ಚಂದನ್‌ (10) ಬಾಲಕರಿಗೆ ವಿದ್ಯುತ್‌ ಪ್ರವಹಿಸಿ ಗಂಭೀರವಾಗಿ ಗಾಯಗೊಂಡಿದ್ದರು. ಬಾಲಕರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಶೇ.80 ಸುಟ್ಟ ಗಾಯದಿಂದ ಬಳಲುತ್ತಿದ್ದ ಸುಪ್ರೀತ್‌ ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ 7.30ಕ್ಕೆ ಮೃತಪಟ್ಟಿದ್ದಾನೆ. ಮೃತದೇಹವನ್ನು ವಿಜಯಾನಂದ ನಗರದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ದಂಪತಿಗೆ ಒಬ್ಬನೇ ಮಗ: ಬೆಂಗಳೂರಿನ ನಂದಿನಿ ಲೇಔಟ್‌'ನ ವಿಜಯಾನಂದ ನಗರದಲ್ಲಿ ಪಾರಿವಾಳ ಹಿಡಿಯೋ ಭರದಲ್ಲಿ ಕಬ್ಬಿಣದ ಸರಳು ಬಳಸಿದ್ದರಿಂದ, ಈ ಸರಳು ಹೈಟೆನ್ಷನ್‌ ವಿದ್ಯುತ್‌ ತಂತಿಗೆ ತಗುಲಿ ಕರೆಂಟ್‌ ಶಾಕ್‌ ಹೊಡೆದಿತ್ತು. ಮುಖ ಮತ್ತು ತಲೆ ಹೊರತುಪಡಿಸಿ ದೇಹದ ಎಲ್ಲ ಭಾಗಗಳು ಸುಟ್ಟಿದ್ದವು. ಶುಕ್ರವಾರ ಇಬ್ಬರೂ ಬಾಲಕರು ಮನೆಯವರನ್ನು ಗುರುತಿಸಿ ಕೊಂಚ ಮಾತನಾಡಿದ್ದರು. ಆದರೆ, ವೈದ್ಯರು ಬಾಲಕರ ಆರೋಗ್ಯದ ಬಗ್ಗೆ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದಿದ್ದರು.  ಈಗ ಸುಪ್ರೀತ್‌ ಸಾವನ್ನಪ್ಪಿದ್ದಾನೆ. ಇನ್ನು 10ವರ್ಷದ ಚಂದನ್‌ ಸ್ಥಿತಿಯೂ ಗಂಭೀರವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

Bengaluru:ಪಾರಿವಾಳ ಹಿಡಿಯಲು ಹೋಗಿ ಕರೆಂಟ್‌ ಶಾಕ್‌: ಓರ್ವ ಬಾಲಕ ಸಾವು

ಅಂತಿಮ ದರ್ಶನಕ್ಕೆ ವ್ಯವಸ್ಥೆ: ವಿಜಯಾನಂದ ನಗರದ ನಿವಾಸಿಗಳಾದ ಮಂಜುನಾಥ್ ಮತ್ತು ಪ್ರೇಮ ದಂಪತಿಗೆ ಸುಪ್ರೀತ್‌ ಒಬ್ಬನೇ ಮಗನಾಗಿದ್ದನು. ಆfದರೆ, ವಿದ್ಯುತ್‌ ಅವಘಡದ ದುರಂತದಿಂದ ಇದ್ದೊಬ್ಬ ಮಗ ಬೆಳಗ್ಗೆ 7.30 ಕ್ಕೆ ಸಾವನ್ನಪ್ಪಿದ್ದಾನೆ. ತಂದೆ ತಾಯಿ ಹಾಗೂ ಕುಟುಂಬ ಸದಸ್ಯರ ಆಕ್ರಂದನ ಮುಗಿಲುಮುಟ್ಟಿದೆ.ಆಸ್ಪತ್ರೆಯಲ್ಲಿ ಮೃತ ಬಾಲಕ ಸುಪ್ರೀತ್ ಮರಣೋತ್ತರ ಪರೀಕ್ಷೆ ಮಾಡಿ, ಕುಟಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗಿತ್ತು. ಕುಟುಂಬಸ್ಥರು ಮಹಾಲಕ್ಷ್ಮಿ ಲೇಔಟ್ ನ ವಿಜಯಾನಂದ ನಗರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದಾರೆ. ಸಂಜೆ ಸುಮ್ಮನಹಳ್ಳಿ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸುವುದಾಗಿ ತಿಳಿಸಿದ್ದಾರೆ. ಇನ್ನು ಚಿಕಿತ್ಸೆ ವೇಳೆ ಆಸ್ಪತ್ರೆಗೆ ಭೇಟಿ ನೀಡಿದ್ದ ಸಚಿವ ಗೋಪಾಲಯ್ಯ ಮಗುವಿನ ಚಿಕಿತ್ಸಾ ವೆಚ್ಚವನ್ನು ಭರಿಸಿದ್ದರು. ಇನ್ನು ಅಂತಿಮ ದರ್ಶನದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ. 

Follow Us:
Download App:
  • android
  • ios